ಹೈದರಾಬಾದ್: ಟೀಂ ಇಂಡಿಯಾ ಆಯ್ಕೆ ಸಮಿತಿಗೆ ತಲೆನೋವಾಗಿರುವ ಮಧ್ಯಮ ಕ್ರಮಾಂಕದ ಆಟಗಾರನ ಸಮಸ್ಯೆಗೆ ನಾನೇ ಪರಿಹಾರ ನೀಡಬಲ್ಲೆ ಎಂದು ಸ್ಫೋಟಕ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
ನಾನು ನಾಲ್ಕನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡಬಲ್ಲೆ. ಆ ಕ್ರಮಾಂಕದಲ್ಲಿ ಒಳ್ಳೆಯ ಪ್ರದರ್ಶನವನ್ನು ಈಗಾಗಲೇ ನೀಡಿದ್ದೇನೆ. 2020ರ ಟಿ20 ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸವನ್ನು ಸುರೇಶ್ ರೈನಾ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಹಾಟ್ ಟಾಪಿಕ್ ಆಗಿರುವ ನಂ.4 ಆಟಗಾರನ ಹುಡುಕಾಟ ಇನ್ನೂ ಬಗೆಹರಿದಿಲ್ಲ. ಅಂಬಟಿ ರಾಯುಡು ಹಾಗೂ ವಿಜಯ್ ಶಂಕರ್ರನ್ನು ನಾಲ್ಕರ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದರೆ ಆಯ್ಕೆ ಸಮಿತಿ ನಿರೀಕ್ಷೆಗೆ ತಕ್ಕಂತೆ ಈ ಆಟಗಾರರು ಪ್ರದರ್ಶನ ನೀಡಿಲ್ಲ.
2018ರಲ್ಲಿ ಸುರೇಶ್ ರೈನಾ ಕೊನೆಯದಾಗಿ ಟೀಂ ಇಂಡಿಯಾ ಪರ ಆಡಿದ್ದು ಆ ಬಳಿಕ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿಲ್ಲ. ಟೀಂ ಇಂಡಿಯಾ ಪರ ರೈನಾ ಏಕದಿನದಲ್ಲಿ 5,615 ರನ್ ಹಾಗೂ ಟಿ20ಯಲ್ಲಿ 1,605 ರನ್ ಕಲೆಹಾಕಿದ್ದಾರೆ.