ETV Bharat / sports

ನಾಳೆಯಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಸುಲಭ ಎದುರಾಳಿ

ಲೀಗ್​ನಲ್ಲಿ 38 ತಂಡಗಳಿದ್ದು, 6 ಗುಂಪುಗಳಾಗಿ ವಿಂಗಡಿಸಲಾಗಿದೆ. 5 ಗುಂಪುಗಳಲ್ಲಿ ಬಲಿಷ್ಠ 6 ತಂಡಗಳಿರಲಿವೆ. ಪ್ಲೇಟ್​ ಗುಂಪಿನಲ್ಲಿ 8 ತಂಡಗಳಿವೆ. ಬೆಂಗಳೂರು, ವಡೋದರಾ, ಇಂದೋರ್​, ಮುಂಬೈ ಮತ್ತು ಚೆನ್ನೈನಲ್ಲಿ ಲೀಗ್​ ಹಂತದ ಪಂದ್ಯಗಳು ಮತ್ತು ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್​ ಪಂದ್ಯಗಳು ನಡೆಯಲಿವೆ.

author img

By

Published : Jan 9, 2021, 7:01 PM IST

Updated : Jan 9, 2021, 9:24 PM IST

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ

ಮುಂಬೈ: ಜನವರಿ 10ರಿಂದ ದೇಶಿ ಋತುವಿಗೆ ಚಾಲನೆ ದೊರೆಯಲಿದೆ. ಬಿಸಿಸಿಐ ಆಯೋಜಿಸುವ ಟಿ-20 ಮಾದರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ ನಾಳೆಯಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕರ್ನಾಟಕ ತಂಡ ಜಮ್ಮು-ಕಾಶ್ಮೀರ ತಂಡವನ್ನು ಆಲೂರಿನ ಕೆಎಸ್​ಸಿಎ ಗ್ರೌಂಡ್​ನಲ್ಲಿ ಎದುರಿಸಲಿದೆ.

ಲೀಗ್​ನಲ್ಲಿ 38 ತಂಡಗಳಿದ್ದು, 6 ಗುಂಪುಗಳಾಗಿ ವಿಂಗಡಿಸಲಾಗಿದೆ. 5 ಗುಂಪುಗಳಲ್ಲಿ ಬಲಿಷ್ಠ 6 ತಂಡಗಳಿರಲಿವೆ. ಪ್ಲೇಟ್​ ಗುಂಪಿನಲ್ಲಿ 8 ತಂಡಗಳಿವೆ. ಬೆಂಗಳೂರು, ವಡೋದರಾ, ಇಂದೋರ್​, ಮುಂಬೈ ಮತ್ತು ಚೆನ್ನೈನಲ್ಲಿ ಲೀಗ್​ ಹಂತದ ಪಂದ್ಯಗಳು ಮತ್ತು ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್​ ಪಂದ್ಯಗಳು ನಡೆಯಲಿವೆ.

ಕರ್ನಾಟಕ ತಂಡ ಇರುವ ಎ ಗುಂಪಿನಲ್ಲಿ ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಪಂಜಾಬ್, ರೈಲ್ವೇಸ್, ತ್ರಿಪುರ ತಂಡಗಳು ಸ್ಥಾನ ಪಡೆದಿವೆ.

ಕರ್ನಾಟಕ ಮತ್ತು ಜಮ್ಮು ಕಾಶ್ಮೀರದ ನಡುವಿನ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಕರ್ನಾಟಕ ತಂಡ 2018-19, 2019-20ರಲ್ಲಿ ಚಾಂಪಿಯನ್​ ಆಗಿತ್ತು.

ಕರ್ನಾಟಕ ತಂಡ

ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ(ಉಪ ನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಂ, ಕೆವಿ ಸಿದ್ದಾರ್ಥ, ಕೆ.ಎಲ್.ಶ್ರೀಜಿತ್, ಬಿ.ಆರ್.ಶರತ್, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್​, ಜಗದೀಶ ಸುಚಿತ್, ಪ್ರವೀಣ್ ದುಬೇ, ಅಭಿಮನ್ಯು ಮಿಥುನ್, ಪ್ರಸಿಧ್ ಕೃಷ್ಣ, ಪ್ರತೀಕ್ ಜೈನ್, ವಿ.ಕೌಶಿಕ್, ರೋನಿತ್ ಮೋರೆ, ದರ್ಶನ್ ಎಂ.ಬಿ., ಮನೋಜ್ ಭಾಂಡಗೆ, ಶುಭಾಂಗ್ ಹೆಗ್ಡೆ.

Last Updated : Jan 9, 2021, 9:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.