ಪುಣೆ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ದಕ್ಷಿಣಆಫ್ರಿಕಾ ವಿರುದ್ಧ ಸರಣಿ ಗೆದ್ದಿದೆ. ಆ ಮೂಲಕ ಆಸ್ಟ್ರೇಲಿಯಾ ತವರಿನಲ್ಲಿ ಅತಿ ಹೆಚ್ಚು ದ್ವಿಪಕ್ಷೀಯ ಸರಣಿ ಗೆದ್ದ ತಂಡ ಎಂಬ ದಾಖಲೆಯನ್ನೂ ಮುರಿದು ಇತಿಹಾಸ ಬರೆದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೊದಲ ಬಾರಿಗೆ ಇನ್ನಿಂಗ್ಸ್ ಹಾಗೂ 137 ರನ್ಗಳ ಬೃಹತ್ ಜಯ ಸಾಧಿಸಿದ ಭಾರತ ತಂಡ ಇನ್ನೂ ಒಂದು ಪಂದ್ಯವಿರುವಂತೆ ಸರಣಿ ಗೆದ್ದು ತವರಿನಲ್ಲಿ ಸತತ 11 ಟೆಸ್ಟ್ ಸರಣಿಗಳನ್ನು ಗೆದ್ದು ವಿಶ್ವ ದಾಖಲೆಯನ್ನು ಬರೆದಿದೆ.
ಇದಕ್ಕೂ ಮೊದಲು 1994-2000 ಅವಧಿಯಲ್ಲಿ ಹಾಗೂ 2004ರಿಂದ 2008ರ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಸತತ 10 ಸರಣಿಗಳನ್ನು ಗೆದ್ದು ವಿಶ್ವದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ಟೀಂ ಇಂಡಿಯಾ ಬ್ರೇಕ್ ಮಾಡಿದೆ. ಭಾರತ ತಂಡ 2013-2019ರ ಅವಧಿಯಲ್ಲಿ ಈ ಸಾಧನೆ ಮಾಡಿದೆ.
ಭಾರತದ 2013 ರಿಂದ ಗೆದ್ದಿರುವ ಟೆಸ್ಟ್ ಸರಣಿಗಳು:
- 2012-2013 ಆಸ್ಟ್ರೇಲಿಯಾ ವಿರುದ್ಧ 4-0
- 2013-14 ವೆಸ್ಟ್ ಇಂಡೀಸ್ ವಿರುದ್ಧ 2-0
- 2015-16 ದಕ್ಷಿಣ ಆಫ್ರಿಕಾ ವಿರುದ್ಧ 3-0
- 2016-17 ನ್ಯೂಜಿಲ್ಯಾಂಡ್ ವಿರುದ್ಧ 3-0
- 2016-17 ಇಂಗ್ಲೆಂಡ್ ವಿರುದ್ಧ 4-0
- 2016-17 ಬಾಂಗ್ಲಾದೇಶ ವಿರುದ್ಧ 1-0
- 2016-17 ಆಸ್ಟ್ರೇಲಿಯಾ ವಿರುದ್ಧ 2-1
- 2017-18 ಶ್ರೀಲಂಕಾ ವಿರುದ್ಧ 2-1
- 2018 ಆಫ್ಘಾನಿಸ್ತಾನ ವಿರುದ್ಧ 1-0
- 2018-2019 ವೆಸ್ಟ್ ಇಂಡೀಸ್ ವಿರುದ್ಧ 2-0
- 2019 ದಕ್ಷಿಣ ಆಫ್ರಿಕಾ ವಿರುದ್ಧ-2-0*