ಸೂರತ್: ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಭವಿಷ್ಯ ನಿರ್ಧರಿಸುವ ಪಂದ್ಯದಲ್ಲಿ ಮುಂಬೈ ತಂಡ ಕಡಿಮೆ ಅಂತರದ ಗೆಲುವು ದಾಖಲಿಸಿದ್ದು, ಈ ಮೂಲಕ ಕರ್ನಾಟಕದ ಸೆಮಿಫೈನಲ್ ತಲುಪಿದೆ.
ಮುಂಬೈ- ಪಂಜಾಬ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ 53(27 ಎಸೆತ), ಶ್ರೇಯಸ್ ಅಯ್ಯರ್ 80(40 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್ 80(35 ಎಸೆತ) ರನ್ ಮೂಲಕ ಮುಂಬೈ ತಂಡ ನಿಗದಿತ 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಮುಂಬೈ ಸೆಮೀಸ್ಗೆ ಲಗ್ಗೆ ಇಡಬೇಕಿದ್ದರೆ ಪಂದ್ಯವನ್ನು ಕನಿಷ್ಠ 90 ರನ್ಗಳ ಅಂತರದಿಂದ ಗೆಲ್ಲಬೇಕಿತ್ತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಮುಂಬೈ ತಂಡ ಬೌಲಿಂಗ್ನಲ್ಲಿ ಬಿಗು ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
- ' class='align-text-top noRightClick twitterSection' data=''>
ಬೃಹತ್ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡಕ್ಕೆ ಅರಂಭಿಕ ಅಟಗಾರ ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಗಿಲ್ ಹಾಗೂ ಗುರುಕೀರತ್ ಸಿಂಗ್ ನಡುವಿನ ಜೊತೆಯಾಟ ಮುಂಬೈ ಸೆಮೀಸ್ ಹಾದಿಗೆ ಮುಳ್ಳಾಯಿತು. ಗಿಲ್ ಅಬ್ಬರದ 78(38 ಎಸೆತ), ಅಭಿಷೇಕ್ ಶರ್ಮಾ 47(29 ಎಸೆತ) ಹಾಗೀ ಗುರುಕೀರತ್ ಸಿಂಗ್ 40(21 ಎಸೆತ) ಮೂಲಕ ಪಂಜಾಬ್ ಗುರಿಯ ಸನಿಹ ಬಂದು ವಿರೋಚಿತ ಸೋಲು ಕಂಡಿತು.
ಪಂಜಾಬ್ ತಂಡ 20 ಓವರ್ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸುವ ಮೂಲಕ 22 ರನ್ಗಳಿಂದ ಸೋಲು ಕಂಡಿತು. ರೋಚಕವಾಗಿ ಸಾಗಿದ್ದ ಈ ಪಂದ್ಯದಲ್ಲಿ ಒಟ್ಟಾರೆ 40 ಓವರ್ನಲ್ಲಿ 464 ರನ್ ದಾಖಲಾಯಿತು.
ಈ ಪಂದ್ಯದಲ್ಲಿ ರನ್ರೇಟ್ಗೆ ಅಗತ್ಯವಿದ್ದ ಅಂತರದಿಂದ ಗೆಲ್ಲಲು ಮುಂಬೈ ವಿಫಲವಾದ ಪರಿಣಾಮ ಮುಂಬೈ ಟೂರ್ನಿಯಿಂದ ಹೊರಬಿತ್ತು. ಆರ್ಸಿಬಿ ಪರ ಆಡಿದ್ದ ಗುರುಕೀರತ್ ಆಟ ಕರ್ನಾಟಕದ ಸೆಮೀಸ್ ಹಾದಿ ಸುಗಮಗೊಳಿಸಿದ್ದು ವಿಶೇಷ. ನಿನ್ನೆಯ ಪಂದ್ಯದ ಫಲಿತಾಂಶದ ಆಧಾರದಲ್ಲಿ ಕರ್ನಾಟಕ ಸೆಮೀಸ್ ತಲುಪಿದ್ದು, ನಾಳೆ ಹರಿಯಾಣವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್ನಲ್ಲಿ ತಮಿಳುನಾಡು ತಂಡಕ್ಕೆ ರಾಜಸ್ಥಾನ ಎದುರಾಗಲಿದೆ. ಡಿ.1ರಂದು ಟೂರ್ನಿಯ ಉಪಾಂತ್ಯ ಪಂದ್ಯ ನಡೆಯಲಿದೆ.
-
🚨UPDATE🚨: Semi-final spots are now confirmed.
— BCCI Domestic (@BCCIdomestic) November 27, 2019 " class="align-text-top noRightClick twitterSection" data="
Haryana vs Karnataka
Tamil Nadu vs Rajasthan
Which two teams will qualify for the final?@paytm #MushtaqAliT20
">🚨UPDATE🚨: Semi-final spots are now confirmed.
— BCCI Domestic (@BCCIdomestic) November 27, 2019
Haryana vs Karnataka
Tamil Nadu vs Rajasthan
Which two teams will qualify for the final?@paytm #MushtaqAliT20🚨UPDATE🚨: Semi-final spots are now confirmed.
— BCCI Domestic (@BCCIdomestic) November 27, 2019
Haryana vs Karnataka
Tamil Nadu vs Rajasthan
Which two teams will qualify for the final?@paytm #MushtaqAliT20