ವಿಶಾಖಪಟ್ಟಣಂ: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡ ಬಿಹಾರವನ್ನು 9 ವಿಕೆಟ್ಗಳಿಂದ ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ಬಿಹಾರ ತಂಡ 106 ರನ್ನಿಗೆ ಸರ್ವಪತನವಾಯಿತು. ಬಿಹಾರ ತಂಡದ ಪರ ಬಬುಲ್ ಕುಮಾರ್ 41, ರಹ್ಮತುಲ್ಲಾ 23 ರನ್ ಸಿಡಿಸುವ ಮೂಲಕ ಮೂರಂಕಿ ಮೊತ್ತ ದಾಖಲಿಸಲು ನೆರವಾದರು. ಕರ್ನಾಟಕದ ಪರ ಪ್ರವೀಣ್ ದುಬೆ,ರೋನಿತ್ ಮೋರೆ,ಕೆ ಕೆ ವಾಸುಕಿ, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಿತ್ತರು.
ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ, 11.2 ಓವರ್ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಕರ್ನಾಟಕ ತಂಡದ ಕರುಣ್ ನಾಯರ್ 36 ಎಸೆತದಲ್ಲಿ 65 ಹಾಗೂ ದೇವದತ್ ಪಡಿಕ್ಕಲ್ 28 ಎಸೆತದಲ್ಲಿ 37 ರನ್ ಸಿಡಿಸಿ ಸುಲಭ ಜಯ ದೊರಕಿಸಿಕೊಟ್ಟರು.