ETV Bharat / sports

ಭಾರತ-ವಿಂಡೀಸ್ ಸರಣಿಯಲ್ಲಿ ನೂತನ ನಿಯಮ.. ನೋ ಬಾಲ್​​​ ತೀರ್ಪು ಟಿವಿ ಅಂಪೈರ್​ಗೆ

ಹಲವು ಬಾರಿ ಆನ್​ ಫೀಲ್ಡ್​ ಅಂಪೈರ್​ಗಳು ತಮ್ಮ ಕಣ್ತಪ್ಪಿನಿಂದ ನೋ ಬಾಲ್​ ನೀಡದೆ ಪಂದ್ಯದ ಫಲಿತಾಂಶವೇ ಉಲ್ಟಾ ಆಗುತಿತ್ತು. ಹೀಗಾಗಿ ಲೈನ್ ನೋ ಬಾಲ್ ತೀರ್ಪು ನೀಡುವ ಅಧಿಕಾರ ಟಿವಿ ಅಂಪೈರ್​ಗೆ ನೀಡಿ ಐಸಿಸಿ ಹೊಸ ಆದೇಶ ಹೊರಡಿಸಿದೆ.

author img

By

Published : Dec 5, 2019, 9:23 PM IST

ನೋ ಬಾಲ್​​​ ತೀರ್ಪು ಮೂರನೇ ಅಂಪೈರ್​ಗೆ,Third umpire to call front foot no balls
ನೋ ಬಾಲ್​​​ ತೀರ್ಪು ಮೂರನೇ ಅಂಪೈರ್​ಗೆ

ದುಬೈ: ಭಾರತ ಮತ್ತು ವೆಸ್ಟ್​ ಇಂಡೀಸ್ ನಡುವೆ ನಡೆಯುವ ಏಕದಿನ ಮತ್ತು ಟಿ-20 ಸರಣಿಯಲ್ಲಿ ಲೈನ್ ನೋ ಬಾಲ್ ತೀರ್ಪು ನೀಡುವ ಅಧಿಕಾರ ಟಿವಿ ಅಂಪೈರ್​ಗೆ ನೀಡಿ ಐಸಿಸಿ ಹೊಸ ನಿಯಮ ಜಾರಿಗೆ ತಂದಿದೆ.

ಹಲವು ಬಾರಿ ಆನ್​ ಫೀಲ್ಡ್​ ಅಂಪೈರ್​ಗಳು ತಮ್ಮ ಕಣ್ತಪ್ಪಿನಿಂದ ನೋ ಬಾಲ್​ ನೀಡದೆ ಪಂದ್ಯದ ಫಲಿತಾಂಶವೇ ಉಲ್ಟಾ ಆಗುತಿತ್ತು. ಇದಕ್ಕೆ ಆನ್​ ಫೀಲ್ಡ್​ ಅಂಪೈರ್​ಗಳು ಟೀಕೆಗೆ ಗುರಿಯಾಗಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಟಿವಿ ಅಂಪೈರ್​ಗಳು ಪ್ರತಿ ಬಾಲ್​ ಮೇಲೆ ಕಣ್ಣಿಟ್ಟಿರುತ್ತಾರೆ. ಯಾವುದಾದರು ನೋ ಬಾಲ್ ಎಸೆತ ಕಂಡು ಬಂದ್ರೆ ಆನ್​ ಫೀಲ್ಡ್​ ಅಂಪೈರ್​ಗಳಿಗೆ ತಿಳಿಸುತ್ತಾರೆ. ಟಿವಿ ಅಂಪೈರ್​ ಮಾಹಿತಿ ನೀಡದೆ ಆನ್​ ಫೀಲ್ಡ್​ ಅಂಪೈರ್​ಗಳು ನೋ ಬಾಲ್ ತೀರ್ಪು ನೀಡುವಂತಿಲ್ಲ.

ಭಾರತ ಮತ್ತು ವಿಂಡೀಸ್ ಸರಣಿಯಲ್ಲಿ ಈ ಹೋಸ ಪ್ರಯೋಗವನ್ನ ಮಾಡಲು ಐಸಿಸಿ ತೀರ್ಮಾನಿಸಿದ್ದು, ಇದರ ಸಾಧಕ ಮತ್ತು ಬಾಧಕಗಳನ್ನ ಅರಿಯುವ ಪ್ರಯತ್ನಕ್ಕೆ ಕೈ ಹಾಕಿದೆ. ನಾಳೆಯಿಂದ ಆರಂಭವಾಗುವ ಭಾರತ ಮತ್ತು ವೆಸ್ಟ್ ಇಂಡೀಸ್​ ನಡುವಿನ ಮೊದಲ ಟೀ-20 ಪಂದ್ಯದಲ್ಲಿ ಟಿವಿ ಅಂಪೈರ್​ಗಳೆ ನೋ ಬಾಲ್​ ತೀರ್ಪು ನೀಡಲಿದ್ದಾರೆ.

ಐಸಿಸಿ ಈ ಪ್ರಯೋಗಕ್ಕೆ ಮುಂದಾಗಿದ್ದು, ಇದೇ ಮೊದಲೇನಲ್ಲ. 2016ರಲ್ಲೇ ಇಂತಹ ಪ್ರಯತ್ನ ನಡೆಸಲಾಗಿತ್ತು. ಆದರೆ ಟಿವಿ ಅಂಪೈರ್​ಗೆ ದೃಶ್ಯಗಳು ತಡವಾಗಿ ಲಭ್ಯವಾಗುತಿದ್ದವು. ಹೀಗಾಗಿ ಈ ಪ್ರಯೋಗವನ್ನ ಕೈಬಿಡಲಾಗಿತ್ತು. ಆದರೆ ಮತ್ತದೇ ಪ್ರಯೋಗಕ್ಕೆ ಕೈ ಹಾಕಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.