ನವದೆಹಲಿ: ಭಾರತ ತಂಡದ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ನಾನೆದುರಿಸಿದ ಅಥವಾ ನನ್ನ ಜೊತೆ ಆಡಿರುವ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳು ಎಂದು ಸುಲಭವಾಗಿ ಹೇಳುತ್ತೇನೆ ಎಂದು ಶೇನ್ ವಾರ್ನ್ ತಿಳಿಸಿದ್ದಾರೆ.
" ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ನನ್ನ ಪೀಳಿಗೆಯಲ್ಲಿ (1989-2013) ನಾನು ಜೊತೆಯಾಗಿ ಆಡಿದ ಅಥವಾ ವಿರುದ್ಧವಾಗಿ ಆಡಿದ ಅತ್ಯುತ್ತಮ ಬ್ಯಾಟ್ಸ್ಮನ್ಗಳು. ಮೈದಾನದಲ್ಲಿ ನಾವು ಮೂವರು ಹೋರಾಡುವುದು ಮತ್ತು ನಮ್ಮ ಜೊತೆಯಾಗಿ ಆಟವಾಡುವುದು ನಿಮಗೆ ಇಷ್ಟವಾಗಿದೆಯೇ? ಎಂದು ಬರೆದುಕೊಂಡಿರುವ ಶೇನ್ ವಾರ್ನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಮೂವರು ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ತೆಂಡೂಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ 16 ವರ್ಷವಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ನಂತರ ಅತಮ್ಮ 22 ವರ್ಷಗಳ ಸುದೀರ್ಘ ಕೆರಿಯರ್ನಲ್ಲಿ 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳನ್ನಾಡಿದ್ದು, 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ ವಿಶ್ವದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 18,426 ರನ್, ಟೆಸ್ಟ್ನಲ್ಲಿ 15,921 ರನ್ ಬಾರಿಸಿ ಗರಿಷ್ಠ ರನ್ ಸರದಾರರಾಗಿದ್ದಾರೆ.
- " class="align-text-top noRightClick twitterSection" data="
">
ಲಾರಾ ಟೆಸ್ಟ್ ಕ್ರಿಕೆಟ್ನಲ್ಲಿ 400 ರನ್ ಸಿಡಿಸಿದ ಏಕೈಕ ಬ್ಯಾಟ್ಸ್ಮನ್ ಆಗಿದ್ದು, ಅವರು ವಿಂಡೀಸ್ ಪರ 131 ಟೆಸ್ಟ್ ಮತ್ತು 299 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 11,953 ಹಾಗೂ 10,405 ರನ್ಗಳಿಸಿದ್ದಾರೆ.
ವಿಶ್ವದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾಗಿರುವ ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಿಂದ 708 ಹಾಗೂ 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಪಡೆದಿದ್ದಾರೆ.
ಈ ಮೂವರು ಒಂದೇ ಫ್ರೇಮ್ನಲ್ಲಿರುವ ಚಿತ್ರವನ್ನು ನೋಡಿರುವ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.