ಸೂರತ್: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೂರತ್ನ ಲಾಲಾಬಾಯ್ ಸ್ಟೇಡಿಯಂನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ 1 ರನ್ ಅಂತರದಲ್ಲಿ ಗೆಲ್ಲುವ ಮೂಲಕ ಕರ್ನಾಟಕ ಚಾಂಪಿಯನ್ ಪಟ್ಟ ಅಲಂಕರಿಸಿದೆ.
-
Smiles galore for Karnataka after bagging two in a row #MushtaqAliT20 #KARvTN @Paytm 🏆🏆
— BCCI Domestic (@BCCIdomestic) December 1, 2019 " class="align-text-top noRightClick twitterSection" data="
Check out the full scorecard here https://t.co/NPZT6LnSZd pic.twitter.com/zrPh132vjQ
">Smiles galore for Karnataka after bagging two in a row #MushtaqAliT20 #KARvTN @Paytm 🏆🏆
— BCCI Domestic (@BCCIdomestic) December 1, 2019
Check out the full scorecard here https://t.co/NPZT6LnSZd pic.twitter.com/zrPh132vjQSmiles galore for Karnataka after bagging two in a row #MushtaqAliT20 #KARvTN @Paytm 🏆🏆
— BCCI Domestic (@BCCIdomestic) December 1, 2019
Check out the full scorecard here https://t.co/NPZT6LnSZd pic.twitter.com/zrPh132vjQ
ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಮಿಳುನಾಡು ತಂಡ ಕರ್ನಾಟಕವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡ ಮೊದಲ ನಾಲ್ಕು ಓವರ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿತ್ತು, ಆದರೆ 5ನೇ ಓವರ್ ಬೌಲಿಂಗ್ಗೆ ಇಳಿದ ಆರ್ ಅಶ್ವಿನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ರನ್ ಪೆವಿಲಿಯನ್ಗೆ ಕಳುಹಿಸಿದ್ರು.
-
Dominance!
— BCCI Domestic (@BCCIdomestic) December 1, 2019 " class="align-text-top noRightClick twitterSection" data="
2018 ✅
2019 ✅
Yet another Syed Mushtaq Ali trophy title for Karnataka #KARvTN @Paytm #MushtaqAliT20
Click here for the full scorecard - https://t.co/NPZT6LnSZd pic.twitter.com/yPAEPfwSGi
">Dominance!
— BCCI Domestic (@BCCIdomestic) December 1, 2019
2018 ✅
2019 ✅
Yet another Syed Mushtaq Ali trophy title for Karnataka #KARvTN @Paytm #MushtaqAliT20
Click here for the full scorecard - https://t.co/NPZT6LnSZd pic.twitter.com/yPAEPfwSGiDominance!
— BCCI Domestic (@BCCIdomestic) December 1, 2019
2018 ✅
2019 ✅
Yet another Syed Mushtaq Ali trophy title for Karnataka #KARvTN @Paytm #MushtaqAliT20
Click here for the full scorecard - https://t.co/NPZT6LnSZd pic.twitter.com/yPAEPfwSGi
ಆ ಮೂಲಕ 39 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೇವದತ್ತ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಆಸರೆಯಾದ್ರು. ಈ ಜೋಡಿ ಉತ್ತಮ ಜೊತೆಯಾಟದ ಮೂಲಕ ತಂಡವನ್ನ ಉತ್ತಮ ಮೊತ್ತದತ್ತ ಮುನ್ನಡೆಸಿದ್ರು. ಇದರಲ್ಲಿ ಪಡಿಕ್ಕಲ್ 32 ರನ್ ಮಾಡಿದ್ರೆ, ನಾಯಕ ಮನೀಶ್ ಪಾಂಡೆ 60 ರನ್ ಮಾಡಿ ಅಜೇಯರಾಗಿ ಉಳಿದ್ರು. ಕೊನೆಯಲ್ಲಿ ರೋಹನ್ ಕದಮ್ 35 ಹಾಗೂ ಕರುಣ್ ನಾಯರ್ 17 ರನ್ ಮಾಡುವ ಮೂಲಕ ತಂಡದ ಮೊತ್ತವನ್ನ 180 ರನ್ಗೆ ಹೆಚ್ಚಿಸಿದ್ರು.
ಇನ್ನೂ 181 ರನ್ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿದ ತಮಿಳುನಾಡು ತಂಡ 179 ರನ್ ಕಲೆಹಾಕಿ ಒಂದು ರನ್ ಅಂತರದಿಂದ ಸೋಲೊಪ್ಪಿಕೊಳ್ತು. ಬಾಬಾ ಅಪರಿಜಿತ್ ಮತ್ತು ವಿಜಯ್ ಶಂಕರ್ ತಂಡವನ್ನ ಗೆಲುವಿನ ಸಮೀಪಕ್ಕೆ ಕೊಂಡೊಯ್ದರೂ ಸಹ ಗೆಲುವು ತಂದುಕೊಡಲು ವಿಫಲವಾದ್ರು, ಕೊನೇ ಓವರ್ನಲ್ಲಿ 13 ರನ್ ಬೇಕಾಗಿದ್ದಾಗ ಬೌಲಿಂಗ್ ಮಾಡಿದ ಕೃಷ್ಣಪ್ಪ ಗೌತಮ್ ಕೇವಲ 11 ರನ್ ನೀಡಿ ತಂಡದ ಗೆಲುವಿಗೆ ಕಾರಣವಾದ್ರು, ಆ ಮೂಲಕ ಕರ್ನಾಟಕ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.