ETV Bharat / sports

ಆತ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಎಂದರೆ ನಿಜಕ್ಕೂ ಅಚ್ಚರಿ: ಗೌತಮ್ ಗಂಭೀರ್​

ಅದ್ಭುತ ನಾಯಕ ಹಾಗೂ ಆಲ್​ರೌಂಡರ್​ ಆಗಿರುವ ಹೋಲ್ಡರ್​ರನ್ನು ಹರಾಜಿನಲ್ಲಿ ಖರೀದಿಸಿದ್ದಕ್ಕೆ ಗೌತಮ್ ಗಂಭೀರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಜೇಸನ್ ಹೋಲ್ಡರ್​
ಜೇಸನ್ ಹೋಲ್ಡರ್​
author img

By

Published : Nov 9, 2020, 6:53 PM IST

ನವದೆಹಲಿ: ಸೋತು ಸುಣ್ಣವಾಗಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಗೆಲುವಿನ ಹಳಿಗೆ ಮರಳಲು ಹಾಗೂ ಪ್ಲೇ ಆಫ್​ ತಲುಪಲು ನೆರವಾಗಿದ್ದ ಆಲ್​ರೌಂಡರ್​ ಜೇಸನ್ ಹೋಲ್ಡರ್​ ಅವರು ಐಪಿಎಲ್​ನ 2019ರ ಹರಾಜಿನಲ್ಲಿ ಎಲ್ಲಾ ತಂಡಗಳಿಂದ ಕಡೆಗಣಿಸಲ್ಪಟ್ಟಿದ್ದರು.

ಪ್ಲೇ ಆಫ್​ ದೃಷ್ಟಿಯಿಂದ ಕೊನೆಯ 5 ಪಂದ್ಯಗಳನ್ನು ಗೆಲ್ಲಲೇಬೇಕಾಗಿದ್ದ ಸಂದರ್ಭದಲ್ಲಿ ಬೈರ್ಸ್ಟೋವ್ ಬದಲು ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ಸೇರಿಕೊಂಡ ಹೋಲ್ಡರ್​ ತಂಡದ ಸಮತೋಲನಕ್ಕೆ ಕಾರಣರಾದರು. ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹೋಲ್ಡರ್​ ಆರ್​ಸಿಬಿ ವಿರುದ್ಧದ ಲೀಗ್​ ಮತ್ತು ಎಲಿಮಿನೇಟರ್​ ಪಂದ್ಯಗಳಲ್ಲಿ ಬ್ಯಾಟಿಂಗ್ ನಲ್ಲೂ ಮಿಂಚಿದ್ದರು.

ಅದ್ಭುತ ನಾಯಕ ಹಾಗೂ ಆಲ್​ರೌಂಡರ್​ ಆಗಿರುವ ಹೋಲ್ಡರ್​ರನ್ನು ಹರಾಜಿನಲ್ಲಿ ಖರೀದಿಸಿದ್ದಕ್ಕೆ ಗೌತಮ್ ಗಂಭೀರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

" ಜೇಸನ್‌ ಹೋಲ್ಡರ್‌ ಅವರಂತ ಆಲ್​ರೌಂಡರ್​ ಐಪಿಎಲ್​ನಂತಹ ದೊಡ್ಡ ಲೀಗ್​ಗ್‌ನಲ್ಲಿ ಆಡದೇ ಇರುವುದು ಅಚ್ಚರಿ ಉಂಟುಮಾಡಿದೆ. ಹರಾಜಿನಲ್ಲಿ ಜಿಮ್ಮಿ ನಿಶ್ಯಾಮ್‌, ಕ್ರಿಸ್‌ ಮಾರಿಸ್‌ ಆಯ್ಕೆಯಾದರು ಹಾಗೂ ಇನ್ನೂ ಕೆಲವು ವಿವಿಧ ರಾಷ್ಟ್ರಗಳ ಆಲ್‌ರೌಂಡರ್‌ಗಳು ಆಯ್ಕೆಯಾದರು. ಆದರೆ, ಆಲ್‌ರೌಂಡರ್ ಜೇಸನ್‌ ಹೋಲ್ಡರ್‌ ಆಯ್ಕೆಯಾಗಿಲ್ಲ ಎನ್ನುವುದು ನಿಜಕ್ಕೂ ಅಚ್ಚರಿಯ ವಿಷಯ ," ಎಂದು ಗಂಭೀರ್ ಹೇಳಿದ್ದಾರೆ.

ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್ ತಂಡದ ಖಾಯಂ ಆಟಗಾರರಾಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ಅನ್ನು ಸಮರ್ಥವಾಗಿ ಮಾಡಬಲ್ಲ ಆಟಗಾರನಾಗಿದ್ದಾರೆ. ಆದರೆ ಅಂತಹ ಆಟಗಾರನ ಕೊಳ್ಳಲು ಫ್ರಾಂಚೈಸಿಗಳು ಏಕೆ ಮನಸು ಮಾಡಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಜೇಸನ್​ ಹೋಲ್ಡರ್​ ಆಡಿದ 7 ಪಂದ್ಯಗಳಲ್ಲಿ 14 ವಿಕೆಟ್​ ಪಡೆದಿದ್ದಾರೆ. ಅದರಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧದ ಪಂದ್ಯ ಹಾಗೂ ಡೆಲ್ಲಿ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಹೈದರಾಬಾದ್​ ತಂಡ ಗೆಲುವು ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.