ETV Bharat / sports

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಕೊರೊನಾ: ಐಸೋಲೇಷನ್​ಗೊಳಗಾದ ಜೊತೆಯಲ್ಲಿದ್ದ ಆಟಗಾರರು ​

author img

By

Published : Nov 19, 2020, 5:26 PM IST

ಕೋವಿಡ್-19 ಪ್ರೋಟೋಕಾಲ್​ಗಳ ಪ್ರಕಾರ ಮೂವರು ಆಟಗಾರರು ತಕ್ಷಣದಲ್ಲೇ ಕೇಪ್​ಪೇಟ್​ನಲ್ಲಿ ಐಸೋಲೇಷನ್​ಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರು ಲಕ್ಷಣ ರಹಿತರಾಗಿದ್ದರೂ ಸಿಎಸ್ಎ ವೈದ್ಯಕೀಯ ತಂಡ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಕೊರೊನಾ
ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಕೊರೊನಾ

ಕೇಪ್​ಟೌನ್​: ಮುಂಬರುವ ಇಂಗ್ಲೆಂಡ್​ ವಿರುದ್ಧದ ಸರಣಿಗಾಗಿ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್​ ಖಚಿತಪಡಿಸಿದೆ.

ನವೆಂಬರ್​ 27ರಂದು ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳುವ ಸೀಮಿತ ಓವರ್​ಗಳಿಗಾಗಿ 50 ಮಂದಿಗೆ ಕೋವಿಡ್ ಆರ್​ಟಿಪಿಸಿಆರ್​ ಟೆಸ್ಟ್​ಗಳನ್ನು ನಡೆಸಲಾಗಿದ್ದು, ಅದರಲ್ಲಿ ಒಬ್ಬ ಆಟಗಾರನಿಗೆ ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಕ್ರಿಕೆಟಿಗರು ಕೂಡ ಐಸೋಲೇಷನ್​ಗೆ ಒಳಗಾಗಿದ್ದಾರೆ ಎಂದು ಸಿಎಸ್​ಎ ಹೇಳಿಕೆ ಬಿಡುಗಡೆ ಮಾಡಿದೆ.

ಕೋವಿಡ್-19 ಪ್ರೋಟೋಕಾಲ್​ಗಳ ಪ್ರಕಾರ ಮೂವರು ಆಟಗಾರರು ತಕ್ಷಣದಲ್ಲೇ ಕೇಪ್​ಪೇಟ್​ನಲ್ಲಿ ಐಸೋಲೇಷನ್​ಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರು ಲಕ್ಷಣ ರಹಿತರಾಗಿದ್ದರೂ ಸಿಎಸ್ಎ ವೈದ್ಯಕೀಯ ತಂಡ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಮೂವರು ಆಟಗಾರರಿಗೆ ಯಾವುದೇ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ. ಆದರೆ ವಾರಾಂತ್ಯದಲ್ಲಿ ನಡೆಯಲಿರುವ ಇಂಟ್ರಾ ಸ್ಕ್ವಾಡ್ ತಂಡಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಇಬ್ಬರು ಹೊಸ ಆಟಗಾರರನ್ನು ಹೆಸರಿಸುವುದಾಗಿ ಮಂಡಳಿ ತಿಳಿಸಿದೆ.

ಆದರೆ ಕೋವಿಡ್ ಸೋಂಕು ತಗುಲಿರುವ ಆಟಗಾರ ಮತ್ತು ಐಸೋಲೇಷನ್​ಗಳೊಗಾಗಿರುವ ಮತ್ತಿಬ್ಬರು ಆಟಗಾರರ ಬಗ್ಗೆ ಸಿಎಸ್​ಎ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.