ETV Bharat / sports

2020ರ ಟಿ-20 ವಿಶ್ವಕಪ್​ ನಂತರ ಈ 6 ಆಟಗಾರರು ನಿವೃತ್ತಿ ... ಯಾರ‍್ಯಾರಿದ್ದಾರೆ ಲಿಸ್ಟ್​ನಲ್ಲಿ?

ಧೋನಿ, ಗೇಲ್​ ಹಾಗೂ ಶೋಯಬ್​ ಮಲಿಕ್​ರಂತಹ ಆಟಗಾರರು ಎಲ್ಲ ಮಾದರಿಯಲ್ಲೂ ತಮ್ಮದೇ ಆದ ದಾಖಲೆಗಳನ್ನು ಸೃಷ್ಟಿಸಿದ್ದು ಅವರ ಕ್ರಿಕೆಟ್​ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. 36 ವಯಸ್ಸು ದಾಟಿರೋ ಈ ಆಟಗಾರರು 2020ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನಂತರ ಕ್ರಿಕೆಟ್​ ಗುಡ್​ ಬೈ ಹೇಳುವ ನಿರೀಕ್ಷೆಯಿದೆ.

author img

By

Published : Jan 1, 2020, 5:30 PM IST

retire after T20 world cup
retire after T20 world cup

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಶಕಗಳಿಗೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮದೇ ಆದ ದಾಖಲೆಗಳು , ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಕೆಲವು ಲೆಜೆಂಡ್​ ಕ್ರಿಕೆಟಿಗರಿಗೆ 2020 ನಿವೃತ್ತಿ ವರ್ಷವಾಗಲಿದೆ.

ಈಗಾಗಲೆ ಕೆಲವು ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಹಿರಿಯ ಕ್ರಿಕೆಟಿಗರು ಟಿ-20 , ಏಕದಿನ ಕ್ರಿಕೆಟ್​ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ 2020ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದಲೂ ದೂರವಾಗಬಹುದಾದ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

ಮಹೇಂದ್ರ ಸಿಂಗ್​ ಧೋನಿ

2019ರ ಏಕದಿನ ವಿಶ್ವಕಪ್​ನಂತರ ಕ್ರಿಕೆಟ್​ನಿಂದ ಅಂತರ ಕಾಯ್ದುಕೊಂಡಿರುವ ಭಾರತ ತಂಡದ ಎಂಎಸ್​ ಧೋನಿ 2020ಕ್ಕೆ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಭಾರತಕ್ಕೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಧೋನಿ ಈಗಾಗಲೆ ಆಯ್ಕೆ ಸಮಿತಿ ಧೋನಿಯನ್ನು ಯಾವುದೆ ಟೂರ್ನಿಗೆ ಆಯ್ಕೆ ಮಾಡಿಲ್ಲ. ಮುಂದಿನ ಐಪಿಎಲ್​ ಧೋನಿ ನೀಡುವ ಪ್ರದರ್ಶನದ ಮೇಲೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ಭವಿಷ್ಯ ಅಡಗಿದೆ ಎಂದು ಈಗಾಗಲೆ ಮಾಜಿ ಕ್ರಿಕೆಟಿಗರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಧೋನಿ ಮಾತ್ರ ಇದುವರೆಗೆ ನಿವೃತ್ತಿ ಸುಳಿವು ನೀಡಿಲ್ಲ. 38 ವರ್ಷದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ವರ್ಷ ಪೂರೈಸಿದ್ದಾರೆ. ಇವರು 350 ಏಕದಿನ, 90 ಟೆಸ್ಟ್​ ಹಾಗೂ 98 ಟಿ20 ಪಂದ್ಯಗಳನ್ನಾಡಿದ್ದು 17 ಸಾವಿರ ಅಂತಾರಾಷ್ಟ್ರೀಯ ರನ್​ಗಳಿಸಿದ್ದಾರೆ.

ಡೇಲ್​ ಸ್ಟೈನ್​

ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ ಈಗಾಗಲೇ ನಿವೃತ್ತಿ ಘೋಷಿಸಿರುವ ಡೇಲ್​ ಸ್ಟೈನ್​ ಟಿ-20 ವಿಶ್ವಕಪ್​ ಆಡುವ ಅಭಿಲಾಷೆಯೊಂದಿಗೆ ಕಾಯುತ್ತಿದ್ದಾರೆ. 36 ವರ್ಷದ ಡೇಲ್ ಸ್ಟೈನ್​ ಸ್ವತಃ ತಾವೇ ಟಿ-20 ಹಾಗೂ ಏಕದಿನ ಕ್ರಿಕೆಟ್​ ಆಡಲು ಸಿದ್ದ ಎಂದು ತಿಳಿಸಿದರೂ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಆದರೆ, ಮಾರ್ಕ್​ ಬೌಷರ್​ ಕೋಚ್​ ಆದ ಮೇಲೆ ಹಳೆತಲೆಗಳಿಗೆ ಅವಕಾಶ ನೀಡುತ್ತೇನೆ ಎಂದಿರುವುದರಿಂದ ಡೇಲ್​ ಸ್ಟೈನ್​ ಟಿ-20 ವಿಶ್ವಕಪ್​ ನಂತರ ನಿವೃತ್ತಿಯಾಗುವ ಸಾಧ್ಯತೆ ಇದೆ. ಸ್ಟೈನ್​ ದಕ್ಷಿಣ ಆಫ್ರಿಕಾ ಪರ 93 ಟೆಸ್ಟ್​, 125 ಏಕದಿನ ಹಾಗೂ 44 ಟಿ-20 ಪಂದ್ಯಗಳನ್ನಾಡಿದ್ದಾರೆ.

ಲಸಿತ್​ ಮಾಲಿಂಗ

ಶ್ರೀಲಂಕಾ ಕಂಡ ಶ್ರೇಷ್ಠ ವೇಗಿ, ಯಾರ್ಕರ್​ ಸ್ಪೆಷಲಿಸ್ಟ್​ ಮಾಲಿಂಗಾ 2019ರ ಏಕದಿನ ವಿಶ್ವಕಪ್​ನಂತರ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟಿ-20 ಯಲ್ಲಿ ಇನ್ನು ಸಕ್ರಿಯರಾಗಿರುವ ಅವರು ಅಕ್ಟೋಬರ್​​​​ ನಲ್ಲಿ ನಡೆಯುವ ಟಿ-20 ವಿಶ್ವಕಪ್​ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಲು ಚಿಂತಿಸಿದ್ದಾರೆ. ಮಾಲಿಂಗ 30 ಟೆಸ್ಟ್​ ಪಂದ್ಯಗಳಲ್ಲಿ 101 ವಿಕೆಟ್​, 226 ಏಕದಿನ ಪಂದ್ಯಗಳಿಂದ 338 ವಿಕೆಟ್​ ಹಾಗೂ 79 ಟಿ-20 ಪಂದ್ಯಗಳಿಂದ 106 ವಿಕೆಟ್​ ಪಡೆದಿದ್ದಾರೆ.

ಕ್ರಿಸ್ ಗೇಲ್​

ವೆಸ್ಟ್​ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್​ ಕೂಡ 2019ರ ವಿಶ್ವಕಪ್ ​ನಂತರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿಲ್ಲ. 40 ವರ್ಷದ ಗೇಲ್​ ಭಾರತ ಪ್ರವಾಸದಿಂದ ತಾವಾಗಿಯೇ ದೂರ ಉಳಿದಿದ್ದರು. ಇವರು ಕೂಡ ಟಿ-20 ವಿಶ್ವಕಪ್​ ಆಡುವ ಬಯಕೆ ವ್ಯಕ್ತಪಡಿಸಿದ್ದು, ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾಗಲಿದ್ದಾರೆ.

ಮೊಹಮ್ಮದ್​ ಹಫೀಜ್​

ಪಾಕಿಸ್ತಾನದ 39 ವರ್ಷದ ಆಲ್​ರೌಂಡರ್​ ಮೊಹಮ್ಮದ್​ ಹಫೀಜ್​ ಟೆಸ್ಟ್​ ಕ್ರಿಕೆಟ್​ಗೆ ಈಗಾಗಲೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಏಕದಿನ ಹಾಗೂ ಟಿ-20 ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವ ಅವರಿಗೆ ಈಗಾಗಲೆ 39 ವರ್ಷ ತುಂಬಿದೆ. ಯುವ ಕ್ರಿಕೆಟಿಗರು ಉತ್ತಮ ಪ್ರದರ್ಶನ ತೋರುತ್ತಿರುವ ಹಿನ್ನೆಲೆ ಅವರಿಗೆ 2020 ಬಹುತೇಕ ನಿವೃತ್ತಿ ವರ್ಷ ಎಂದು ಹೇಳಲಾಗುತ್ತಿದೆ.

ಶೋಯಭ್ ಮಲಿಕ್​

ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯಬ್​ ಮಲಿಕ್​ ಕೂಡ 2016 ರಲ್ಲೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ​ನಂತರ ಏಕದಿನ ಕ್ರಿಕೆಟ್​ನಿಂದಲೂ ನಿವೃತ್ತಿ ಹೊಂದಿರುವ ಅವರು ಟಿ-20 ವಿಶ್ವಕಪ್​ನಲ್ಲಿ ಆಡುವ ವಿಶ್ವಾಸ ಹೊಂದಿದ್ದಾರೆ. ನಂತರ ಎಲ್ಲಾ ಮಾದರಿ 37 ವರ್ಷದ ಮಲಿಕ್​ 20 ವರ್ಷಗಳ ಕಾಲ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. 35 ಟೆಸ್ಟ್​,287 ಏಕದಿನ ಹಾಗೂ 111 ಟಿ20 ಪಂದ್ಯಗಳನ್ನಾಡಿರುವ ಅವರು 12 ಸಾವಿರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್​ ಬಾರಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.