ETV Bharat / sports

ಡೆಲ್ಲಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಮೂರು ದಾಖಲೆ ಬರೆದ ಸೂರ್ಯಕುಮಾರ್ ಯಾದವ್​ - ಸೂರ್ಯಕುಮಾರ್​ 2000ರನ್ಸ್​

ಸೂರ್ಯಕುಮಾರ್ ಯಾದವ್​ ಐಪಿಎಲ್​ನಲ್ಲಿ ಇಂದು ನೂರನೇ ಪಂದ್ಯವನ್ನಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದೆ ಐಪಿಎಲ್​ನಲ್ಲಿ ಹೆಚ್ಚು ಪಂದ್ಯವಾಡಿದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಸೂರ್ಯಕುಮಾರ್ ಯಾದವ್​
ಸೂರ್ಯಕುಮಾರ್ ಯಾದವ್​
author img

By

Published : Nov 5, 2020, 9:56 PM IST

ದುಬೈ: ಭಾರತೀಯ ಕ್ರಿಕೆಟ್​ನಲ್ಲಿ ಹೆಚ್ಚು ಕಡೆಗಣಿಸಲ್ಪಡುತ್ತಿರುವ ಬ್ಯಾಟ್ಸ್​ಮನ್ ಆಗಿರುವ ಮುಂಬೈ ಇಂಡಿಯನ್ಸ್​ ತಂಡದ ಸೂರ್ಯಕುಮಾರ್ ಯಾದವ್​ ಗುರುವಾರ ನಡೆಯುತ್ತಿರುವ ಡೆಲ್ಲಿ ವಿರುದ್ಧದ ಕ್ವಾಲಿಫೈಯರ್​ ಪಂದ್ಯದ ವೇಳೆ 3 ದಾಖಲೆ ಬರೆದಿದ್ದಾರೆ.

ಸೂರ್ಯಕುಮಾರ್ ಯಾದವ್​ ಐಪಿಎಲ್​ನಲ್ಲಿ ಇಂದು ನೂರನೇ ಪಂದ್ಯವನ್ನಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದೆ ಐಪಿಎಲ್​ನಲ್ಲಿ ಹೆಚ್ಚು ಪಂದ್ಯವಾಡಿದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಇದಲ್ಲದೆ ಸೂರ್ಯಕುಮಾರ್ ಯಾದವ್​ ಐಪಿಎಲ್​ನಲ್ಲಿ 2000 ರನ್​ ಪೂರೈಸಿದ ಹಾಗೂ 11 ಅರ್ಧಶತಕ ಸಿಡಿಸಿದ ಅನ್​ಕ್ಯಾಪ್ಡ್​ ಪ್ಲೇಯರ್​ ಎನಿಸಿಕೊಂಡರು.

ಸೂರ್ಯಕುಮಾರ್ ಯಾದವ್​ ಹೊರತುಪಡಿಸಿದರೆ ನಿತೀಶ್ ರಾಣಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೆ 11 ಅರ್ಧಶತಕ ಸಿಡಿಸಿದ್ದಾರೆ. ನಂತರ ಇಶಾನ್​ ಕಿಶನ್​ 7 ಅರ್ಧಶತಕ ಸಿಡಿಸಿದ್ದಾರೆ.

ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್​ 38 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 51 ರನ್​ ಗಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.