ETV Bharat / sports

ಪ್ರಪಂಚದೆಲ್ಲೆಡೆ ಚೆಂಡಿನ ಹೊಳಪಿಗೆ ಬೆವರು ಬಳಸುವುದು ಅಸಾಧ್ಯ: ಭುವನೇಶ್ವರ್​ ಕುಮಾರ್​ - ಭಾರತದ ವೇಗಿ ಭುವನೇಶ್ವರ್​ ಕುಮಾರ್

ಕೋವಿಡ್​ 19 ವೈರಸ್​ ಹರಡುವ ಭೀತಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ತಾತ್ಕಾಲಿಕವಾಗಿ ಚೆಂಡು ಹೊಳಪು ಮಾಡಲು ಎಂಜಲು ಬಳಸುವುದನ್ನು ನಿಷೇಧ ಮಾಡಿದೆ. ಇದರ ಬದಲಾಗಿ ಬೆವರು ಬಳಕೆ ಮಾಡಲು ಅವಕಾಶ ನೀಡಿದೆ. ಆದರೆ ಭುವನೇಶ್ವರ್​ ಕುಮಾರ್​ ಪ್ರಪಂಚದೆ ಕೆಲವೆಡೆ ಬೆವರು ಬಾರದಿರುವ ಸಂದರ್ಭದಲ್ಲಿ ಬೌಲರ್​ಗಳಿಗೆ ಕ್ಷವಾಗುತ್ತದೆ ಎಂದಿದ್ದಾರೆ.

Bhuvneshwar
ಭುವನೇಶ್ವರ್​ ಕುಮಾರ್​
author img

By

Published : Jul 12, 2020, 7:03 PM IST

Updated : Jul 12, 2020, 9:02 PM IST

ಮುಂಬೈ: ಭಾರತ ತಂಡದ ಸ್ವಿಂಗ್​ ಸ್ಪೆಷಲಿಸ್ಟ್​ ಭುವನೇಶ್ವರ್​ ಕುಮಾರ್​ ಚೆಂಡಿನ ಹೊಳಪಿಗೆ ಬೆವರು ಬಳಕೆ ಮಾಡಬಹುದು ಎಂಬ ಮಾತಿಗೆ ಪ್ರತಿಕ್ರಿಯಿಸಿದ್ದು, ಪ್ರಪಂಚದೆಲ್ಲೆಡೆ ಬೆವರು ಬಳಕೆ ಮಾಡುವುದು ಅಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಕೋವಿಡ್​ 19 ವೈರಸ್​ ಹರಡುವ ಭೀತಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ತಾತ್ಕಾಲಿಕವಾಗಿ ಚೆಂಡು ಹೊಳಪು ಮಾಡಲು ಎಂಜಲು ಬಳಸುವುದನ್ನು ನಿಷೇಧ ಮಾಡಿದೆ. ಇದರ ಬದಲಾಗಿ ಬೆವರು ಬಳಕೆ ಮಾಡಲು ಅವಕಾಶ ನೀಡಿದೆ. ಆದರೆ ಭುವನೇಶ್ವರ್​ ಕುಮಾರ್​ ಪ್ರಪಂಚದೆ ಕೆಲವೆಡೆ ಬೆವರು ಬಾರದಿರುವ ಸಂದರ್ಭದಲ್ಲಿ ಬೌಲರ್​ಗಳಿಗೆ ಕಷ್ಟವಾಗುತ್ತದೆ ಎಂದಿದ್ದಾರೆ.

ಭುವನೇಶ್ವರ್​ ಕುಮಾರ್​
ಭುವನೇಶ್ವರ್​ ಕುಮಾರ್​

"ಪ್ರಪಂಚದ ಎಲ್ಲೆಡೆ ಬೆವರು ಬಳಕೆ ಸಾಧ್ಯವಿಲ್ಲ, ಖಂಡಿತವಾಗಿಯೂ ಇದು ಸವಾಲಿನ ಸಂಗತಿಯಾಗಿದೆ. ಶೀಘ್ರದಲ್ಲೇ ಈ ಆಲೋಚನೆ ಉತ್ತಮಗೊಳ್ಳುತ್ತವೆ ಎಂದು ಭಾವಿಸುತ್ತೇವೆ" ಎಂದು ಕುಮಾರ್ ಭಾನುವಾರ ಅಭಿಮಾನಿಗಳೊಂದಿಗೆ ನಡೆಸಿದ ಟ್ವಿಟರ್ ಚಾಟ್‌ನಲ್ಲಿ ಹೇಳಿದ್ದಾರೆ.

ಚೆಂಡು ಹೊಳೆಯುವಂತೆ ಮಾಡಲು ಕೃತಕ ವಿಧಾನವನ್ನು ಐಸಿಸಿ ಕಂಡುಕೊಳ್ಳಲಿದೆ ಎಂದು ನಾನು ಭಾವಿಸಿದ್ದೇವೆ. ಇಂಗ್ಲೆಂಡ್​ನಂತಹ ರಾಷ್ಟ್ರಗಳಲ್ಲಿ ಬೌಲಿಂಗ್​ ಮಾಡುವಾಗ ವೇಗಿಗಳಿಗೆ ಅಗತ್ಯವಾಗಿ ಚೆಂಡಿನ ಹೊಳಪು ತರುವ ಯಾವುದಾದರೂ ವಸ್ತು ಅಗತ್ಯವಾಗಿದೆ. ಇದು ವೇಗಿಗಳಿಗಷ್ಟೇ ಅಲ್ಲ ಸ್ಪಿನ್ನರ್​ಗಳಿಗೂ ಅಗತ್ಯ ಎಂದಿದ್ದಾರೆ.

ಭುವನೇಶ್ವರ್​ ಕುಮಾರ್​
ಭುವನೇಶ್ವರ್​ ಕುಮಾರ್​

ಭುವನೇಶ್ವರ್​ ಚಾಟ್​ವೇಳೆ ಕೆಲವು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ಮೊಟ್ಟ ಮೊದಲು ಸ್ವೀಕರಿಸಿದ ಚೆಕ್​ 3000 ರೂ, ಆಗಿತ್ತೆಂದು, ಅದರಲ್ಲೇ ಶಾಪಿಂಗ್​ ಮಾಡಿದ್ದಲ್ಲದೆ ಸ್ವಲ್ಪ ಹಣವನ್ನು ಉಳಿತಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಐಪಿಎಲ್​ನಲ್ಲಿ 2016ರ ಆವೃತ್ತಿಯಲ್ಲಿ ಚಾಂಪಿಯನ್​ ಆಗಿದ್ದು ಅವರಿಗೆ ಅತ್ಯಂತ ಮದುರ ಕ್ಷಣ ಎಂದು ಉತ್ತರಿಸಿದ್ದಾರೆ.

Last Updated : Jul 12, 2020, 9:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.