ಅಬುಧಾಬಿ: ಸೂರ್ಯ ಕುಮಾರ್ ಯಾದವ್ (79) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಆರ್ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳ ಸುಲಭ ಜಯ ಸಾಧಿಸುವ ಮೂಲಕ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ.
ಆರ್ಸಿಬಿ ನೀಡಿದ್ದ 165 ರನ್ಗಳ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ಸ್ ಇನ್ನು 5 ಎಸೆತಗಳಿರುವಂತೆ ಗುರಿ ತಲುಪುವ ಮೂಲಕ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಪಡೆದು ಅಗ್ರಸ್ಥಾನ ಉಳಿಸಿಕೊಂಡಿತಲ್ಲದೆ, ಪ್ಲೇ ಆಫ್ಗೆ ಎಂಟ್ರಿಕೊಟ್ಟಿತು.
-
That's that from Match 48 as @mipaltan win by 5 wickets.@surya_14kumar with an unbeaten 79.
— IndianPremierLeague (@IPL) October 28, 2020 " class="align-text-top noRightClick twitterSection" data="
Scorecard - https://t.co/XWqNw97Zzc #Dream11IPL pic.twitter.com/ESHhCYRBik
">That's that from Match 48 as @mipaltan win by 5 wickets.@surya_14kumar with an unbeaten 79.
— IndianPremierLeague (@IPL) October 28, 2020
Scorecard - https://t.co/XWqNw97Zzc #Dream11IPL pic.twitter.com/ESHhCYRBikThat's that from Match 48 as @mipaltan win by 5 wickets.@surya_14kumar with an unbeaten 79.
— IndianPremierLeague (@IPL) October 28, 2020
Scorecard - https://t.co/XWqNw97Zzc #Dream11IPL pic.twitter.com/ESHhCYRBik
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರ್ಸಿಬಿ ಬೌಲರ್ಗಳ ವಿರುದ್ಧ ಪರದಾಡಿದ ಡಿಕಾಕ್ 19 ಎಸೆತಗಳಲ್ಲಿ 18 ರನ್ಗಳಿಸಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಚಹಾಲ್ ಬೌಲಿಂಗ್ನಲ್ಲಿ 19 ಎಸೆತಗಳಲ್ಲಿ 25 ರನ್ಗಳಿಸಿದ್ದ ಇಶಾನ್ ಕಿಶನ್ ಔಟಾದರು.
ಆದರೆ ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಸೂರ್ಯಕುಮಾರ್ ಯಾದವ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿಸುತ್ತಿದ್ದರೆ, ಬಂದಂತಹ ಬ್ಯಾಟ್ಸ್ಮನ್ಗಳು ವಿಕೆಟ್ ನೀಡುತ್ತಾ ಪೆವಿಲಿಯನ್ಗೆ ಮರಳುತ್ತಿದ್ದರು. ಸೌರಭ್ ತಿವಾರಿ 5 ರನ್, ಕೃನಾಲ್ ಪಾಂಡ್ಯ 10 ಹಾರ್ದಿಕ್ ಪಾಂಡ್ಯ 17 ರನ್ಗಳಿಗೆ ವಿಕೆಟ್ ಒಪ್ಪಿಸಿರು.
ಆದರೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಯಾದವ್ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 79 ರನ್ ಸಿಡಿಸಿ ಅಜೇಯರಾಗಿ ಉಳಿದುಕೊಂಡರು. ತಮ್ಮನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದ ಸೆಲೆಕ್ಟರ್ಗಳಿಗೆ ತಮ್ಮ ತಾಕತ್ತನ್ನು ಕೊಹ್ಲಿ ಮುಂದೆಯೇ ತೋರಿಸಿಕೊಟ್ಟರು.
ಆರ್ಸಿಬಿ ಪರ ಯುಜವೇಂದ್ರ ಚಹಾಲ್ 2, ಮೊಹಮ್ಮದ್ ಸಿರಾಜ್ 2 ಹಾಗೂ ಕ್ರಿಸ್ ಮೋರಿಸ್ 1 ವಿಕೆಟ್ ಪಡೆದರು.
ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ ದೇವದತ್ ಅವರ ಅರ್ಧಶತಕದ ಹೊರೆತಾಗಿಯೂ ಬುಮ್ರಾ ಬೌಲಿಂಗ್ ದಾಳಿಗೆ ಸಿಲುಕಿ 164 ರನ್ಗಳಿಗೆ ಕುಸಿದಿತ್ತು.