ಇಂದೋರ್: 2020ರಲ್ಲಿ ಗೆಲುವಿನೊಂದಿಗೆ ಆರಂಭಿಸಲು ಕಾತುರದಿಂದಿರುವ ಭಾರತ ತಂಡ ಶ್ರೀಲಂಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಟಾಸ್ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟ್ಸ್ಮನ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಪುನಾರಾಗಮನ ಮಾಡಿದ್ದಾರೆ. ಆರಂಭಿಕರಾಗಿ ಧವನ್ ಜೊತೆ ರಾಹುಲ್ ಕಣಕ್ಕಿಳಿಯಲಿದ್ದಾರೆ. ಸ್ಪಿನ್ನರ್ ವಿಭಾಗದಲ್ಲಿ ಕುಲ್ದೀಪ್ ಚಹಲ್ರನ್ನು ಹಿಂದಿಕ್ಕಿ ಅವಕಾಶಗಿಟ್ಟಿಸಿಕೊಂಡಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಅವಕಾಶ ಪಡೆದಿದ್ದು ಅನುಭವಿ ಜಡೇಜಾ ಬೆಂಚ್ ಮನೀಷ್ ಪಂಡೆ ಹಾಗೂ ಸಂಜು ಸಾಮ್ಸನ್ ಜೊತೆ ಬೆಂಚ್ ಕಾಯಲಿದ್ದಾರೆ.
-
Unchanged Playing XIs for the two teams for the 2nd T20I.#INDvSL pic.twitter.com/CjGQs1KFOW
— BCCI (@BCCI) January 7, 2020 " class="align-text-top noRightClick twitterSection" data="
">Unchanged Playing XIs for the two teams for the 2nd T20I.#INDvSL pic.twitter.com/CjGQs1KFOW
— BCCI (@BCCI) January 7, 2020Unchanged Playing XIs for the two teams for the 2nd T20I.#INDvSL pic.twitter.com/CjGQs1KFOW
— BCCI (@BCCI) January 7, 2020
ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಗೆದ್ದಿರುವ ಸಂಭ್ರಮದಲ್ಲಿರುವ ಭಾರತ ತಂಡ ಈ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅಲ್ಲದೆ ಮೊದಲ ಪಂದ್ಯ ಮಳೆಗಾಹುತಿಯಾಗಿರುವುದರಿಂದ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಶ್ರೀಲಂಕಾ ತಂಡ ಕೂಡ ಅನುಭವಿ ಏಂಜೆಲೋ ಮ್ಯಾಥ್ಯೂಸ್ರನ್ನು ಆಯ್ಕೆ ಮಾಡದೆ ಅಚ್ಚರಿ ಮೂಡಿಸಿದೆ. ಅಲ್ಲದೆ ಮಾಲಿಂಗ ಬಳಗದಲ್ಲಿ ಅನುಭವಿಗಳಿಗಿಂತ ಹೆಚ್ಚು ಯುವ ಆಟಗಾರರೇ ಕಣದಲ್ಲಿದ್ದಾರೆ. ಅರ್ಧದಷ್ಟು ಮಂದಿಗೆ ಭಾರತದ ವಿರುದ್ಧ ಇದೇ ಚೊಚ್ಚಲ ಸರಣಿ ಎನ್ನುವುದು ಕುತೂಹಲದ ಸಂಗತಿ.
-
Captain Kohli wins the toss and elects to bowl first in the 2nd @Paytm T20I against Sri Lanka.
— BCCI (@BCCI) January 7, 2020 " class="align-text-top noRightClick twitterSection" data="
Live - https://t.co/OExOCS35VC #INDvSL pic.twitter.com/6eDyVQxMX6
">Captain Kohli wins the toss and elects to bowl first in the 2nd @Paytm T20I against Sri Lanka.
— BCCI (@BCCI) January 7, 2020
Live - https://t.co/OExOCS35VC #INDvSL pic.twitter.com/6eDyVQxMX6Captain Kohli wins the toss and elects to bowl first in the 2nd @Paytm T20I against Sri Lanka.
— BCCI (@BCCI) January 7, 2020
Live - https://t.co/OExOCS35VC #INDvSL pic.twitter.com/6eDyVQxMX6
ಭಾರತ: ವಿರಾಟ್ ಕೊಹ್ಲಿ (ನಾಯಕ) ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನವೀಪ್ ಸೈನಿ, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್
ಶ್ರೀಲಂಕಾ: ಲಸಿತ್ ಮಾಲಿಂಗ (ಕ್ಯಾಪ್ಟನ್), ಧನಂಜಯ್ ಡಿ ಸಿಲ್ವಾ, ಹಸರಂಗ, ಓಷಾಡ ಫರ್ನಾಂಡೊ, ಅವಿಷ್ಕಾ ಫರ್ನಾಂಡೊ, ದನುಷ್ಕಾ ಗುಣತಿಲಕ, ಲಹಿರು ಕುಮಾರ, ದಾಸುನ್ ಶನಕ, ಇಸುರು ಉದಾನ, ಭಾನುಕ ರಾಜಪಕ್ಸ