ETV Bharat / sports

2020ರ ಐಪಿಎಲ್​ನಿಂದ ಹೊರಬಂದಿದ್ದಕ್ಕೆ ಕಾರಣ ಬಹಿರಂಗಗೊಳಿಸಿದ ರೈನಾ.. ಮತ್ತೇನಿಲ್ಲ ಆಗಿದ್ದಿಷ್ಟೇ.. - ಸಿಎಸ್​ಕೆ ಲೇಟೆಸ್ಟ್​ ನ್ಯೂಸ್​

ಪಂಜಾಬ್‌ನಲ್ಲಿನ ನನ್ನ ಕುಟುಂಬದಲ್ಲಿ ದುರ್ಘಟನೆಯೊಂದು ನಡೆದಿತ್ತು. ಆ ಸಂದರ್ಭದಲ್ಲಿ ಮಾವ ಕೊಲೆಯಾದ. ನಾನು ನಿಜವಾಗಿಯೂ ನನ್ನ ಕುಟುಂಬಕ್ಕೆ ನೆರವಾಗಬೇಕೆಂದು ಬಯಸಿದೆ. ಅವರಿಗೆ ನನ್ನ ಅಗತ್ಯವೂ ಇತ್ತು. ಅಲ್ಲದೆ ಸಾಂಕ್ರಾಮಿಕ ಸಮಯದಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ನಾನು ಇಲ್ಲಿರಬೇಕಾಗಿತ್ತು. ನಾನು 20 ವರ್ಷಗಳಿಂದ ಕ್ರಿಕೆಟ್​ ಆಡುತ್ತಿದ್ದೇನೆ. ಮುಂದೆಯೂ ಆಡುತ್ತೇನೆ..

Suresh Raina
ಸುರೇಶ್ ರೈನಾ
author img

By

Published : Jan 2, 2021, 7:38 PM IST

ಮುಂಬೈ: ಭಾರತ ತಂಡದ ಮಾಜಿ ಆಲ್​ರೌಂಡರ್​ ಸುರೇಶ್ ರೈನಾ 2020ರ ಐಪಿಎಲ್​ ಆರಂಭಕ್ಕೂ ಮುನ್ನವೇ ಸಿಎಸ್​ಕೆ ಬಿಟ್ಟು ಹೊರ ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ರೈನಾ ಐಪಿಎಲ್​ನಿಂದ ಹೊರಬರುತ್ತಿದ್ದಂತೆ ಕೆಲವು ವಿವಾದ ಕೂಡ ಅವರ ಹೆಗಲೇರಿತ್ತು. ಧೋನಿಗೆ ಟೀಂ ಮ್ಯಾನೇಜ್​ಮೆಂಟ್ ಬಾಲ್ಕನಿ ಸೌಲಭ್ಯವಿರುವ ಕೊಠಡಿ ನೀಡದಿದ್ದಕ್ಕೆ ಬೇಸರಪಟ್ಟು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಅನಧಿಕೃತ ಸುದ್ದಿ ಕೂಡ ಕೇಳಿ ಬಂದಿತ್ತು. ಅಲ್ಲದೆ ಸಿಎಸ್​ಕೆ ಮಾಲೀಕ ಶ್ರೀನಿವಾಸನ್​ ಕೂಡ ರೈನಾ ವಿರುದ್ಧ ಬಹಿರಂಗ ಹೇಳಿಕೆ ನೀಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಸ್ವತಃ ರೈನಾ ಟೈಮ್ಸ್‌ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಾನು ಟೂರ್ನಿಯಿಂದ ಹೊರ ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ಪಠಾಣ್​ ಕೋಟ್​ನಲ್ಲಿ ತಮ್ಮ ಮಾವ ಮತ್ತು ಸೋದರ ಸಂಬಂಧಿಗಳನ್ನು ಕೊಲೆ ಮಾಡಲಾಗಿತ್ತು. ಹಾಗಾಗಿ ತಾವು ಕುಟುಂಬದ ಜೊತೆ ಇರಬೇಕೆಂದು ತವರಿಗೆ ಮರಳಿದ್ದಾಗಿ ರೈನಾ ತಿಳಿಸಿದ್ದಾರೆ. ಅಲ್ಲದೆ ತಮ್ಮ ನಿರ್ಧಾರದಿಂದ ಯಾವುದೇ ವಿಷಾದ ಕೂಡ ಇಲ್ಲ ಎಂದು ಅವರು ಹೇಳಿದ್ದಾರೆ.​

"ಪಂಜಾಬ್‌ನಲ್ಲಿನ ನನ್ನ ಕುಟುಂಬದಲ್ಲಿ ದುರ್ಘಟನೆಯೊಂದು ನಡೆದಿತ್ತು. ಆ ಸಂದರ್ಭದಲ್ಲಿ ಮಾವ ಕೊಲೆಯಾದ. ನಾನು ನಿಜವಾಗಿಯೂ ನನ್ನ ಕುಟುಂಬಕ್ಕೆ ನೆರವಾಗಬೇಕೆಂದು ಬಯಸಿದೆ. ಅವರಿಗೆ ನನ್ನ ಅಗತ್ಯವೂ ಇತ್ತು. ಅಲ್ಲದೆ ಸಾಂಕ್ರಾಮಿಕ ಸಮಯದಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ನಾನು ಇಲ್ಲಿರಬೇಕಾಗಿತ್ತು. ನಾನು 20 ವರ್ಷಗಳಿಂದ ಕ್ರಿಕೆಟ್​ ಆಡುತ್ತಿದ್ದೇನೆ.

ಮುಂದೆಯೂ ಆಡುತ್ತೇನೆ ಎಂದು ನನಗೆ ತಿಳಿದಿದೆ. ಆದರೆ, ಕುಟುಂಬಕ್ಕೆ ಅಗತ್ಯವಿದ್ದಾಗ, ನೀವು ಅಲ್ಲಿರಬೇಕು. ಅದು ಬುದ್ಧಿವಂತರ ಕೆಲಸ ಎಂದು ನಾನು ಭಾವಿಸಿದ್ದೇನೆ" ಎಂದು ಸುರೇಶ್ ರೈನಾ ಹೇಳಿದ್ದಾರೆ. ಸುರೇಶ್ ರೈನಾ ಐಪಿಎಲ್​ನಲ್ಲಿ 33.28ರ ಸರಾಸರಿಯಲ್ಲಿ 4527 ರನ್​ ಸಿಡಿಸಿದ್ದಾರೆ. ಅವರು ಸಿಎಸ್​ಕೆ ಪರ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದಾರೆ. ಮುಂದಿನ ಐಪಿಎಲ್​ನಲ್ಲಿ ಸುರೇಶ್​ ರೈನಾ ಸಿಎಸ್​ಕೆ ಪರ ಆಡಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ ರೈನಾ.

ಇದನ್ನು ಓದಿ:ರೆಸ್ಟೋರೆಂಟ್​ನಲ್ಲಿ ಊಟ ಸೇವನೆ : ಆಟಗಾರರ ಮೇಲೆ ತನಿಖೆ ಕೈಗೊಂಡ ಬಿಸಿಸಿಐ, ಸಿಎ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.