ETV Bharat / sports

ಸಯ್ಯದ್​ ಮುಷ್ತಾಕ್ ಅಲಿ ಟೂರ್ನಿ: ಮಿಂಚಿದ ಪಡಿಕ್ಕಲ್​, ಚಾಂಪಿಯನ್ ಕರ್ನಾಟಕಕ್ಕೆ 2ನೇ ಜಯ - ಕರ್ನಾಟಕ vs ತ್ರಿಪುರ ಪಂದ್ಯ

ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 2 ಜಯ 1 ಸೋಲು ಕಂಡಿರುವ ಕರ್ನಾಟಕ ತಂಡ 8 ಆಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು 3 ಪಂದ್ಯಗಳಲ್ಲೂ ಜಯ ಸಾಧಿಸಿರುವ ಪಂಜಾಬ್ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಜಮ್ಮು ಮತ್ತು ಕಾಶ್ಮೀರ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಸಯ್ಯದ್​ ಮುಷ್ತಾಕ್ ಅಲಿ ಟೂರ್ನಿ
ಸಯ್ಯದ್​ ಮುಷ್ತಾಕ್ ಅಲಿ ಟೂರ್ನಿ
author img

By

Published : Jan 14, 2021, 6:43 PM IST

ಬೆಂಗಳೂರು: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ತ್ರಿಪುರ ತಂಡವನ್ನು 10 ರನ್​ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ.

ಬೆಂಗಳೂರಿನಲ್ಲಿ ನಡದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 167 ರನ್​ ಗಳಿಸಿದ್ದರು. ಸ್ಟಾರ್​ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಅಜೇಯ 99 ರನ್​ಗಳಿಸಿದರೆ, ರೋಹನ್ ಕಡಂ 31 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

ತ್ರಿಪುರ ಪರ ಎಂಬಿ ಮುರಾ ಸಿಂಗ್​ 27ಕ್ಕೆ1, ರಾಣಾ ದತ್ತ 41ಕ್ಕೆ2, ಶಂಕರ್​ ಪಾಲ್​ 23ಕ್ಕೆ1 ಯು.ಯು.ಬೋ​ಸ್​ 9ಕ್ಕೆ 1 ವಿಕೆಟ್​ ಪಡೆದಿದ್ದರು.

ಇನ್ನು 168 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ತ್ರಿಪುರ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 157 ರನ್​ಗಳಿಸಲಷ್ಟೇ ಶಕ್ತವಾಯಿತು. ನಾಯಕ ಮುರಾ ಸಿಂಗ್ ಕೇವಲ 33 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್​ ಸಹಿತ 61 ರನ್​ ಹಾಗೂ ರಜತ್​ ದೇಯ್​ 44 ರನ್​ಗಳಿಸಿ ನಡೆಸಿದ ಹೋರಾಟ ವಿಫಲವಾಯಿತು.

ಕರ್ನಾಟಕ ಪರ ಮಿಥುನ್​, ವಿ ಕೌಶಿಕ್, ಕೆ.ಗೌತಮ್ ಹಾಗೂ ಪ್ರವೀಣ್ ದುಬೆ ತಲಾ ಒಂದು ವಿಕೆಟ್​ ಪಡೆದರು. ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 2 ಜಯ ಒಂದು ಸೋಲು ಕಂಡಿರುವ ಕರ್ನಾಟಕ ತಂಡ 8 ಆಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು 3 ಪಂದ್ಯಗಳಲ್ಲೂ ಜಯ ಸಾಧಿಸಿರುವ ಪಂಜಾಬ್ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಜಮ್ಮು ಮತ್ತು ಕಾಶ್ಮೀರ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಇದನ್ನು ಓದಿ: ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿ: 1 ರನ್ನಿಂದ ಶತಕ ತಪ್ಪಿಸಿಕೊಂಡ ಪಡಿಕ್ಕಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.