ETV Bharat / sports

ಸ್ಟೋಕ್ಸ್  ತಂಡ ಮುನ್ನಡೆಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ: ಸ್ಟುವರ್ಟ್ ಬ್ರಾಡ್ - ವೆಸ್ಟ್ ಇಂಡೀಸ್ ಇಂಗ್ಲೆಂಡ್ ಟೆಸ್ಟ್​

ತನ್ನ ಎರಡನೇ ಮಗುವಿನ ಜನ್ಮ ದಿನ ಇರುವುದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್ ಹೊರಗುಳಿಯುವ ಸಾಧ್ಯತೆಯಿದೆ. ಹಾಗಾಗಿ ಅವರ ಬದಲಿಗೆ ವೈಸ್​ ಕ್ಯಾಪ್ಟನ್​ ಬೆನ್ ಸ್ಟೋಕ್ಸ್ ತಂಡ ಮುನ್ನೆಡಸಲಿದ್ದಾರೆ.

Stuart Broad feels Ben Stokes will be brilliant as England skipper
ಸ್ಟುವರ್ಟ್ ಬ್ರಾಡ್
author img

By

Published : Jun 29, 2020, 10:31 AM IST

ಲಂಡನ್ : ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ ಬದಲಿಗೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ತಿಳಿಸಿದ್ದಾರೆ.

ತಮ್ಮ ಎರಡನೇ ಮಗುವಿನ ಜನ್ಮ ದಿನದ ಹಿನ್ನೆಲೆಯಲ್ಲಿ ರೂಟ್​ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಹಾಗಾಗಿ ಅವರ ಬದಲಿಗೆ ವೈಸ್​ ಕ್ಯಾಪ್ಟನ್​ ಸ್ಟೋಕ್ಸ್ ತಂಡ ಮುನ್ನೆಡಸಲಿದ್ದಾರೆ. ಸ್ಟೋಕ್ಸ್ ಇದಕ್ಕೆ ಸಜ್ಜಾಗಿರುವುದರಿಂದ ತಂಡಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.

ಸ್ಟೋಕ್ಸ್ ಈಗಾಗಲೇ ಸಜ್ಜಾಗಿದ್ದಾರೆ. ಪಂದ್ಯದ ಹೆಚ್ಚಿನ ಕೆಲಸಗಳು ಆಫ್ ಫೀಲ್ಡ್​ನಲ್ಲಿ ನಡೆಯುತ್ತದೆ. ಸಾಕಷ್ಟು ಹೆಚ್ಚುವರಿ ಸಭೆಗಳು ಮತ್ತು ಯೋಜನೆ ಇದರಲ್ಲಿ ಇವೆ. ಇದರಲ್ಲಿ ಸ್ಟೋಕ್ಸ್ ಭಾಗವಹಿಸುವ ಅಗತ್ಯವಿಲ್ಲ. ಅವರು ಕಳೆದ ಕೆಲ ವರ್ಷಗಳಿಂದ ತಂಡದಲ್ಲಿ ಬೆಳೆದಿದ್ದಾರೆ ಮತ್ತು ಪ್ರಬುದ್ಧರಾಗಿದ್ದಾರೆ. ಆದ್ದರಿಂದ ಒಂದು ಪಂದ್ಯವನ್ನು ಮುನ್ನೆಡುಸುವುದು ಕಠಿಣವಾಗುವುದಿಲ್ಲ ಎಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಬ್ರಾಡ್ ತಿಳಿಸಿದ್ದಾರೆ.

ಕೋವಿಡ್​ ಹಿನ್ನೆಲೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಪ್ರೇಕ್ಷರಿಲ್ಲದೇ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.