ETV Bharat / state

ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ 2 ಹಂತದ ಭದ್ರತೆ: ಪೊಲೀಸ್​ ಕಮಿಷನರ್‌ - Mysuru Dasara 2024

author img

By ETV Bharat Karnataka Team

Published : 2 hours ago

Updated : 2 hours ago

ಮೈಸೂರು ದಸರಾ ಮುಂಜಾಗೃತಾ ಕ್ರಮವಾಗಿ ಪೊಲೀಸ್​ ಇಲಾಖೆ ಕೈಗೊಂಡಿರುವ ಭದ್ರತಾ ನಿಯೋಜನೆ ಕುರಿತು ನಗರ ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್‌ ಮಾಹಿತಿ ನೀಡಿದರು.

DASARA 2024
ಮೈಸೂರು ದಸರಾ ಸಂಗ್ರಹ ಚಿತ್ರ ಹಾಗು ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್ (ETV Bharat)

ಮೈಸೂರು: ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಈ ಬಾರಿ ಎರಡು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್‌ ತಿಳಿಸಿದರು.

ಖಾಸಗಿ ಹೋಟೆಲ್​​ನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ, ಸಂಚಾರಿ ನಿಯಮ ಹಾಗೂ ಸಂಚಾರಿ ಬದಲಾವಣೆ ಸೇರಿದಂತೆ ದಸರಾ ಭದ್ರತೆ ಬಗ್ಗೆ ಮಾಹಿತಿ ನೀಡಿದ ಅವರು, ನಾಡಹಬ್ಬಕ್ಕೆ ಇಲಾಖೆ ಎಲ್ಲ ರೀತಿಯ ಭದ್ರತೆಗೆ ಸಿದ್ದತೆ ಮಾಡಿಕೊಂಡಿದೆ. 10 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ದರ್ಜೆಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದರು.

ನಗರ ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್‌ (ETV Bharat)

ಎರಡು ಹಂತಗಳಲ್ಲಿ ಸರ್ಪಗಾವಲು: ದಸರಾದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂಬ ಮುಂಜಾಗೃತಾ ಕ್ರಮವಾಗಿ ನಾವು ಎರಡು ಹಂತಗಳಲ್ಲಿ ಭದ್ರತೆ ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ನಗರದಲ್ಲಿ ಸಮಾರು 46ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರು ನಗರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಗಳಿಗೆ ಈ ಕೆಳಕಂಡಂತೆ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ಒಂದನೇ ಹಂತದಲ್ಲಿ 16 ಎಸ್​ಪಿ, 599 ಇತರೆ ಪೊಲೀಸ್ ಅಧಿಕಾರಿಗಳು, 2381 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಎರಡನೇ ಹಂತದಲ್ಲಿ ಇಬ್ಬರು ಡಿಐಜಿ, 27 ಎಸ್​ಪಿ, 989 ಇತರೆ ಪೊಲೀಸ್ ಅಧಿಕಾರಿಗಳು, 3981 ಸಿಬ್ಬಂದಿ ನಿಯೋಜ‌‌ನೆ ಮಾಡಲಾಗುತ್ತದೆ. ಅದರಲ್ಲಿ 10 ಸಿಎಆರ್​, 33 ಕೆಎಸ್​ಆರ್​ಪಿ, 29 ಎಎಸ್​ಸಿ, 3 ಬಿಡಿಡಿಎಸ್, ಒಂದು ಗರುಡ ಪಡೆ, ಒಂದು ಐಎಸ್​ಡಿ/ಸಿಐಇಡಿ ‌ಸೇರಿದಂತೆ ಒಟ್ಟು 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸುಗಮ ಸಂಚಾರಕ್ಕೆ ವಿವಿಧ ನಿಯಮಗಳು: ಸಾರ್ವಜನಿಕರ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ದಸರಾ ಸಮಯದಲ್ಲಿ ಕೆಎಸ್​ಆರ್​ಟಿಸಿ ಮತ್ತು ನಗರ‌ ಸಂಚಾರ ಸಾರಿಗೆಯಲ್ಲಿ‌ ಬದಲಾವಣೆ ಮಾಡಲಾಗುತ್ತದೆ. ಅ.3ರಿಂದ 12ವರೆಗೆ ಸಂಚಾರ ಮಾರ್ಗ ನಿರ್ಬಂಧ, ಬದಲಿ ಮಾರ್ಗ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

10 ದಿನ ಸಂಚಾರ ಬಂದ್: ವಾಹನ ದಟ್ಟಣೆ ತಡೆಗಟ್ಟಲು ಇಲಾಖೆಯು ಸಂಚಾರ ಮಾರ್ಗ ನಿರ್ಬಂಧ, ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ದೇವರಾಜ ಅರಸು ರಸ್ತೆ, ಪುರಂದರ ರಸ್ತೆ, ಬಿ.ಎನ್. ರಸ್ತೆಯಲ್ಲಿ ಗನ್‌ಹೌಸ್ ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗಿನ ರಸ್ತೆಗಳಲ್ಲಿ ವಾಹನಗಳ ಪ್ರವೇಶ ಮತ್ತು ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅರಮನೆ ಸುತ್ತಮುತ್ತ ರಸ್ತೆಗಳು ಹಾಗೂ ಇತರೇ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸದರಿ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ.

ತಾತ್ಕಾಲಿಕ ಬಸ್ ನಿಲ್ದಾಣ: ಅ.11 ಮತ್ತು 12ರಂದು ನಗರದ ಹೊರ ಭಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಕೂಡ ಇರುತ್ತದೆ. ನಗರದ ಕೆಎಸ್​ಆರ್​ಟಿಸಿ ಗ್ರಾಮಾಂತರ ಬಸ್‌ಗಳು, ನಗರ ಸಾರಿಗೆ ಬಸ್​ಗಳು, ಖಾಸಗಿ ಬಸ್‌ಗಳ ಸಂಚಾರ ಮಾರ್ಗದಲ್ಲಿಯೂ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಆಗಮಿಸುವ ಬಸ್‌ಗಳಿಗೆ ಸಾತಗಳ್ಳಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದರೆ, ಹುಣಸೂರು, ಬೋಗಾದಿ ಹಾಗೂ ಹೆಚ್.ಡಿ.ಕೋಟೆ ರಸ್ತೆ ಕಡೆಯಿಂದ ಆಗಮಿಸುವ ಬಸ್‌ಗಳಿಗಾಗಿ ಮಹಾರಾಜ ಕಾಲೇಜು ಮೈದಾನ, ನಂಜನಗೂಡು ಕಡೆಯಿಂದ ಆಗಮಿಸುವ ಬಸ್‌ಗಳಿಗಾಗಿ ಗುಂಡುರಾವ್ ನಗರ ಮೈದಾನ, ಬನ್ನೂರು, ಟಿ.ನರಸೀಪುರ ರಸ್ತೆ ಮೂಲಕ ಆಗಮಿಸುವ ಬಸುಗಳಿಗಾಗಿ ಲಲಿತ್ ಮಹಲ್ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಷನರ್‌ ತಿಳಿಸಿದರು.

ಇದನ್ನೂ ಓದಿ: ಸಿಡಿಮದ್ದು ತಾಲೀಮಿನ ಅಂತಿಮ ಪರೀಕ್ಷೆಯಲ್ಲಿ ಗಜಪಡೆ‌, ಅಶ್ವಪಡೆ ಪಾಸ್; ಜಂಬೂ ಸವಾರಿಗೆ ರೆಡಿ - Mysuru Dasara 2024

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.