ETV Bharat / sports

ಬೆಳ್ಳಂ ಬೆಳಗ್ಗೆ ಕ್ಯೂನಲ್ಲಿ ನಿಂತು ಮತದಾನ ಮಾಡಿದ ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ  ಹರಿಯಾಣದ ಗುರ್ಗಾಂವ್​ನಲ್ಲಿ ದೇಶದ ಪ್ರಜಾತಂತ್ರದ ಅತಿ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತದಾನ ಹಕ್ಕು ಚಲಾವಣೆ ಮಾಡಿದ್ದಾರೆ.

ಕೊಹ್ಲಿ
author img

By

Published : May 12, 2019, 8:08 AM IST

ಗುರ್ಗಾಂವ್: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಇಂದು ನಡೆಯುತ್ತಿರುವ 6ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.

ವಿರಾಟ್​ ಕೊಹ್ಲಿ ಹರಿಯಾಣದ ಗುರ್ಗಾಂವ್​ನಲ್ಲಿ ದೇಶದ ಪ್ರಜಾತಂತ್ರದ ಅತಿ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತದಾನ ಹಕ್ಕು ಚಲಾವಣೆ ಮಾಡಿದ್ದಾರೆ.

lok sabha election kohli
ವಿರಾಟ್​ ಕೊಹ್ಲಿ

ಕೆಲವು ದಿನಗಳ ಹಿಂದೆಯಷ್ಟೇ ಹೆಚ್ಚಿನ ಸಂಖ್ಯೆಯ ಮತದಾನಕ್ಕಾಗಿ ಜನರಿಗೆ ಸ್ಫೂರ್ತಿ ತುಂಬುವಂತೆ ವಿರಾಟ್ ಕೊಹ್ಲಿ ಜೊತೆಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದೀಗ ಬೆಳ್ಳಂ ಬೆಳಿಗ್ಗೆ ಗುರ್ಗಾಂವ್​ನ ಪೈನ್ ಕ್ರೆಸ್ಟ್ ಸ್ಕೂಲ್​ನಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಮವಾರ ರಾಂಚಿಯಲ್ಲಿ ತಮ್ಮ ಪತ್ನಿಯೊಂದಿಗೆ ತೆರಳಿ ಮತದಾನ ಮಾಡಿದ್ದರು. ಈ ವೇಳೆ ಧೋನಿ ತಮ್ಮ ಮಗಳು ಜೀವಾಳಿಂದ ಎಲ್ಲರು ಮತದಾನ ಮಾಡುವಂತೆ ಹೇಳಿಸಿ, ಆ ವಿಡೀಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.