ETV Bharat / sports

ಧೋನಿ ಬೆಸ್ಟ್​​ ಕ್ಯಾಪ್ಟನ್​... ಅವರ ಅಡಿ ಆಡುವುದು ನಿಜಕ್ಕೂ ಹೆಮ್ಮೆಯ ಸಂಗತಿ! - ಇಂಡಿಯನ್​ ಪ್ರೀಮಿಯರ್​ ಲೀಗ್​

ಕ್ಯಾಪ್ಟನ್​ ಕೂಲ್​ ಎಂದು ಕರೆಯಿಸಿಕೊಳ್ಳುತ್ತಿದ್ದ ಮಹೇಂದ್ರ ಸಿಂಗ್​ ಧೋನಿ ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಿಂಚಲು ಸಜ್ಜಾಗಿದ್ದು, ಅವರ ಬಗ್ಗೆ ಸಹ ಆಟಗಾರ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Suresh Raina
ಸುರೇಶ್​ ರೈನಾ-ಧೋನಿ
author img

By

Published : Feb 14, 2020, 10:27 AM IST

ಮುಂಬೈ: ಮಹೇಂದ್ರ ಸಿಂಗ್​ ಧೋನಿ ಒಬ್ಬ ಬೆಸ್ಟ್​ ಕ್ಯಾಪ್ಟನ್​ ಎಂದು ಈಗಾಗಲೇ ರೋಹಿತ್​ ಶರ್ಮಾ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಆಟಗಾರ ಎಂಎಸ್​ ಪರ ಬ್ಯಾಟ್​ ಬೀಸಿದ್ದಾರೆ.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಸುರೇಶ್​ ರೈನಾ ಮಾತನಾಡಿದ್ದು, ಎಂಎಸ್​ ಧೋನಿ ಓರ್ವ ಬೆಸ್ಟ್​ ಕ್ಯಾಪ್ಟನ್​ ಆಗಿದ್ದಾರೆ. ಈ ಹಿಂದೆ ನಾನು ಅವರಂತಹ ಕ್ಯಾಪ್ಟನ್​ ನೋಡಿಲ್ಲ ಎಂದಿದ್ದಾರೆ. ಇಂಡಿಯನ್​ ಕ್ರಿಕೆಟ್​ ಟೀಂ ಬದಲಾವಣೆ ಮಾಡಿರುವ ಶ್ರೇಯ ಅವರಿಗೇ ಸಲ್ಲಬೇಕು. ಇದೀಗ ಡ್ರೆಸ್ಸಿಂಗ್​ ರೂಂನಲ್ಲಿ ಅವರನ್ನ ಮತ್ತೊಮ್ಮೆ ನೋಡಲು ಹೆಮ್ಮೆ ಆಗುತ್ತದೆ ಎಂದಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಧೋನಿ, ಸುರೇಶ್​ ರೈನಾ ಚೆನ್ನೈ ಸೂಪರ್​ ಕಿಂಗ್ಸ್​ ಪರ ಬ್ಯಾಟ್​ ಬೀಸುತ್ತಿದ್ದು, ತಂಡದ ಕ್ಯಾಪ್ಟನ್​ ಆಗಿ ಧೋನಿ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಟೀಂ ಇಂಡಿಯಾಗೆ ಈಗಾಗಲೇ ಎರಡು ವಿಶ್ವಕಪ್​ ತಂದುಕೊಟ್ಟಿರುವ ಎಂಎಸ್​ ಧೋನಿ, 2019ರ ವಿಶ್ವಕಪ್​​ ಬಳಿಕ ಮೈದಾನಕ್ಕಿಳಿದಿಲ್ಲ. ಆದರೆ, ಮಾರ್ಚ್​​ 29ರಿಂದ ಆರಂಭಗೊಳ್ಳಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಸಿಎಸ್​ಕೆ ಪರ ಬ್ಯಾಟ್​ ಬೀಸಲು ಮೈದಾನಕ್ಕಿಳಿಯಲಿದ್ದಾರೆ.

ಇನ್ನು ಟೀಂ ಇಂಡಿಯಾ ಪರ 2018ರಲ್ಲಿ ಕೊನೆಯದಾಗಿ ಮೈದಾನಕ್ಕಿಳಿದಿದ್ದ ಸುರೇಶ್​ ರೈನಾ ಕೂಡ ಕೇವಲ ಐಪಿಎಲ್​​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ದೇಶಿಯ ಕ್ರಿಕೆಟ್​​ನಿಂದಲೂ ದೂರ ಉಳಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.