ರಾಜ್ಕೋಟ್: ಟೀಂ ಇಂಡಿಯಾ ಹಾಗೂ ಪ್ರವಾಸಿ ಬಾಂಗ್ಲಾದೇಶ ನಡುವಿನ ಎರಡನೇ ಟಿ-20 ಪಂದ್ಯ ಇಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಆತಿಥೇಯರು ಸರಣಿ ಸೋಲು ತಪ್ಪಿಸಿಕೊಳ್ಳಬೇಕಾದರೆ ಗೆಲುವು ಅನಿವಾರ್ಯವಾಗಿದೆ.
-
Stage set for the 2nd T20I in Rajkot #TeamIndia #INDvBAN pic.twitter.com/IPlKIcaQ0v
— BCCI (@BCCI) 5 November 2019 " class="align-text-top noRightClick twitterSection" data="
">Stage set for the 2nd T20I in Rajkot #TeamIndia #INDvBAN pic.twitter.com/IPlKIcaQ0v
— BCCI (@BCCI) 5 November 2019Stage set for the 2nd T20I in Rajkot #TeamIndia #INDvBAN pic.twitter.com/IPlKIcaQ0v
— BCCI (@BCCI) 5 November 2019
ಭಾನುವಾರದಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಮಹಮದುಲ್ಲ ಪಡೆ ಏಳು ವಿಕೆಟ್ಗಳಿಂದ ಭಾರತವನ್ನು ಮಣಿಸಿತ್ತು. ಈ ಮೂಲಕ ಟಿ20ಯಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾ ಮೊದಲ ಗೆಲುವು ದಾಖಲಿಸಿತ್ತು.
ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸರಣಿ ಸೋಲಿನ ಭೀತಿಯಲ್ಲಿದೆ. ಭಾರತದ ವಿರುದ್ಧ ಚೊಚ್ಚಲ ಗೆಲುವು ದಾಖಲಿಸಿರುವ ಬಾಂಗ್ಲಾ, ಚೊಚ್ಚಲ ಸರಣಿ ಗೆಲುವಿನ ಕನಸು ಕಾಣುತ್ತಿದೆ.
-
When @RishabhPant17 & @ShreyasIyer15 are batting in tandem 💥💥👌🏻🔝 #TeamIndia #INDvBAN @Paytm pic.twitter.com/ebnKMA2JTI
— BCCI (@BCCI) 6 November 2019 " class="align-text-top noRightClick twitterSection" data="
">When @RishabhPant17 & @ShreyasIyer15 are batting in tandem 💥💥👌🏻🔝 #TeamIndia #INDvBAN @Paytm pic.twitter.com/ebnKMA2JTI
— BCCI (@BCCI) 6 November 2019When @RishabhPant17 & @ShreyasIyer15 are batting in tandem 💥💥👌🏻🔝 #TeamIndia #INDvBAN @Paytm pic.twitter.com/ebnKMA2JTI
— BCCI (@BCCI) 6 November 2019
ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ನಲ್ಲಿ ನೀರಸ ಪ್ರದರ್ಶನ ನೀಡಿತ್ತು. ಬೌಲಿಂಗ್ನಲ್ಲೂ ಸಹ ಹೇಳಿಕೊಳ್ಳುವ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಇಮದು ತಂಡದಲ್ಲಿ ಕೆಲ ಬದಲಾವಣೆಗಳಾದರೆ ಅಚ್ಚರಿಯಿಲ್ಲ.
ಇನ್ನು ಪ್ರವಾಸಿ ತಂಡದಲ್ಲಿ ಬೌಲಿಂಗ್ ಉತ್ತಮವಾಗಿದೆ. ಬ್ಯಾಟಿಂಗ್ ವಿಭಾಗದಲ್ಲೂ ಸೌಮ್ಯ ಸರ್ಕಾರ, ಮುಷ್ಫೀಕರ್ ರಹೀಂ ಉತ್ತಮ ಕೊಡುಗೆ ನೀಡಿದ್ದಾರೆ. ಹೀಗಾಗಿ ಇದೇ ಪ್ರದರ್ಶನವನ್ನು ಎಲ್ಲ ಆಟಗಅರರು ಮುಂದುವರೆಸಿದರೆ ಪ್ರವಾಸಿಗರ ಸರಣಿ ಗೆಲುವಿನ ಕನಸು ನನಸಾಗಲಿದೆ.
-
Snaps form the Bangladesh team's final practice session ahead of the second T20I. pic.twitter.com/HLiApKv2QG
— Bangladesh Cricket (@BCBtigers) 6 November 2019 " class="align-text-top noRightClick twitterSection" data="
">Snaps form the Bangladesh team's final practice session ahead of the second T20I. pic.twitter.com/HLiApKv2QG
— Bangladesh Cricket (@BCBtigers) 6 November 2019Snaps form the Bangladesh team's final practice session ahead of the second T20I. pic.twitter.com/HLiApKv2QG
— Bangladesh Cricket (@BCBtigers) 6 November 2019
ಪಂದ್ಯಕ್ಕೆ 'ಮಹಾ' ಭೀತಿ..!
ಮಹಾ ಸೈಕ್ಲೋನ್ ಗುಜರಾತ್ ಕರಾವಳಿಯತ್ತ ಮುಖ ಮಾಡಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಇಂದು ಇಲ್ಲವೇ ನಾಳೆ ಮಹಾ ಸೈಕ್ಲೋನ್ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ. 80ರಿಂದ 90ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರಿ ಮಳೆಯೂ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸಂಭಾವ್ಯ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ದೀಪಕ್ ಚಹರ್, ಶಿವಂ ದುಬೆ
ಸಂಭಾವ್ಯ ಬಾಂಗ್ಲಾದೇಶ ತಂಡ:
ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಮೊಹಮ್ಮದ್ ನೈಮ್, ಮಹಮದುಲ್ಲ(ನಾಯಕ), ಮುಷ್ಫೀಕರ್ ರಹೀಂ, ಅಫಿಫ್ ಹೊಸೇನ್, ಮೊಸಾದ್ದೀಕ್ ಹೊಸೈನ್, ಅನಿಮುಲ್ ಇಸ್ಲಾಂ, ಶೈಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್, ಅಲ್ ಅಮಿನ್ ಹುಸೇನ್