ಮುಂಬೈ: ಐಪಿಎಲ್ನ 'ಸೂಪರ್ ಜೋಡಿ' ಎಂದೇ ಹೆಸರಾಗಿರುವ ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಟಿ20ಯ ಒಂದೇ ಪಂದ್ಯದಲ್ಲಿ ಇಬ್ಬರೂ ಶತಕ ಸಿಡಿಸಿದ್ದರು. ಈ ದಾಖಲೆಯ ಆಟಕ್ಕೆ ಇವತ್ತು ನಾಲ್ಕು ವರ್ಷಗಳು ತಂಬುತ್ತಿವೆ.
2016 ಮೇ14ರಂದು ಗುಜರಾತ್ ಲಯನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿರಾಟ್-ವಿಲಿಯರ್ಸ್ ಜೋಡಿ 229 ರನ್ಗಳ ಬೃಹತ್ ಜೊತೆಯಾಟ ನಡೆಸಿ 248 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
ಆ ಪಂದ್ಯದಲ್ಲಿ ಗುಜರಾತ್ ತಂಡದ ಬೌಲರ್ಗಳಾದ ಪ್ರವೀಣ್ ಕುಮಾರ್, ಡ್ವೇನ್ ಬ್ರಾವೋ ಮತ್ತು ರವೀಂದ್ರ ಜಡೇಜಾರಂತಹ ಘಟಾನುಘಟಿಗಳಿಗೆ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದ್ದರು.
ಬೆಂಗಳೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೊಹ್ಲಿ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 109 ರನ್ಗಳಿಸಿದರೆ, ಎಬಿಡಿ 52 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 129 ರನ್ಗಳಿಸಿದ್ದರು.
ಈ ಪಂದ್ಯಲ್ಲಿ ಗುಜರಾತ್ ಲಯನ್ಸ್ 104 ರನ್ಗಳಿಗೆ ಆಲೌಟ್ ಆಗುವ ಮೂಲಕ 144 ರನ್ಗಳ ಸೋಲು ಅನುಭವಿಸಿತ್ತು.
ಕೊರೊನಾ ವೈರಸ್ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬಡ ಜನರ ಅನುಕೂಲಕ್ಕಾಗಿ ವಿರಾಟ್-ವಿಲಿಯರ್ಸ್ ಜೋಡಿ ತಮ್ಮ ದ್ವಿಶತಕ ಜೊತೆಯಾಟದ ಕಿಟ್ ಅನ್ನು ಹರಾಜಿಗಿಟ್ಟಿದ್ದರು.