ETV Bharat / sports

ಚಿನ್ನಸ್ವಾಮಿ ಅಂಗಳಕ್ಕೆ ಚೆಟ್ರಿ ಅಚ್ಚರಿ ಭೇಟಿ... ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಹೇಳಿದ ಫುಟ್ಬಾಲ್​ ಚಾಣಾಕ್ಷ್ಯ!

ವಿರಾಟ್​ ಕೊಹ್ಲಿ ನೇತೃತ್ವದ ಆರ್​ಸಿಬಿ ತಂಡ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿದ್ದು, ಈ ಬಾರಿ ಕಪ್ ಗೆಲ್ಲಲೇ ಬೇಕೆಂಬ ಹಠದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಖತ್​ ಬೆವರು ಹರಿಸುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸುನಿಲ್​ ಚೆಟ್ರಿ ಅಚ್ಚರಿ ಭೇಟಿ
author img

By

Published : Mar 20, 2019, 5:58 PM IST

Updated : Mar 21, 2019, 8:47 AM IST

ಬೆಂಗಳೂರು: ದೇಶಿ ಕ್ರಿಕೆಟ್​ನಲ್ಲಿ ಹೊಡಿ - ಬಡಿ ಆಟ ಐಪಿಎಲ್​​ನ 12ನೇ ಆವೃತ್ತಿಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದ್ದು, ಪಂದ್ಯ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ.

ವಿರಾಟ್​ ಕೊಹ್ಲಿ ನೇತೃತ್ವದ ಆರ್​ಸಿಬಿ ತಂಡ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿದ್ದು, ಈ ಬಾರಿ ಕಪ್ ಗೆಲ್ಲಲೇ ಬೇಕೆಂಬ ಹಠದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಖತ್​ ಬೆವರು ಹರಿಸುತ್ತಿದೆ. ಕಪ್ ಗೆಲ್ಲುವ ಆಸೆ ಹೊಂದಿರುವ ಕೊಹ್ಲಿ ಪಡೆಗೆ, ಇತ್ತೀಚೆಗೆ ಇಂಡಿಯನ್ ಸೂಪರ್ ಲೀಗ್​ನಲ್ಲಿ ಬೆಂಗಳೂರಿಗೆ ಕಪ್ ತಂದು ಕೊಟ್ಟ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ, ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಸಾಥ್​ ನೀಡಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸುನಿಲ್​ ಚೆಟ್ರಿ ಅಚ್ಚರಿ ಭೇಟಿ

ಸುನಿಲ್​ ಚೆಟ್ರಿ ಕ್ರೀಡಾಂಗಣದೊಳಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಂತೆ ಆರ್​ಸಿಬಿ ಆಟಗಾರರು ಭವ್ಯ ಸ್ವಾಗತ ನೀಡಿ ಗೌರವಿಸಿದರು. ತದನಂತರ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರತಿಯೊಬ್ಬರಿಗೂ ಪರಿಚಯ ಮಾಡಿಕೊಟ್ಟರು.

ಇದೇ ವೇಳೆ, ಚೆಟ್ರಿ ತಂಡದ ಜೊತೆ ಕೆಲಹೊತ್ತು ಅಭ್ಯಾಸದಲ್ಲೂ ಭಾಗಿಯಾದರು. ಇದರಿಂದ ತಾವೂ ಕೇವಲ ಫುಟ್ಬಾಲ್​ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಅಬ್ಬರಿಸಬಲ್ಲೇ ಎಂಬ ಸುಳಿವು ನೀಡಿದರು. ಕಳೆದ 11 ಆವೃತ್ತಿಗಳಲ್ಲೂ ಕಪ್​ ಗೆಲ್ಲಲು ವಿಫಲಗೊಂಡಿರುವ ಆರ್​ಸಿಬಿ ತಂಡ ಈ ಸಲ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಕಪ್​ ಗೆಲ್ಲುವ ಸಾಧ್ಯತೆ ಇದೆ.

Intro:Body:

1 Kn_bng_rcb_practice_with_sunil_chetri_akash.docx  

Conclusion:
Last Updated : Mar 21, 2019, 8:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.