ಸಿಡ್ನಿ: ಐಪಿಎಲ್ನಲ್ಲಿ ಅತಿ ಹೆಚ್ಚು ನತದೃಷ್ಟ ತಂಡ ಎಂದೇ ಕರೆಯಲ್ಪಡುವ ಆರ್ಸಿಬಿ ತಂಡ ಈ ಬಾರಿಯಾದರು ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲಿ ಎಂದು ಕನಸು ಕಾಣುತ್ತಿರುವ ಆರ್ಸಿಬಿ ಅಭಿಮಾನಿಗಳಿಗೆ ಹೊಸದಾಗಿ ತಂಡ ಸೇರಿರುವ ಕೆಲ ಬ್ಯಾಟ್ಸ್ಮನ್ಗಳ ಬ್ಯಾಟಿಂಗ್ ಖುಷಿ ತಂದಿದೆ.
-
It's raining sixers for RCBians today, and Josh got in among them too! 6⃣✈#PlayBold https://t.co/0yDP2vuVJJ
— Royal Challengers (@RCBTweets) January 25, 2020 " class="align-text-top noRightClick twitterSection" data="
">It's raining sixers for RCBians today, and Josh got in among them too! 6⃣✈#PlayBold https://t.co/0yDP2vuVJJ
— Royal Challengers (@RCBTweets) January 25, 2020It's raining sixers for RCBians today, and Josh got in among them too! 6⃣✈#PlayBold https://t.co/0yDP2vuVJJ
— Royal Challengers (@RCBTweets) January 25, 2020
ಆರ್ಸಿಬಿ ತಂಡಕ್ಕೆ 2020ರ ಐಪಿಎಲ್ ಹರಾಜಿನಲ್ಲಿ ಸೇರ್ಪಡೆಗೊಂಡಿರುವ ಆ್ಯರೋನ್ ಫಿಂಚ್ ಹಾಗೂ ಯುವ ವಿಕೆಟ್ ಕೀಪರ್ ಜೋಸ್ ಫಿಲಿಪ್ಪೆ ಬಿಗ್ಬ್ಯಾಶ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ತೋರಿಸುತ್ತಿದ್ದಾರೆ. ಇಂದು ಕೂಡ ಫಿಂಚ್- ಫಿಲಿಪ್ಪೆ ಜೊತೆಗೆ ಆರ್ಸಿಬಿ ಆಪತ್ಪಾಂದವ ಎಬಿ ಡಿ ವಿಲಿಯರ್ಸ್ ರನ್ಗಳ ಮಳೆ ಹರಿಸಿದ್ದಾರೆ.
-
Where did that land?! 🧐
— Royal Challengers (@RCBTweets) January 25, 2020 " class="align-text-top noRightClick twitterSection" data="
ABD sending another white ball on a flight ✈#PlayBold #bbl09 https://t.co/TqsiGEaXTV
">Where did that land?! 🧐
— Royal Challengers (@RCBTweets) January 25, 2020
ABD sending another white ball on a flight ✈#PlayBold #bbl09 https://t.co/TqsiGEaXTVWhere did that land?! 🧐
— Royal Challengers (@RCBTweets) January 25, 2020
ABD sending another white ball on a flight ✈#PlayBold #bbl09 https://t.co/TqsiGEaXTV
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಾಯಕರಾಗಿರುವ ಆ್ಯರೋನ್ ಫಿಂಚ್ ಸಿಡ್ನಿ ಸಿಕ್ಸರ್ ವಿರುದ್ಧ 68 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 109 ರನ್ಗಳಿಸಿದರು. ಇದೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ಪರ ಆಡಿದ ಜೋಶ್ ಫಿಲಿಪ್ಪೆ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 61 ರನ್ಗಳಿಸಿ ತಮ್ಮ ತಂಡದ ಗೆಲುವಿಗೆ ನೆರವಾದರು. ಇವರಿಬ್ಬರು ಈ ಬಾರಿ ಆರ್ಸಿಬಿ ತಂಡ ಸೇರಿದ್ದಾರೆ. ಫಿಂಚ್ 4.4 ಕೋಟಿ ಹಾಗೂ ಫಿಲಿಪ್ಪೆ 20 ಲಕ್ಷ ಪಡೆದಿದ್ದಾರೆ.
-
Aaron Finch scored only the 3rd century of #BBL09 - a knock of 109 runs off just 68 balls. This included seven massive 6⃣s and six 4⃣s.
— Royal Challengers (@RCBTweets) January 25, 2020 " class="align-text-top noRightClick twitterSection" data="
Another great preview of Finchy's power before he joins us for #IPL2020 🤩#PlayBold pic.twitter.com/rOLMbjY2L6
">Aaron Finch scored only the 3rd century of #BBL09 - a knock of 109 runs off just 68 balls. This included seven massive 6⃣s and six 4⃣s.
— Royal Challengers (@RCBTweets) January 25, 2020
Another great preview of Finchy's power before he joins us for #IPL2020 🤩#PlayBold pic.twitter.com/rOLMbjY2L6Aaron Finch scored only the 3rd century of #BBL09 - a knock of 109 runs off just 68 balls. This included seven massive 6⃣s and six 4⃣s.
— Royal Challengers (@RCBTweets) January 25, 2020
Another great preview of Finchy's power before he joins us for #IPL2020 🤩#PlayBold pic.twitter.com/rOLMbjY2L6
ಎಬಿಡಿ ಪರಾಕ್ರಮ: ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಬ್ರಿಸ್ಬೇನ್ ತಂಡ ಪ್ಲೇ ಆಫ್ ತಲುಪಲು ಅನಿವಾರ್ಯವಾಗಿತ್ತು. ಮೆಲ್ಬೋರ್ನ್ ಸ್ಟಾರ್ಸ್ ತಂಡದ ವಿರುದ್ಧ ಗೆಲುವು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಆರ್ಸಿಬಿ ತಂಡದ ಆಪತ್ಪಾಂಧವ ಎಬಿ ಡಿ ವಿಲಿಯರ್ಸ್ 37 ಎಸೆತಗಳಲ್ಲಿ 2 ಬೌಂಡರಿ 6 ಸಿಕ್ಸರ್ ಸಹಿತ 71 ರನ್ ಸಿಡಿಸಿದರು. ಇವರ ಭರ್ಜರಿ ಅರ್ಧಶತಕದ ನೆರವಿನಿಂದ ಬ್ರಿಸ್ಬೇನ್ 186 ರನ್ ಸೂರೆಗೈದಿತು.
ನಂತರ ಮ್ಯಾಕ್ಸ್ವೆಲ್ ಪಡೆಯನ್ನು ಕೇವಲ 115 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಬರೋಬ್ಬರಿ 71 ರನ್ಗಳಿಂದ ಗೆಲುವು ಸಾಧಿಸಿತು. ಬ್ಯಾಟಿಂಗ್ನಲ್ಲಿ 71 ಹಾಗೂ ಫೀಲ್ಡಿಂಗ್ನಲ್ಲಿ 2 ಕ್ಯಾಚ್ ಹಾಗೂ 1 ರನ್ ಔಟ್ ಮಾಡಿದ ವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಾಮರ್ಥ್ಯವಿದ್ದರೂ ಐಒಪಿಎಲ್ ಟ್ರೋಫಿಯನ್ನು 12 ವರ್ಷಗಳಿಂದ ಎತ್ತಿ ಹಿಡಿಯಲಾಗದೇ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರುವ ಆರ್ಸಿಬಿಗೆ 2020 ರ ಐಪಿಎಲ್ನಲ್ಲಿ ಈ ಸಲ ಕಪ್ ನಮ್ದೆ ಎನ್ನಲು ಈ ಆಟಗಾರರು ದಾರಿ ಮಾಡಿಕೊಟ್ಟಿದ್ದಾರೆ.