ರಿಚ್ಮಂಡ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಇಂಗ್ಲೆಂಡ್ನ ಟಿ-20 ಬ್ಲಾಸ್ಟ್ನಲ್ಲಿ ಎದುರಾಳಿ ಬೌಲರ್ಗಳನ್ನು ಬ್ಲಾಸ್ಟ್ ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಟಿ-20 ಬ್ಲಾಸ್ಟ್ನಲ್ಲಿ ಕಾಣಿಸಿಕೊಂಡಿರುವ ಎಬಿಡಿ ಮಿಡ್ಲ್ಸೆಕ್ಸ್ ತಂಡದ ಪರ ಆಡಿರುವ 4 ಪಂದ್ಯಗಳಲ್ಲಿ 189 ರನ್ ಸಿಡಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಭಾನುವಾರ ನಡೆದ ಸಮರ್ಸೆಟ್ ವಿರುದ್ಧ ತಮ್ಮ ನೈಜ ಆಟ ಪ್ರದರ್ಶಸಿರುವ ಎಬಿಡಿ 35 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿದ್ದಾರೆ.
-
📹 | @ABdeVilliers17 put on a show at @OldDeerPark! 💥
— Middlesex Cricket (@Middlesex_CCC) August 5, 2019 " class="align-text-top noRightClick twitterSection" data="
8️⃣8️⃣ not out
3️⃣5️⃣ deliveries
9️⃣ x sixes 🔥
1️⃣ x four 💪
1️⃣ x 🐐?#TeamMiddlesex #Mr360 #GOAT pic.twitter.com/ny3KwQRMKM
">📹 | @ABdeVilliers17 put on a show at @OldDeerPark! 💥
— Middlesex Cricket (@Middlesex_CCC) August 5, 2019
8️⃣8️⃣ not out
3️⃣5️⃣ deliveries
9️⃣ x sixes 🔥
1️⃣ x four 💪
1️⃣ x 🐐?#TeamMiddlesex #Mr360 #GOAT pic.twitter.com/ny3KwQRMKM📹 | @ABdeVilliers17 put on a show at @OldDeerPark! 💥
— Middlesex Cricket (@Middlesex_CCC) August 5, 2019
8️⃣8️⃣ not out
3️⃣5️⃣ deliveries
9️⃣ x sixes 🔥
1️⃣ x four 💪
1️⃣ x 🐐?#TeamMiddlesex #Mr360 #GOAT pic.twitter.com/ny3KwQRMKM
ಎಬಿಡಿ ಸ್ಫೋಟಕ 88 ರನ್ಗಳ ನೆರವಿನಿಂದ ಮಿಡ್ಲ್ಸೆಕ್ಸ್ ತಂಡ 20 ಓವರ್ಗಳಲ್ಲಿನ 215 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಸಮರ್ಸೆಟ್ 180 ರನ್ಗಳಿಸಲಷ್ಟೇ ಶಕ್ತವಾಗಿ 35 ರನ್ಗಳ ಸೋಲನುಭವಿಸಿತ್ತು.
ಎಬಿಡಿ ತಾವಾಡಿದ ಮೊದಲ ಟಿ-20 ಬ್ಲಾಸ್ಟ್ ಪಂದ್ಯದಲ್ಲಿಯೂ 88 ರನ್ಗಳಿಸಿದ್ದರು. ಅಂದೂ ಕೂಡ 5 ಬೌಂಡರಿ 6 ಸಿಕ್ಸರ್ ಸಿಡಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾದರೂ ಟಿ-20 ಲೀಗ್ಗಳಲ್ಲಿ ತೊಡಗಿಕೊಂಡಿರುವ ಎಬಿಡಿ ತಮ್ಮ 360 ಆಟವನ್ನು ಮುಂದುವರಿಸಿಕೊಂಡು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.