ಕರಾಚಿ: ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿಕಾಕ್ ಮುಂದೊಂದು ದಿನ ಹರಿಣಗಳ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ ಎಂದು ಕೋಚ್ ಮಾರ್ಕ್ ಬೌಷರ್ ಅಭಿಪ್ರಾಯಪಟ್ಟಿದ್ದಾರೆ.
ಡಿಕಾಕ್ ಇಂದು ಪಾಕಿಸ್ತಾನ ವಿರುದ್ಧ ತಮ್ಮ 50ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಹರಿಣಗಳ ಪರ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಬೌಷರ್ 1997ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಅವರು ದೇಶದ ಪರ 150 ಪಂದ್ಯಗಳಲ್ಲಿ ಪ್ರತಿನಿಧಿಸಿದ ದಾಖಲೆ ಹೊಂದಿದ್ದಾರೆ.
"ಇದು ಯಾವುದೇ ಆಟಗಾರನಿಹಾದರೂ ವಿಶೇಷ ಸಂದರ್ಭವಾಗಿರುತ್ತದೆ. ಅವರ(ಡಿಕಾಕ್) ವೃತ್ತಿ ಜೀವನ ಈಗಷ್ಟೇ ಶುರುವಾಗಿದೆ. ಅವರು ಇನ್ನೂ 100 ಟೆಸ್ಟ್ ಪಂದ್ಯಗಳನ್ನಾಡುವ ಅವಕಾಶವಿದೆ" ಎಂದು ಬೌಷರ್ ಕ್ರೀಡಾ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಡಿಕಾಕ್ ಒಬ್ಬ ವಿಶೇಷ ಆಟಗಾರರಾಗಿದ್ದಾರೆ. ಅವರು ಈಗ ಫಾರ್ಮ್ನಲ್ಲಿಲ್ಲದೇ ಇರುಬಹುದು. ಆದರೆ ಎದುರಾಳಿಗಳು ಇವರು ಫಾರ್ಮ್ ಕಂಡುಕೊಳ್ಳಬಾರದು ಎಂಬುದನ್ನೇ ನೋಡುತ್ತಿರುತ್ತಾರೆ. ಏಕೆಂದರೆ ಅವರು ಬೇರೆ ಯಾವುದೇ ಆಟಗಾರನಿಗಿಂತ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ದ. ಆಫ್ರಿಕಾ ಮುಖ್ಯ ಕೋಚ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಬೌಷರ್ 150 ಟೆಸ್ಟ್ ಪಂದ್ಯಗಳನ್ನಾಡಿದ್ದರೆ, ಆಲ್ರೌಂಡರ್ ಜಾಕ್ ಕಾಲೀಸ್ 166 ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ.
ಇದನ್ನು ಓದಿ:ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ 220ಕ್ಕೆ ಆಲೌಟ್: 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕ್