ETV Bharat / sports

ಇಂಗ್ಲೆಂಡ್​ನ 'ದಿ ಹಂಡ್ರೆಡ್​' ಟೂರ್ನಿಯಲ್ಲಿ ಮಹಿಳಾ ಮತ್ತು ಪುರುಷರ ವಿಜೇತ ತಂಡಕ್ಕೆ ಸಮಾನ ಬಹುಮಾನ

author img

By

Published : Mar 4, 2020, 9:18 PM IST

ಬುಧವಾರ ಇಸಿಬಿ 7,69,000 ಅಮೆರಿಕನ್​ ಡಾಲರ್​ ಮೊತ್ತವನ್ನು ದಿ ಹಂಡ್ರೆಡ್​ ಟೂರ್ನಿಗೆ ಬಹುಮಾನ ಮೊತ್ತವಾಗಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಮಹಿಳಾ ಹಾಗೂ ಪುರುಷರ ವಿಜೇತ ತಂಡಗಳಿಗೆ ಸಮಾನವಾಗಿ ಹಂಚಲಾಗುವುದು ಎಂದು ಐತಿಹಾಸಿಕ ಘೋಷಣೆ ಮಾಡಿದೆ.

The Hundred
ದಿ ಹಂಡ್ರೆಡ್

ಲಂಡನ್​: ಬಹುನಿರೀಕ್ಷಿತ 100 ಎಸೆತಗಳ ಟೂರ್ನಿಯಾದ 'ದಿ ಹಂಡ್ರೆಡ್​'ನಲ್ಲಿ ವಿಜೇತರಾಗುವ ಮಹಿಳೆಯರ ಹಾಗೂ ಪುರುಷರ ತಂಡಕ್ಕೆ ಸಮಾನ ಬಹುಮಾನ ನೀಡಲು ಇಸಿಬಿ ನಿರ್ಧರಿಸಿದೆ.

"ಕ್ರಿಕೆಟ್​ನಲ್ಲಿ ಇತರೆ ಕ್ರೀಡೆಗಳಂತೆ ಲಿಂಗಸಾಮನತೆಗೆ ಆದ್ಯತೆ ನೀಡಿರುವುದಕ್ಕೆ ನಮಗೆ ತುಂಬಾ ಹೆಮ್ಮೆ ಇದೆ. ಇದರಿಂದ ನಾವು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕಾಗಿದ್ದು, ಮಹಿಳಾ ಕ್ರಿಕೆಟರ್​ಗಳನ್ನು ಗುರುತಿಸಬಹುದಾಗಿದೆ. ಜೊತೆಗೆ ಅವರೆಲ್ಲರೂ ದಿ ಹಂಡ್ರೆಡ್​ಗೆ ತುಂಬಾ ಮೌಲ್ಯ ತಂದುಕೊಡಲಿದ್ದಾರೆ ಎಂದು​ ಮಹಿಳಾ ಟೂರ್ನಮೆಂಟ್​ ಮುಖ್ಯಸ್ಥೆ ಬ್ಯಾರೆಟ್​ ವಿಲ್ಡ್​ ತಿಳಿಸಿದ್ದಾರೆ.

ಮಹಿಳಾ ಕ್ರಿಕೆಟ್​ ಸಂಬಂಧಿಸಿದಂತೆ ಇಸಿಬಿ ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಇಂಗ್ಲೆಂಡ್​ ಕ್ರಿಕೆಟ್​ ತಂಡದ ನಾಯಕಿ ಹೀದರ್ ನೈಟ್ ಸಂತಸ ವ್ಯಕ್ತಪಡಿಸಿದ್ದಾರೆ. " ಮಹಿಳಾ ವೃತ್ತಿಪರ ಕ್ರಿಕೆಟ್ ಉತ್ತಮ ಲಯದಲ್ಲಿರುವಾಗಲೆ ಇಸಿಬಿ ಈ ನಿರ್ಧಾರ ತೆಗೆದುಕೊಂಡಿದೆ. ದಿ ಹಂಡ್ರೆಡ್ ಟೂರ್ನಿ​ ಲಿಂಗ ಸಮಾನತೆ ಅರಿತುಕೊಳ್ಳಲು ಸರಿಯಾದ ಮಾರ್ಗವಾಗಿದೆ" ಎಂದಿದ್ದಾರೆ.

5 ವಾರಗಳ ಕಾಲ ನಡೆಯುವ ಈ ಟೂರ್ನಮೆಂಟ್​ನಲ್ಲಿ ಇಂಗ್ಲೆಂಡ್​ನ 8 ಪ್ರಮುಖ 8 ನಗರಗಳು ಭಾಗವಹಿಸಲಿವೆ. ಪ್ರತಿ ಇನ್ನಿಂಗ್ಸ್​ನಲ್ಲಿ 100 ಎಸೆತಗಳು ಇರಲಿದ್ದು, ಮೊದಲ 25 ಎಸೆತಗಳಿಗೆ ಪವರ್​ ಪ್ಲೇ ಇರುತ್ತದೆ. ಒಬ್ಬ ಬೌಲರ್​ ಸತತ 5 ಅಥವಾ 10 ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಪ್ರತಿಯೊಬ್ಬ ಬೌಲರ್​ ಹೆಚ್ಚೆಂದರೆ 20 ಎಸೆತಗಳನ್ನು ಎಸೆಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.