ಬೆಂಗಳೂರು: 2019ರ ಐಪಿಎಲ್ ನಂತರ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವಿದ್ದ ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಸುರೇಶ್ ರೈನಾ ಸಯ್ಯದ್ ಮುಷ್ತಾಕ್ ಟಿ-20 ಟೂರ್ನಿ ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಅವರು ತಮ್ಮ ತವರು ತಂಡವಾದ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಬೆಂಗಳೂರಿನ ಆಲೂರು ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಪಂಜಾಬ್ ತಂಡವನ್ನು ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್ಗಳಲ್ಲಿ 134 ರನ್ ಗಳಿಸಿತ್ತು. ಪಂಜಾಬ್ ಪರ ಪ್ರಭಸಿಮ್ರಾನ್ ಸಿಂಗ್ 43 ರನ್, ಪ್ರೀತ್ ಸಿಂಗ್ 35 ರನ್ ಗಳಿಸಿದರು.
135 ರನ್ಗಳ ಸಣ್ಣ ಟಾರ್ಗೆಟ್ ಬೆನ್ನತ್ತಿದ ಉತ್ತರ ಪ್ರದೇಶ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿ 11 ರನ್ಗಳ ಸೋಲು ಕಂಡಿತು.
ಸುರೇಶ್ ರೈನಾ ಹೊರತುಪಡಿಸಿದರೆ ಪಂಜಾಬ್ ಬೌಲಿಂಗ್ ದಾಳಿಯ ಮುಂದೆ ಉತ್ತರ ಪ್ರದೇಶ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ರೈನಾ 50 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ ಅಜೇಯ 56 ರನ್ ಗಳಿಸಿದರಾದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು.
ಸುರೇಶ್ ರೈನಾ ಕೊನೆಯ ಬಾರಿ 2019ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2020ರ ಐಪಿಎಲ್ನಲ್ಲಿ ವೈಯಕ್ತಿಕ ಕಾರಣಗಳಿಂದ ಆಡಿರಲಿಲ್ಲ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ: ರೈನಾ, ಭುವಿ ಇರುವ ಯುಪಿ ತಂಡಕ್ಕೆ ಪ್ರಿಯಂ ಗರ್ಗ್ ನಾಯಕ