ETV Bharat / sports

Watch: ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ ತಿಸರ ಪೆರೆರಾ!

ಶ್ರೀಲಂಕಾ ಆರ್ಮಿ ತಂಡದ ನಾಯಕನಾಗಿರುವ ಪೆರೆರಾ ಬ್ಲೋಮಿಫೀಲ್ಡ್​ ಕ್ರಿಕೆಟ್​ ಮತ್ತು ಆಥ್ಲೆಟಿಕ್​ ಕ್ಲಬ್​ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ 52 ರನ್​ ಚಚ್ಚಿದರು.

ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ ತಿಸರ ಪೆರೆರಾ

author img

By

Published : Mar 29, 2021, 9:05 PM IST

ಕೊಲೊಂಬೊ: ಆಲ್​ರೌಂಡರ್​ ತಿಸರ ಪೆರೆರಾ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸುವ ಮೂಲಕ, ಈ ಸಾಧನೆ ಮಾಡಿದ ಮೊದಲ ಶ್ರೀಲಂಕಾ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಲಿಸ್ಟ್​ ಎ ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ 31 ವರ್ಷದ ಪೆರೆರಾ ಈ ಸಾಧನೆ ಮಾಡಿದರು. ಶ್ರೀಲಂಕಾ ಆರ್ಮಿ ತಂಡದ ನಾಯಕನಾಗಿರುವ ಅವರು ಬ್ಲೋಮಿಫೀಲ್ಡ್​ ಕ್ರಿಕೆಟ್​ ಮತ್ತು ಆಥ್ಲೆಟಿಕ್​ ಕ್ಲಬ್​ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ 52 ರನ್​ ಕಲೆ ಹಾಕಿದರು.

ಇವರ ಇನ್ನಿಂಗ್ಸ್​ನಲ್ಲಿ 8 ಸಿಕ್ಸರ್​ ಒಳಗೊಂಡಿತ್ತು. ಲಿಸ್ಟ್​ ಎ ಕ್ರಿಕೆಟ್​ನಲ್ಲಿ ವೇಗದ ಅರ್ಧಶತಕ ಸಿಡಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ದಾಖಲೆಗೂ ಪೆರೆರಾ ಪಾತ್ರರಾದರು. 2005ರಲ್ಲಿ ಮಾಜಿ ಆಲ್​ರೌಂಡರ್​ ಕೌಶಲ್ಯ ವೀರರತ್ನೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.

ಇನ್ನಿಂಗ್ಸ್​ ಮುಕ್ತಾಯಕ್ಕೆ ಕೇವಲ 20 ಎಸೆತಗಳಿರುವಾಗ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಪೆರೆರಾ ಅರೆಕಾಲಿಕ ಸ್ಪಿನ್ನರ್​ ದಿಲ್ಹಾನಾ ಕೂರೆ ಅವರ ಓವರ್​ನ ಎಲ್ಲಾ ಎಸೆತಗಳನ್ನು ಸಿಕ್ಸರ್ ​ಗಟ್ಟಿದರು. ಈ ಮೂಲಕ, ವೃತ್ತಿಪರ ಕ್ರಿಕೆಟ್​ನಲ್ಲಿ 6 ಬಾಲ್‌ಗೆ 6 ಸಿಕ್ಸರ್ ಸಿಡಿಸಿದ ವಿಶ್ವದ 9ನೇ ಬ್ಯಾಟ್ಸ್​ಮನ್​ ಎಂಬ ದಾಖಲೆಯೂ ಪೆರೆರಾ ಹೆಸರಿಗೆ ಸೇರಿತು.

ಗ್ಯಾರಿ ಸೋಬರ್ಸ್​, ರವಿಶಾಸ್ತ್ರಿ, ಹರ್ಷೆಲ್ ಗಿಬ್ಸ್​, ಯುವರಾಜ್ ಸಿಂಗ್, ರಾಸ್​ ವೈಟ್ಲಿ, ಹಜರತುಲ್ಲಾ ಝಾಜೈ, ಲಿಯಾ ಕಾರ್ಟರ್​ ಮತ್ತು ಇತ್ತೀಚೆಗೆ ಕೀರನ್ ಪೊಲಾರ್ಡ್​ ಈ ಸಾಧನೆ ಮಾಡಿದ್ದಾರೆ.

ಇದನ್ನು ಓದಿ: 6 ಬಾಲ್​ಗೆ 6 ಸಿಕ್ಸರ್​ ಸಿಡಿಸಿ ಅಬ್ಬರ: ಯುವರಾಜ್​ ದಾಖಲೆ ಸರಿಗಟ್ಟಿದ ಪೊಲಾರ್ಡ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.