ಮುಂಬೈ: ಟೀಂ ಇಂಡಿಯಾ ಸೆಪ್ಟೆಂಬರ್ನಿಂದ ಮಾರ್ಚ್ ತಿಂಗಳವರೆಗೂ ಆರು ದೇಶಗಳ ವಿರುದ್ಧ ಬರೋಬ್ಬರಿ 36 ಕ್ರಿಕೆಟ್ ಪಂದ್ಯಗಳನ್ನಾಡಲಿದ್ದು, ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಿದ್ದು, ಇದಾದ ಬಳಿಕ ದಕ್ಷಿಣ ಆಫ್ರಿಕಾ,ಬಾಂಗ್ಲಾದೇಶ,ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ತದನಂತರ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ.
![team india complete cricket](https://etvbharatimages.akamaized.net/etvbharat/prod-images/768-512-4282870-thumbnail-3x2-wdfdf_3008newsroom_1567173368_546.jpg)
ಸ್ವದೇಶದಲ್ಲಿ 5 ಟೆಸ್ಟ್ ಪಂದ್ಯ,9 ಏಕದಿನ ಹಾಗೂ 12 ಟಿ-20 ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ 2 ಟೆಸ್ಟ್,3 ಏಕದಿನ ಹಾಗೂ 5 ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದೆ.
ವೆಸ್ಟ್ ಇಂಡೀಸ್ ಸರಣಿ ಮುಕ್ತಾಯಗೊಂಡ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ-20 ಪಂದ್ಯ, ಮೂರು ಟೆಸ್ಟ್ ಪಂದ್ಯ ನಡೆಯಲಿವೆ. ಆದರೆ ಯಾವುದೇ ಏಕದಿನ ಪಂದ್ಯ ನಡೆಯುವುದಿಲ್ಲ. ಬದಲಿಗೆ 2020ರಲ್ಲಿ ಮತ್ತೆ ಭಾರತ ಪ್ರವಾಸ ಕೈಗೊಂಡು ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಲಿದೆ.
![team india complete cricket](https://etvbharatimages.akamaized.net/etvbharat/prod-images/ec03s__wkamo3oz_3008newsroom_1567173368_903.jpg)
ಯಾವೆಲ್ಲ ತಂಡದೊಂದಿಗೆ ಸೆಣಸು!
- ದಕ್ಷಿಣ ಆಫ್ರಿಕಾ: 3 ಟಿ-20 ಪಂದ್ಯ, ಮೂರು ಟೆಸ್ಟ್ ಪಂದ್ಯ(2019 ಸೆಪ್ಟೆಂಬರ್-ಅಕ್ಟೋಬರ್)
- ಬಾಂಗ್ಲಾದೇಶ: ಮೂರು ಟಿ-20 ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯ (2019 ನವೆಂಬರ್)
- ವೆಸ್ಟ್ ಇಂಡೀಸ್: ಮೂರು ಟಿ-20 ಪಂದ್ಯ, ಮೂರು ಏಕದಿನ ಪಂದ್ಯ (2019 ಡಿಸೆಂಬರ್)
- ಜಿಂಬಾಬ್ವೆ: ಮೂರು ಟಿ-20 ಪಂದ್ಯ (2020 ಜನವರಿ)ಟೀಂ ಇಂಡಿಯಾ ಟೆಸ್ಟ್ ತಂಡ
- ಆಸ್ಟ್ರೇಲಿಯಾ: ಮೂರು ಏಕದಿನ ಪಂದ್ಯ(2020 ಜನವರಿ)
- ನ್ಯೂಜಿಲ್ಯಾಂಡ್(2020 ಜನವರಿ 24ರಿಂದ ಮಾರ್ಚ್): ಐದು ಟಿ-20 ಪಂದ್ಯ, ಮೂರು ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯ
- ದಕ್ಷಿಣ ಆಫ್ರಿಕಾ(2020 ಮಾರ್ಚ್ 12ರಿಂದ): ಮೂರು ಏಕದಿನ ಪಂದ್ಯ