ETV Bharat / sports

ಚೊಚ್ಚಲ ಏಕದಿನ ದ್ವಿಶತಕಕ್ಕೆ 10 ವರ್ಷ... ODIನಲ್ಲಿ ದಾಖಲಾದ '200'ಗಳ ಸಂಖ್ಯೆ ಎಷ್ಟು ಗೊತ್ತಾ?

author img

By

Published : Feb 24, 2020, 8:46 PM IST

ಏಕದಿನ ಕ್ರಿಕೆಟ್​ನ ನಾಲ್ಕು ದಶಕಗಳಲ್ಲಿ ಅಸಾಧ್ಯವಾಗಿದ್ದ ದ್ವಿಶತಕವನ್ನು ಕೊನೆಗೂ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ 2010 ಫೆ.24ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಾಧ್ಯವಾಗಿಸಿ ವಿಶ್ವಕ್ರಿಕೆಟ್​ಗೆ ಅಚ್ಚರಿ ತಂದಿದ್ದರು. 150 ಹೊಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಬಲಿಷ್ಠ ಬೌಲಿಂಗ್​ ಶಕ್ತಿ ಹೊಂದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್​ ದ್ವಿಶತಕದ ಸಾಧನೆ ಮಾಡಿ ತೋರಿಸಿದ್ದರು.

Sachin Tendulkar 200
ಸಚಿನ್​ ತೆಂಡೂಲ್ಕರ್​ ದ್ವಿಶತಕ

ಮುಂಬೈ: ಏಕದಿನ ಕ್ರಿಕೆಟ್​ನ ಅಸಂಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿರುವ ಭಾರತದ ದಿಗ್ಗಜ ಸಚಿನ್​ ತೆಂಡೂಲ್ಕರ್​ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಇಂದಿಗೆ 10 ವರ್ಷ ಕಳೆದಿದೆ.

ಏಕದಿನ ಕ್ರಿಕೆಟ್​ನ ನಾಲ್ಕು ದಶಕಗಳಲ್ಲಿ ಅಸಾಧ್ಯವಾಗಿದ್ದ ದ್ವಿಶತಕವನ್ನು ಕೊನೆಗೂ ಕ್ರಿಕೆಟ್​ ದೇವರಾದ ಸಚಿನ್​ ತೆಂಡೂಲ್ಕರ್​ 2010 ಫೆ.24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿ ವಿಶ್ವಕ್ರಿಕೆಟ್​ಗೆ ಅಚ್ಚರಿ ತಂದಿದ್ದರು. 150 ಹೊಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಬಲಿಷ್ಠ ಬೌಲಿಂಗ್​ ಶಕ್ತಿ ಹೊಂದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್​ ದ್ವಿಶತಕ ಸಾಧಿಸಿ ತೋರಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಮಾಡಿದ್ದರು. ಫೆಬ್ರವರಿ 24, 2010 ರಂದು ಗ್ವಾಲಿಯರ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿತ್ತು. ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್​ ಇತಿಹಾಸದ ಪ್ರಪ್ರಥಮ ದ್ವಿಶತಕವನ್ನು ಸಿಡಿಸಿದ್ದರು. 147 ಎಸೆತಗಳನ್ನೆದುರಿಸಿದ್ದ ಸಚಿನ್ ನಲ್ಲಿ ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 200 ರನ್​ಗಳಿಸಿ ಔಟಾಗದೇ ಉಳಿದಿದ್ದರು.

  • 2️⃣ 0️⃣ 0️⃣ *#OnThisDay 🔟 years ago, Sachin Tendulkar rewrote history books, becoming the first double centurion in men's ODI cricket. 🙌

    Since then, there have been 7️⃣ more double tons in the format. pic.twitter.com/FdrCZAGWpU

    — ICC (@ICC) February 24, 2020 " class="align-text-top noRightClick twitterSection" data=" ">

ಸಚಿನ್​ ಈ ಸಾಧನೆ ಮಾಡಿದ ನಂತರ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 8 ದ್ವಿಶತಕಗಳು ದಾಖಲಾಗಿವೆ. ಅದರಲ್ಲಿ ಭಾರತದ ಬ್ಯಾಟ್ಸ್​ಮನ್​ಗಳೇ 5 ದ್ವಿಶತಕ ಸಿಡಿಸಿದ್ದಾರೆ. ಅದರಲ್ಲೂ ಹಿಟ್​ಮ್ಯಾನ್​ ರೋಹಿತ್​ ಶರ್ಮಾ 3 ಬಾರಿ ಈ ಸಾಧನೆ ಮಾಡಿದ್ದಾರೆ.

ಆದರೆ, ಸಚಿನ್​ಗಿಂತ ಮೊದಲೇ ಆಸ್ಚ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ 1997ರಲ್ಲೇ ಡೆನ್ಮಾರ್ಕ್ ವಿರುದ್ಧದ ಅಜೇಯ 229ರನ್ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್ ಜಗತ್ತಿನ ಮೊಟ್ಟ ಮೊದಲ ದ್ವಿಶತಕವಾಗಿತ್ತು. ಇವರ ನಂತರ ನ್ಯೂಜಿಲ್ಯಾಂಡ್​ನ ಅಮೆಲಿಯಾ ಕೆರ್​ ಐರ್ಲೆಂಡ್ ವಿರುದ್ಧ​ 232 ರನ್​ಗಳಿಸಿದ್ದರು.

ಏಕದಿನ ಕ್ರಿಕೆಟ್​ನ ದ್ವಿಶತಕಗಳು

  • ಸಚಿನ್​ ತೆಂಡೂಲ್ಕರ್(200)​ 2010
  • ವಿರೇಂದ್ರ ಸೆಹ್ವಾಗ್(219)​ 2011
  • ರೋಹಿತ್​ ಶರ್ಮಾ(209) 2013
  • ರೋಹಿತ್​ ಶರ್ಮಾ(264) 2013
  • ಕ್ರಿಸ್​ ಗೇಲ್(215)​ 2015
  • ಮಾರ್ಟಿನ್​ ಗಪ್ಟಿಲ್​(237)2015
  • ರೋಹಿತ್​ ಶರ್ಮಾ(208)2017
  • ಫಾಖರ್​ ಜಮಾನ್(210)​ 2018

ETV Bharat Logo

Copyright © 2024 Ushodaya Enterprises Pvt. Ltd., All Rights Reserved.