ಚೆನ್ನೈ: ಐಪಿಎಲ್ನ ಅತ್ಯಂತ ಯಶಸ್ವಿ ಪ್ರಾಂಚೈಸಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಜಾಲಾತಾಣದಲ್ಲಿ ಮಂಗಳವಾರ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಧೋನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
13ನೇ ಐಪಿಎಲ್ ಆವೃತ್ತಿಯಲ್ಲಿ ಧೋನಿ ಸಿಎಸ್ಕೆ ತಂಡವನ್ನು ಮುನ್ನಡೆಬೇಕಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಭೀತಿಯಿಂಧ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ಧಾಷ್ಟವಧಿಗೆ ಮುಂದೂಡಿದೆ.
ಬಿಡುವಿನ ಸಂದರ್ಭದಲ್ಲಿ ಸಿಎಸ್ಕೆ ಪ್ರಾಂಚೈಸಿ ತನ್ನ ಹಾಲಿ ಹಾಗೂ ಮಾಜಿ ಆಟಗಾರರ ಜೊತೆ ಸಂವಾದ ನಡೆಸುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದೆ. ಈಗಾಗಲೆ ಮ್ಯಾಥ್ಯೂ ಹೇಡನ್, ಮೈಕ್ ಹಸ್ಸಿ ಸೇರಿದಂತೆ ಹಲವಾರು ಮಾಜಿ ಲೆಜೆಂಡ್ಗಳ ಜೊತೆ ಸಂವಾದ ನಡೆಸಿದೆ.
-
The sweet King's here, simply rock on! #Thala @msdhoni #ChummaKizhi #WhistlePodu 🦁💛 pic.twitter.com/6EFeDj6CdY
— Chennai Super Kings (@ChennaiIPL) May 19, 2020 " class="align-text-top noRightClick twitterSection" data="
">The sweet King's here, simply rock on! #Thala @msdhoni #ChummaKizhi #WhistlePodu 🦁💛 pic.twitter.com/6EFeDj6CdY
— Chennai Super Kings (@ChennaiIPL) May 19, 2020The sweet King's here, simply rock on! #Thala @msdhoni #ChummaKizhi #WhistlePodu 🦁💛 pic.twitter.com/6EFeDj6CdY
— Chennai Super Kings (@ChennaiIPL) May 19, 2020
ಮಂಗಳವಾರ ನಾಯಕ ಎಂಸ್ ಧೋನಿ ಬಸ್ ಏರಲು ಬರುತ್ತಿರುವ ಸಂದರ್ಭದ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಯೋದಲ್ಲಿ ಧೋನಿ ಬಾಗಿಲ ಬಳಿ ಬಂದ ಕೂಡಲೆ ಸೆಕ್ಯುರಿಟಿ ಸಿಬ್ಬಂದಿ ಸೆಲ್ಯೂಟ್ ಮೂಲಕ ಗೌರವಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಧೋನಿ ಸ್ಮೈಲ್ ನೀಡಿ ಮುಂದೆ ಸಾಗಿದ್ದಾರೆ.
ಧೋನಿಗೆ ಸೆಕ್ಯುರಿಟಿ ಸೆಲ್ಯೂಟ್ ಹೊಡೆಯುತ್ತಿದ್ದಂತೆ ಹೊರಗಡೆ ನಿಂತಿದ್ದ ನೂರಾರು ಅಭಿಮಾನಿಗಳು ಧೋನಿ ಹಾಗೂ ಅವರ ಜೊತೆಗೆ ಬಂದ ಸುರೇಶ್ ರೈನಾ ನೋಡಿ ಜೋರಾಗಿ ಚೀರುವ ಮೂಲಕ ಹರ್ಷವ್ಯಕ್ತಪಡಿಸಿದ್ದಾರೆ.
-
Everlasting Smile... #Yellove #WhistlePodu 🦁💛 pic.twitter.com/vgHAZXWW32
— Chennai Super Kings (@ChennaiIPL) May 16, 2020 " class="align-text-top noRightClick twitterSection" data="
">Everlasting Smile... #Yellove #WhistlePodu 🦁💛 pic.twitter.com/vgHAZXWW32
— Chennai Super Kings (@ChennaiIPL) May 16, 2020Everlasting Smile... #Yellove #WhistlePodu 🦁💛 pic.twitter.com/vgHAZXWW32
— Chennai Super Kings (@ChennaiIPL) May 16, 2020
ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸಿಎಸ್ಕೆ "ದಿ ಸ್ವೀಟ್ ಕಿಂಗ್ ಇಸ್ ಹಿಯರ್, ಸಿಂಪ್ಲಿ ರಾಕ್ ಆನ್"ಎಂದು ಬರೆದು ಶೇರ್ ಮಾಡಿಕೊಂಡಿದೆ.
ಇದಕ್ಕೂ ಮೊದಲು ಧೋನಿ ತಮ್ಮ ಮಗಳು ಬೈಕ್ ರೈಡ್ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿತ್ತು. ಜೀವಾ ಆ ವಿಡಿಯೋದಲ್ಲಿ ಬೈಕ್ ಸ್ಟಾರ್ಟ್ ಮಾಡಿ ಎಕ್ಸಲೇಟರ್ ರೈಸ್ ಮಾಡುತ್ತಿದ್ದರು. ಈ ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು ತಂದೆ ತಕ್ಕ ಮಗಳು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಧೋನಿ 2019 ರ ವಿಶ್ವಕಪ್ನಿಂದ ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಐಪಿಎಲ್ನಲ್ಲಾದರೂ ಅವರ ಆಟವನ್ನು ನೋಡೋಣ ಎಂದುಕೊಂಡಿದ್ದ ಅವರ ಅಭಿಮಾನಿಗಳಿಗೆ ಕೊರೊನಾ ನಿರಾಶೆ ಮಾಡಿಸಿದೆ.