ಅಬುಧಾಬಿ: ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಮೊದಲ ತಂಡವಾಗಿ ಪ್ಲೇ- ಆಫ್ ಹಂತಕ್ಕೆ ಲಗ್ಗೆ ಹಾಕಿದೆ.
ಆರ್ಸಿಬಿ ನೀಡಿದ್ದ 165ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಮುಂಬೈ ಸೂರ್ಯಕುಮಾರ್ ಯಾದವ್ ಅವರ ಅಜೇಯ 79ರನ್ಗಳ ನೇರವಿನಿಂದ 19.1 ಓವರ್ಗಳಲ್ಲಿ ಗುರಿ ಮುಟ್ಟಿದೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಆಯ್ಕೆಯಾಗಿಲ್ಲ.
-
A well deserved Man of the Match award for @surya_14kumar 👏👏#Dream11IPL pic.twitter.com/nOaDhol9Dt
— IndianPremierLeague (@IPL) October 28, 2020 " class="align-text-top noRightClick twitterSection" data="
">A well deserved Man of the Match award for @surya_14kumar 👏👏#Dream11IPL pic.twitter.com/nOaDhol9Dt
— IndianPremierLeague (@IPL) October 28, 2020A well deserved Man of the Match award for @surya_14kumar 👏👏#Dream11IPL pic.twitter.com/nOaDhol9Dt
— IndianPremierLeague (@IPL) October 28, 2020
ಇದೇ ವಿಷಯವಾಗಿ ಮಾತನಾಡಿರುವ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಕಿರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಆಯ್ಕೆಯಾಗದಿರುವುದು ನಿರಾಸೆ ಮೂಡಿಸಿದೆ ಎಂದಿದ್ದಾರೆ. ವಿಕೆಟ್ ಕಳೆದುಕೊಂಡಿದ್ದರೂ, ಉತ್ತಮ ಸ್ಟ್ರೈಕ್ ರೇಟ್ನಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಡೆಸಿದರು. ಸ್ಥಿರವಾಗಿ ಪ್ರದರ್ಶನ ನೀಡಿದರೆ ಖಂಡಿತವಾಗಿ ಪ್ರತಿಫಲ ಸಿಗಲಿದೆ ಎಂದು ಪೊಲಾರ್ಡ್ ತಿಳಿಸಿದರು.