ದುಬೈ: 2020ರ ಟಿ20 ವಿಶ್ವಕಪ್ಗೆ ಅಭಿಮಾನಿಗಳು ಈಗಾಗಲೇ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಒಂದು ವೇಳೆ 2021ರ ವಿಶ್ವಕಪ್ ಆಯೋಜನೆಯ ಹಕ್ಕನ್ನು ಆಸ್ಟ್ರೇಲಿಯವೇ ಪಡೆದರೆ ಅದೇ ಟಿಕೆಟ್‌ಗಳನ್ನು ಮಾನ್ಯ ಮಾಡಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ವಿಶ್ವಕಪ್ ಟೂರ್ನಿಯನ್ನು ಸೋಮವಾರ ಐಸಿಸಿ ಮುಂದೂಡಿದೆ. ಆದರೆ ಈ ವಿಶ್ವಕಪ್ಗಾಗಿ ಲಕ್ಷಾಂತರ ಅಭಿಮಾನಿಗಳು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಐಸಿಸಿ, 2021 ರ ವಿಶ್ವಕಪ್‌ನ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಂಡರೆ, ಬುಕ್ ಆಗಿರುವ ಟಿಕೆಟ್‌ಗಳನ್ನು ಮಾನ್ಯ ಮಾಡಲಾಗುವುದು. ಮತ್ತು ಒಂದು ವೇಳೆ 2022ರ ವಿಶ್ವಕಪ್ ಆತಿಥ್ಯವನ್ನು ವಹಿಸಿಕೊಂಡರೆ ಟಿಕೆಟ್ ಮೊತ್ತವನ್ನು ಮರಳಿಸುವುದಾಗಿ ತಿಳಿಸಿದೆ.
ಸತತ ಎರಡು ಟಿ20 ವಿಶ್ವಕಪ್ಗಳು 2021 ಹಾಗೂ 2022 ರಲ್ಲೂ, 2023ಕ್ಕೆ ಏಕದಿನ ವಿಶ್ವಕಪ್ ನಿಗದಿ ಮಾಡಲಾಗಿದೆ. ಎರಡು ಟಿ20 ವಿಶ್ವಕಪ್ ಆ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳ ಮಧ್ಯೆ ನಡೆಯಲಿದೆ. ಇನ್ನು ಮಾರ್ಚ್ನಲ್ಲಿ ಆರಂಭವಾಗಬೇಕಿದ್ದ ಏಕದಿನ ವಿಶ್ವಕಪ್ಕೂಡ ಅಕ್ಟೋಬರ್ಗೆ ಮುಂದೂಡಲ್ಪಟ್ಟಿದೆ.
2021ರ ವಿಶ್ವಕಪ್ ಆತಿಥ್ಯ ಈಗಾಗಲೇ ಭಾರತಕ್ಕೆ ನೀಡಲಾಗಿದೆ. ಆದರೆ ಇದರ ಬಗ್ಗೆ ಐಸಿಸಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಒಂದು ವೇಳೆ ಆಸ್ಟ್ರೇಲಿಯಾ 2021ರ ವಿಶ್ವಕಪ್ ಆಯೋಜಿಸಿದರೆ ಈಗಾಗಲೇ ಬುಕ್ ಆಗಿರುವ ಟಿಕೆಟ್ಗಳು ಸ್ವಯಂಚಾಲಿತವಾಗಿ ಹೊಸ ದಿನಾಂಕಗಳಿಗೆ ಅಪ್ಡೇಟ್ ಆಗಲಿವೆ ಎಂದು ಐಸಿಸಿ ವೆಬ್ಸೈಟ್ಗೆ ತಿಳಿಸಿದೆ.
ಆಸ್ಟ್ರೇಲಿಯಾಕ್ಕೆ 2022 ಆತಿಥ್ಯವಹಿಸಬೇಕಾಗಿ ಬಂದರೆ ಅಭಿಮಾನಿಗಳು ಡಿಸೆಂಬರ್ 15ರವರೆಗೆ ರೀಫಂಡ್ ಮನವಿಯನ್ನು ಸಲ್ಲಿಸಬಹುದಾಗಿದೆ ಎಂದು ಐಸಿಸಿ ಹೇಳಿದೆ.