ಲಂಡನ್: ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾಲಿನ್ ಅಕೆರ್ಮನ್ ಟಿ-20 ಬ್ಲಾಸ್ಟ್ ಲೀಗ್ನಲ್ಲಿ 7 ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಲೈಸೆಸ್ಟರ್ಶೈರ್ ತಂಡದ ಪರ ಆಡುತ್ತಿರುವ ಅಕೆರ್ಮನ್ ಬುಧವಾರ ನಡೆದ ಪಂದ್ಯದಲ್ಲಿ ವಾರ್ವಿಕ್ಶೈರ್ ತಂಡದ ವಿರುದ್ಧ 4 ಓವರ್ಗಳಲ್ಲಿ 18 ರನ್ ನೀಡಿ 7 ವಿಕೆಟ್ ಪಡೆದರು. 7 ವಿಕೆಟ್ಗಳಲ್ಲಿ 6 ವಿಕೆಟ್ಗಳನ್ನು ತಮ್ಮ ಕೊನೆಯ 2 ಓವರ್ಗಳಲ್ಲಿ ಪಡೆದಿದ್ದು ವಿಶೇಷವಾಗಿದೆ.
ನಾಲ್ವರು ಬ್ಯಾಟ್ಸ್ಮನ್ಗಳನ್ನು ಬೌಲ್ಡ್ ಹಾಗೂ ಮೂವರು ಕ್ಯಾಚ್ ನೀಡಿ ಆಕೆರ್ಮನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಅಕೆರ್ಮನ್ ಬ್ಯಾಟಿಂಗ್ ಆಲ್ರೌಂಡರ್ ಆಗಿರುವುದರಿಂದ ಈ ಸಾಧನೆ ವಿಶೇಷವಾಗಿದೆ. ಇವರ ಬೌಲಿಂಗ್ ನೆರವಿನಿಂದ ಲೈಸೆಸ್ಟರ್ಶೈರ್ 55 ರನ್ಗಳ ವಿಜಯ ಸಾಧಿಸಿದೆ.
-
0️⃣3️⃣4️⃣W0️⃣1️⃣0️⃣1️⃣1️⃣1️⃣1️⃣1️⃣W2️⃣W0️⃣W0️⃣W1️⃣1️⃣W1️⃣W
— Vitality Blast (@VitalityBlast) August 7, 2019 " class="align-text-top noRightClick twitterSection" data="
Colin Ackermann takes 7/18 - the best bowling figures in T20 history
➡️ https://t.co/afo2WOG7iX pic.twitter.com/BLgpf0H2F1
">0️⃣3️⃣4️⃣W0️⃣1️⃣0️⃣1️⃣1️⃣1️⃣1️⃣1️⃣W2️⃣W0️⃣W0️⃣W1️⃣1️⃣W1️⃣W
— Vitality Blast (@VitalityBlast) August 7, 2019
Colin Ackermann takes 7/18 - the best bowling figures in T20 history
➡️ https://t.co/afo2WOG7iX pic.twitter.com/BLgpf0H2F10️⃣3️⃣4️⃣W0️⃣1️⃣0️⃣1️⃣1️⃣1️⃣1️⃣1️⃣W2️⃣W0️⃣W0️⃣W1️⃣1️⃣W1️⃣W
— Vitality Blast (@VitalityBlast) August 7, 2019
Colin Ackermann takes 7/18 - the best bowling figures in T20 history
➡️ https://t.co/afo2WOG7iX pic.twitter.com/BLgpf0H2F1
ಮೊದಲು ಬ್ಯಾಟಿಂಗ್ ನಡೆಸಿದ್ದ ಲೈಸೆಸ್ಟರ್ಶೈರ್ ತಂಡ 189 ರನ್ಗಳಿಸಿತ್ತು. 19 ರನ್ಗಳ ಗುರಿ ಪಡೆದಿದ್ದ ಲೈಸೆಸ್ಟರ್ಶೈರ್ ಅಕೆರ್ಮನ್ ಬೌಲಿಂಗ್ ದಾಳಿಗೆ ಸಿಲುಕಿ 17.4 ಓವರ್ಗಳಲ್ಲಿ 134 ರನ್ಗಳಿಗೆ ಆಲೌಟ್ ಆಗುವ ಮೂಲಕ 55 ರನ್ಗಳ ಸೋಲುಕಂಡಿತು.
ಇವರಿಗೂ ಮೊದಲು ಕಡಿಮೆ ರನ್ ನೀಡಿ ಹೆಚ್ಚು ವಿಕೆಟ್ ಪಡದಿದ್ದ ದಾಖಲೆ ಮಲೇಶಿಯಾದ ಅರುಲ್ ಸುಪ್ಪಯ್ಯ ಹೆಸರಿನಲ್ಲಿತ್ತು. 2011ರಲ್ಲಿ ಸಮರ್ಸೆಟ್ ಪರ ಆಡಿದ್ದ ಅವರು 5 ರನ್ನೀಡಿ 6 ವಿಕೆಟ್ ಪಡೆದಿದ್ದರು