ETV Bharat / sports

ಸಯ್ಯದ್​ ಮುಷ್ತಾಕ್ ಅಲಿ: ರಾಜಸ್ಥಾನ ವಿರುದ್ಧ ಭರ್ಜರಿ ಜಯ ದಾಖಲಿಸಿ ಫೈನಲ್​ಗೆ ತಮಿಳುನಾಡು ಲಗ್ಗೆ!

author img

By

Published : Jan 29, 2021, 7:15 PM IST

ರಾಜಸ್ಥಾನ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ತಮಿಳುನಾಡು ತಂಡ ಫೈನಲ್​ಗೆ ಲಗ್ಗೆ ಹಾಕಿದೆ.

Syed Mushtaq Ali Trophy
Syed Mushtaq Ali Trophy

ಅಹ್ಮದಾಬಾದ್​: ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ರಾಜಸ್ಥಾನದ ಮೇಲೆ ಸವಾರಿ ನಡೆಸಿದ ತಮಿಳುನಾಡು ಫೈನಲ್​ಗೆ ಲಗ್ಗೆ ಹಾಕಿದೆ.

ಸರ್ದಾರ್​​ ಪಟೇಲ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 154 ರನ್ ​ಗಳಿಸಿತು. ತಂಡದ ಪರ ಕ್ಯಾಪ್ಟನ್​ ಮಿನಾರೈ(51), ಗುಪ್ತಾ(45)ರನ್​ ಗಳಿಸಿದರು.

Tamil Nadu march into the final! 👍👍

The @DineshKarthik-led unit beat Rajasthan by 7⃣ wickets to seal a place in the summit clash. 👏👏 #TNvRAJ #SyedMushtaqAliT20 #SF1 | @TNCACricket

Scorecard 👉 https://t.co/Y5DkQ6696D pic.twitter.com/XSDihUgY3E

— BCCI Domestic (@BCCIdomestic) January 29, 2021

ತಮಿಳುನಾಡು ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ತೋರಿದ ಮೊಹಮ್ಮದ್​ 4 ವಿಕೆಟ್​, ಸಾಯಿ ಕಿಶೋರ್​ 2 ಹಾಗೂ ಸೋನು ಯಾದವ್​, ಅರ್ಪಜಿತ್​ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದುಕೊಂಡರು.

155 ರನ್​ಗಳ ಗುರಿ ಬೆನ್ನತ್ತಿದ್ದ ತಮಿಳುನಾಡು ತಂಡ ಆರಂಭದಲ್ಲೇ ಹರಿ ನಿಶಾಂತ್​(4) ವಿಕೆಟ್ ಕಳೆದುಕೊಳ್ತು. ಆದರೆ ಈ ವೇಳೆ ಒಂದಾದ ಜಗದೀಶನ್​(28) ಹಾಗೂ ಅರುಣ್ ಕಾರ್ತಿಕ್​(89) ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು. ಅರುಣ್​ ಕಾರ್ತಿಕ್​ 54 ಎಸೆತಗಳಲ್ಲಿ ಬರೋಬ್ಬರಿ ಅಜೇಯ 89 ರನ್ ​ಗಳಿಸಿದ್ರೆ, ಕ್ಯಾಪ್ಟನ್ ಕಾರ್ತಿಕ್​ ಅಜೇಯ 26 ರನ್​ ಗಳಿಸಿ ತಂಡ ಗೆಲ್ಲುವಂತೆ ಮಾಡಿದರು.

ತಮಿಳುನಾಡು ತಂಡ 18.4 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 158 ರನ್​ ಗಳಿಸಿ ಸತತ ಎರಡನೇ ಸಲ ಫೈನಲ್​ಗೆ ಲಗ್ಗೆ ಹಾಕಿದೆ. ಮತ್ತೊಂದು ಪಂದ್ಯದಲ್ಲಿ ಪಂಜಾಬ್​-ಬರೋಡಾ ಮುಖಾಮುಖಿಯಾಗಿವೆ.

ಸ್ಕೋರ್ ವಿವರ: ತಮಿಳುನಾಡು (158/3 18.4 ಓವರ್​), ರಾಜಸ್ಥಾನ 154/9 20 ಓವರ್​)

ಅಹ್ಮದಾಬಾದ್​: ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ರಾಜಸ್ಥಾನದ ಮೇಲೆ ಸವಾರಿ ನಡೆಸಿದ ತಮಿಳುನಾಡು ಫೈನಲ್​ಗೆ ಲಗ್ಗೆ ಹಾಕಿದೆ.

ಸರ್ದಾರ್​​ ಪಟೇಲ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 154 ರನ್ ​ಗಳಿಸಿತು. ತಂಡದ ಪರ ಕ್ಯಾಪ್ಟನ್​ ಮಿನಾರೈ(51), ಗುಪ್ತಾ(45)ರನ್​ ಗಳಿಸಿದರು.

ತಮಿಳುನಾಡು ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ತೋರಿದ ಮೊಹಮ್ಮದ್​ 4 ವಿಕೆಟ್​, ಸಾಯಿ ಕಿಶೋರ್​ 2 ಹಾಗೂ ಸೋನು ಯಾದವ್​, ಅರ್ಪಜಿತ್​ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದುಕೊಂಡರು.

155 ರನ್​ಗಳ ಗುರಿ ಬೆನ್ನತ್ತಿದ್ದ ತಮಿಳುನಾಡು ತಂಡ ಆರಂಭದಲ್ಲೇ ಹರಿ ನಿಶಾಂತ್​(4) ವಿಕೆಟ್ ಕಳೆದುಕೊಳ್ತು. ಆದರೆ ಈ ವೇಳೆ ಒಂದಾದ ಜಗದೀಶನ್​(28) ಹಾಗೂ ಅರುಣ್ ಕಾರ್ತಿಕ್​(89) ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು. ಅರುಣ್​ ಕಾರ್ತಿಕ್​ 54 ಎಸೆತಗಳಲ್ಲಿ ಬರೋಬ್ಬರಿ ಅಜೇಯ 89 ರನ್ ​ಗಳಿಸಿದ್ರೆ, ಕ್ಯಾಪ್ಟನ್ ಕಾರ್ತಿಕ್​ ಅಜೇಯ 26 ರನ್​ ಗಳಿಸಿ ತಂಡ ಗೆಲ್ಲುವಂತೆ ಮಾಡಿದರು.

ತಮಿಳುನಾಡು ತಂಡ 18.4 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 158 ರನ್​ ಗಳಿಸಿ ಸತತ ಎರಡನೇ ಸಲ ಫೈನಲ್​ಗೆ ಲಗ್ಗೆ ಹಾಕಿದೆ. ಮತ್ತೊಂದು ಪಂದ್ಯದಲ್ಲಿ ಪಂಜಾಬ್​-ಬರೋಡಾ ಮುಖಾಮುಖಿಯಾಗಿವೆ.

ಸ್ಕೋರ್ ವಿವರ: ತಮಿಳುನಾಡು (158/3 18.4 ಓವರ್​), ರಾಜಸ್ಥಾನ 154/9 20 ಓವರ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.