ಸೌತಾಂಪ್ಟನ್: ಭಾರತದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಐಸಿಸಿ ನೂತನವಾಗಿ ಬಿಡುಗಡೆ ಮಾಡಿರುವ ಟಿ20 ಶ್ರೇಯಾಂಕದಲ್ಲಿ ಟಾಪ್ 10ರಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಹುಲ್ 2 ಸ್ಥಾನ ಕಳೆಗಿಳಿದು 4ನೇ ಸ್ಥಾನದಲ್ಲಿದ್ದರೆ, ವಿರಾಟ್ ಒಂದು ಸ್ಥಾನ ಬಡ್ತಿ ಪಡೆದು 9ನೇ ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಡೇವಿಡ್ ಮಲನ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.
ಮಲನ್ ಮೂರು ಪಂದ್ಯಗಳಿಂದ 129 ರನ್ಗಳಿಸಿದ್ದರು. ಮೊದಲ ಪಂದ್ಯದಲ್ಲಿ 66 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಕಳೆದ ವರ್ಷ ನವೆಂಬರ್ನಲ್ಲಿ 2ನೇ ಶ್ರೇಯಾಂಕ ಪಡೆದಿದ್ದದ್ದು ಇಲ್ಲಿಯವರೆಗಿನ ಶ್ರೇಷ್ಠ ಶ್ರೇಯಾಂಕವಾಗಿತ್ತು. ಇದೀಗ ಸುಮಾರು 2 ವರ್ಷಗಳ ಕಾಲ ಟಿ20 ಕ್ರಿಕೆಟ್ನಲ್ಲಿ ಮೊದಲ ಸ್ಥಾನ ಆಕ್ರಮಿಸಿದ್ದ ಬಾಬರ್ ಅಜಮ್ರನ್ನು ಹಿಂದಿಕ್ಕಿದ್ದಾರೆ. ಮಲನ್ ಬಾಬರ್ಗಿಂತ 8 ರೇಟಿಂಗ್ ಪಾಯಿಂಟ್ ಮುಂದಿದ್ದಾರೆ.
-
🎉 Dawid Malan rises to No.1 🎉
— ICC (@ICC) September 9, 2020 " class="align-text-top noRightClick twitterSection" data="
The England batsman, who topped the run-scoring charts in the #ENGvAUS series, has jumped four places on the @MRFWorldwide ICC Men's T20I Rankings 🔥 pic.twitter.com/rLvECHFigb
">🎉 Dawid Malan rises to No.1 🎉
— ICC (@ICC) September 9, 2020
The England batsman, who topped the run-scoring charts in the #ENGvAUS series, has jumped four places on the @MRFWorldwide ICC Men's T20I Rankings 🔥 pic.twitter.com/rLvECHFigb🎉 Dawid Malan rises to No.1 🎉
— ICC (@ICC) September 9, 2020
The England batsman, who topped the run-scoring charts in the #ENGvAUS series, has jumped four places on the @MRFWorldwide ICC Men's T20I Rankings 🔥 pic.twitter.com/rLvECHFigb
2 ಪಂದ್ಯಗಳಿಂದ 121 ರನ್ ಸಿಡಿಸಿದ್ದ ಬಟ್ಲರ್ 40 ರಿಂದ 28ನೇ ಸ್ಥಾನಕ್ಕೆ, ಬೈರ್ಸ್ಟೋವ್ 22 ರಿಂದ 19ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ 3 ಹಾಗೂ ಮ್ಯಾಕ್ಸ್ವೆಲ್ 6ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅವರು ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಅಫ್ಘಾನಿಸ್ತಾನದ ನಬಿ ಅಗ್ರಸ್ಥಾನದಲ್ಲಿದ್ದಾರೆ.
-
🥇 Australia are back on 🔝 🎆 pic.twitter.com/KRaAaeiZpX
— ICC (@ICC) September 8, 2020 " class="align-text-top noRightClick twitterSection" data="
">🥇 Australia are back on 🔝 🎆 pic.twitter.com/KRaAaeiZpX
— ICC (@ICC) September 8, 2020🥇 Australia are back on 🔝 🎆 pic.twitter.com/KRaAaeiZpX
— ICC (@ICC) September 8, 2020
ಬೌಲಿಂಗ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ತಂಡದ ರಶೀದ್ 2 ಸ್ಥಾನ ಏರಿಕೆ ಕಂಡು 7ನೇ ಸ್ಥಾನಕ್ಕೂ, ಆಸ್ಟ್ರೇಲಿಯಾದ ಆಶ್ಟನ್ ಅಗರ್ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ ಹಾಗೂ ಮುಜೀವ್ ಉರ್ ರೆಹಮಾನ್ ಇದ್ದಾರೆ.
ತಂಡದ ಶ್ರೇಯಾಂಕದಲ್ಲಿ ಕೊನೆಯ ಪಂದ್ಯ ಗೆದ್ದ ಆಸ್ಟ್ರೇಲಿಯಾ(275) ಮೊದಲ ಸ್ಥಾನವನ್ನು ಮರಳಿ ಪಡೆದಿದೆ. ಎರಡನೇ ಪಂದ್ಯದ ನಂತರ 273 ಅಂಕ ಪಡೆದು ಅಗ್ರಸ್ಥಾನಕ್ಕೇರಿದ್ದ ಇಂಗ್ಲೆಂಡ್(271) ಕೊನೆಯ ಪಂದ್ಯದ ಸೋಲಿನೊಂದಿಗೆ ಮತ್ತೆ 2 ಅಂಕ ಕಳೆದುಕೊಂಡು 2ನೇ ಸ್ಥಾನಕ್ಕೆ ಕುಸಿದಿದೆ. ಭಾರತ(266) ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.