ETV Bharat / sports

ಐಸಿಸಿಯ 'ಸ್ಪಿರಿಟ್​ ಆಫ್​ ಕ್ರಿಕೆಟ್'​ ಪ್ರಶಸ್ತಿ ಪಡೆದಿರುವುದಕ್ಕೆ ಕೊಹ್ಲಿ ಅಚ್ಚರಿ..!

author img

By

Published : Jan 15, 2020, 5:38 PM IST

ಐಸಿಸಿಯ 'ಸ್ಪಿರಿಟ್​ ಆಫ್​ ಕ್ರಿಕೆಟ್'​ ಅವಾರ್ಡ್​ ತಮಗೆ ಸಿಕ್ಕಿರುವುದಕ್ಕೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Spirit of Cricket
Spirit of Cricket

ರಾಜ್ ಕೋಟ್​: ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ವಾರ್ಷಿಕ ಪ್ರಶಸ್ತಿಯಲ್ಲಿ ಒಂದಾದ 'ವರ್ಷದ ಸ್ಪಿರಿಟ್​ ಆಫ್​ ಕ್ರಿಕೆಟ್' ಪ್ರಶಸ್ತಿಯನ್ನು ಕೊಹ್ಲಿ ತನ್ನದಾಗಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಇಂದು ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​. ಜೊತೆಗೆ ನಾಯಕನಾಗಿಯೂ ಗಗನದೆತ್ತರಕ್ಕೆ ಬೆಳೆದ ವಿಶ್ವಪ್ರಸಿದ್ಧ ಕ್ರಿಕೆಟರ್‌. ಅಷ್ಟೇ ಅಲ್ಲ, ವಿಶ್ವದಾದ್ಯದಂತ ಅತಿ ಹೆಚ್ಚು ಅಭಿಮಾನಿಗಳನ್ನೂ ಅವರು ಹೊಂದಿದ್ದಾರೆ. ಆದರೆ ವೃತ್ತಿ ಜೀವನದ ಆರಂಭದಲ್ಲಿ ಕೋಪಿಷ್ಠನಾಗಿದ್ದ ಕೊಹ್ಲಿ ಎದುರಾಳಿ ತಂಡದವರು ಕೆಣಕಿದರೆ ಮೈದಾನದಲ್ಲೇ ಮುಲಾಜಿಲ್ಲದೆ ಉತ್ತರಿಸುತ್ತಿದ್ದರು.ಈ ಹಿಂದೆ ಆಸೀಸ್​ ಅಭಿಮಾನಿಗಳು ಹೀಯಾಳಿಸಿದ್ದಕ್ಕೆ ತಮ್ಮ ಮಧ್ಯದ ಬೆರಳು ತೋರಿಸಿದ ಅವರು ದೊಡ್ಡ ವಿವಾದಕ್ಕೆ ಸಿಲುಕಿ ಭಾರೀ ದಂಡವನ್ನೇ ತೆತ್ತಿದ್ದರು. ಅಲ್ಲದೆ ಕೊಹ್ಲಿ, ಆನೇಕ ಕ್ರಿಕೆಟಿಗರು, ಅಂಪೈರ್​ಗಳೊಡನೆ ಹಲವು ಬಾರಿ ಮಾತಿನ ಚಕಮಕಿ ನಡೆಸಿದ್ದು ಐಸಿಸಿ ಕೆಂಗಣ್ಣಿಗೆ ಗುರಿಯಾ ನಿದರ್ಶನಗಳಿವೆ.

ಪ್ರಶಸ್ತಿ ಪಡೆದಿರುವುದರ ಕುರಿತು ಮಾತನಾಡಿರುವ ಕೊಹ್ಲಿ, ಅನೇಕ ವರ್ಷಗಳ ಕೆಲವು ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇನೆ. ನನಗೆ ಈ ಪ್ರಶಸ್ತಿ ಬಂದಿರುವುದಕ್ಕೆ ಅಚ್ಚರಿಯಾಗಿದೆ ಎಂದರು.

ಈ ಪ್ರಶಸ್ತಿ ನೀಡಿರುವುದಕ್ಕೆ ಕಾರಣವಾದ ಘಟನೆ ಬಗ್ಗೆ ಅವರು ಮೆಲುಕು ಹಾಕಿದ್ದು, ಯಾವುದೇ ಒಬ್ಬ ಆಟಗಾರ ತನ್ನ ತಪ್ಪಿಗೆ ಶಿಕ್ಷೆ ಅನುಭವಿಸಿ ತಂಡಕ್ಕೆ ವಾಪಸಾಗಿರುವ ಸಂದರ್ಭದಲ್ಲಿ ಆತನನ್ನು ಭಾವನಾತ್ಮಕವಾಗಿ ಕುಗ್ಗಿಸಲು ಆತನನ್ನೇ ಗುರಿಯಾಗಿಸಿ ಹಿಯ್ಯಾಳಿಸುವುದು ಸರಿಯಲ್ಲ. ಕ್ರಿಕೆಟ್​ ಅಟವನ್ನು ಪ್ರೀತಿಸುವ, ಗೌರವಿಸುವ ನಮ್ಮಂಥ ಅಭಿಮಾನಿಗಳು ಆ ರೀತಿ ಎದುರಾಳಿ ಆಟಗಾರರನ್ನು ಹಿಯ್ಯಾಳಿಸುವುದು ಸಭ್ಯತೆಯಲ್ಲ. ಅದನ್ನು ನಾವು ಯಾವುದೇ ಹಂತದಲ್ಲೂ ಒಪ್ಪಿಕೊಳ್ಳಬಾರದು, ಜನರು ಅದನ್ನು ಅರಿಯಬೇಕು ಎಂದು ಕೊಹ್ಲಿ ಕಿವಿಮಾತು ಹೇಳಿದ್ದಾರೆ.

2019 ಜೂನ್​ 9 ರಂದು ನಡೆದಿದ್ದ ಆ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿ ವಿಶ್ವಕಪ್‌ಗೆ ಮರಳಿರುವ ಸ್ಟೀವ್​ ಸ್ಮಿತ್ ಹಾಗೂ ಡೇವಿಡ್ ವಾರ್ನರ್​​​ ಅವರನ್ನು ಅಭಿಮಾನಿಗಳು ಬೆಂಬಿಡದೆ ಕಾಡುತ್ತಿದ್ದಾರೆ.
ಭಾರತದ ವಿರುದ್ಧದ ಪಂದ್ಯದಲ್ಲೂ ಕೋಪಗೊಂಡ ಕೊಹ್ಲಿ 'ಚೀಟರ್' ಎಂದು ಹೇಳುವುದನ್ನು ನಿಲ್ಲಿಸಿ, ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೈಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಕೊಹ್ಲಿ ಅವರ ಈ ಕ್ರೀಡಾಸ್ಫೂರ್ತಿಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದೀಗ ಐಸಿಸಿ ಕೂಡ ಸ್ಪಿರಿಟ್​ ಆಫ್​ ಕ್ರಿಕೆಟ್​ ಪ್ರಶಸ್ತಿ ನೀಡಿ ಗೌರವಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.