ಹೈದರಾಬಾದ್: ಕ್ರೀಡಾ ಜಗತ್ತಿನಲ್ಲಿ ಮಂಕು ಕವಿಯುತ್ತಿದ್ದ ಕ್ರಿಕೆಟ್ಗೆ ಹೊಸ ಚೈತನ್ಯ ತಂದುಕೊಟ್ಟ ಟಿ -20 ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರಂಭವಾಗಿ ಇಂದಿಗೆ 16 ವರ್ಷ ಕಳೆದಿದೆ.
ಫೆಬ್ರವರಿ 17, 2005 ರಲ್ಲಿ ಕ್ರಿಕೆಟ್ ಇತಿಹಾಸದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಆಕ್ಲೆಂಡ್ನಲ್ಲಿ ಮುಖಾಮುಖಿಯಾಗಿದ್ದವು. ಟಿ-20 ಕ್ರಿಕೆಟ್ ಇಂದು ಪ್ರೇಕ್ಷಕರ ನೆಚ್ಚಿನ ಕ್ರಿಕೆಟ್ ಮಾದರಿಯಾಗಿದ್ದು, ಇದು ಪ್ರಪಂಚದಲ್ಲಿ ಬೆರಳೇಣಿಕೆಯಷ್ಟಿದ್ದ ಕ್ರಿಕೆಟ್ ಆಡುವ ರಾಷ್ಟ್ರಗಳನ್ನು ಇಂದು ನೂರಕ್ಕೂ ಹೆಚ್ಚಾಗುವಂತೆ ಮಾಡಿದೆ. ದಿನವೆಲ್ಲಾ ಸಮಯ ವ್ಯರ್ಥ ಎಂದು ಮೂಗು ಮುರಿಯುತ್ತಿದ್ದ ಜಪಾನ್, ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳೇ ಇಂದು ಕ್ರಿಕೆಟ್ ಆಡಲು ಶುರಮಾಡಿವೆಯಂದರೆ, ಅದರ ಸಂಪೂರ್ಣ ಶ್ರೇಯ ಟಿ-20 ಕ್ರಿಕೆಟ್ಗೆ ಸಲ್ಲುತ್ತದೆ.
16 ವರ್ಷಗಳ ಹಿಂದೆ ಈ ದಿನ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿ 214 ರನ್ಗಳಿಸಿತ್ತು. ನಾಯಕ ರಿಕಿ ಪಾಂಟಿಂಗ್ 55 ಎಸೆತಗಳಲ್ಲಿ 5 ಸಿಕ್ಸರ್ಸ್ ಹಾಗೂ 8 ಬೌಂಡರಿಗಳ ನೆರವಿನಿಂದ 98 ರನ್ಗಳಿಸಿದ್ದರು.
ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 170 ರನ್ಗಳಿಗೆ ಆಲೌಟ್ ಆಗುವ ಮೂಲಕ 44 ರನ್ಗಳ ಸೋಲು ಕಂಡಿತ್ತು. ಆಸ್ಟ್ರೇಲಿಯಾದ ಮೈಕಲ್ ಕ್ಯಾಸ್ಪ್ರೊವಿಕ್ಸ್ 4 ವಿಕೆಟ್ ಪಡೆದಿದ್ದರು. ರಿಕಿ ಪಾಂಟಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
-
Beige kits. Big hair. An unbeaten 98 from Ricky Ponting.
— ICC (@ICC) February 16, 2021 " class="align-text-top noRightClick twitterSection" data="
What more could you ask for?#OnThisDay in 2005, Australia and New Zealand played the first ever men’s T20I. pic.twitter.com/sHvZUiPceQ
">Beige kits. Big hair. An unbeaten 98 from Ricky Ponting.
— ICC (@ICC) February 16, 2021
What more could you ask for?#OnThisDay in 2005, Australia and New Zealand played the first ever men’s T20I. pic.twitter.com/sHvZUiPceQBeige kits. Big hair. An unbeaten 98 from Ricky Ponting.
— ICC (@ICC) February 16, 2021
What more could you ask for?#OnThisDay in 2005, Australia and New Zealand played the first ever men’s T20I. pic.twitter.com/sHvZUiPceQ
ಇನ್ನು ಅಂದಿನಿಂದ ಇಂದಿನವರೆಗೆ 1122 ಟಿ-20 ಪಂದ್ಯಗಳು ನಡೆದಿವೆ. 164 ಪಂದ್ಯಗಳನ್ನಾಡಿರುವ ಪಾಕಿಸ್ತಾನ ತಂಡ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ. ಜೊತೆಗೆ ಚುಟುಕು ಕ್ರಿಕೆಟ್ನಲ್ಲಿ 100 ಜಯ ದಾಖಲಿಸಿರುವ ಮೊದಲ ತಂಡ ಎನಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಇದ್ದು, 137 ಪಂದ್ಯಗಳನ್ನಾಡಿವೆ. ಭಾರತ 85 ಜಯ ಸಾಧಿಸಿದ್ದರೆ, ಕಿವೀಸ್ 75 ಗೆಲುವು ಪಡೆದಿದೆ. 65 ಗೆಲುವಿನ ಸರಾಸರಿ ಹೊಂದಿರುವ ಟೀಮ್ ಇಂಡಿಯಾ ಈ ಮಾದರಿಯಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.
ಇದನ್ನು ಓದಿ:IPL ಮಿನಿ ಹರಾಜು.. ಮ್ಯಾಕ್ಸ್ವೆಲ್ಗಾಗಿ ಆರ್ಸಿಬಿ, ಸಿಎಸ್ಕೆ ಪೈಪೋಟಿ.. ಮಲನ್-ಮೋಯಿನ್ ಮೇಲೆ ಎಲ್ಲರ ಕಣ್ಣು..