ಅಬುಧಾಬಿ: ಬೆನ್ ಸ್ಟೋಕ್ಸ್ ಅಜೇಯ ಶತಕ , ಸಂಜು ಸಾಮ್ಸನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 196 ರನ್ಗಳ ದಾಖಲೆಯ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪ್ಯಾಂಡ್ಯ(60)ರ ಸ್ಫೋಟಕ ಅರ್ಧಶತಕದ ನೆರವಿನಿಂದ 195 ರನ್ಗಳಿಸಿತ್ತು. 196 ರನ್ಗಳ ಗುರಿ ಪಡೆದಿದ್ದ ರಾಜಸ್ಥಾನ್ ತಂಡ ಇನ್ನು 10 ಎಸೆತಗಳಿರುವಂತೆ ಗುರಿ ತಲುಪುವ ಮೂಲಕ ಅಚ್ಚರಿಯ ಜಯ ಸಾಧಿಸಿತು.
-
Top effort from @benstokes38 107* and Samson 54* as they steer @rajasthanroyals to an 8-wicket win against #MI.#Dream11IPL pic.twitter.com/IuHBbTgEDa
— IndianPremierLeague (@IPL) October 25, 2020 " class="align-text-top noRightClick twitterSection" data="
">Top effort from @benstokes38 107* and Samson 54* as they steer @rajasthanroyals to an 8-wicket win against #MI.#Dream11IPL pic.twitter.com/IuHBbTgEDa
— IndianPremierLeague (@IPL) October 25, 2020Top effort from @benstokes38 107* and Samson 54* as they steer @rajasthanroyals to an 8-wicket win against #MI.#Dream11IPL pic.twitter.com/IuHBbTgEDa
— IndianPremierLeague (@IPL) October 25, 2020
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿಸಿದ ಬೆನ್ ಸ್ಟೋಕ್ಸ್ 60 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 107 ರನ್ಗಳಿಸಿದರೆ, ಇವರಿಗೆ ಸೂಕ್ತ ಬೆಂಬಲ ನೀಡಿದ ಸಂಜು ಸಾಮ್ಸನ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 54 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಈ ಜೋಡಿ 78 ಎಸೆತಗಳಲ್ಲಿ 3ನೇ ವಿಕೆಟ್ಗೆ ಮುರಿಯದ 152 ರನ್ಗಳ ಜೊತೆಯಾಟ ನಡೆಸಿದರು. ಉತ್ತಪ್ಪ 13 ಹಾಗೂ ಸ್ಮಿತ್ 11 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಮುಂಬೈ ಇಂಡಿಯನ್ಸ್ ಎಲ್ಲಾ ಬೌಲರ್ಗಳು ದುಬಾರಿಯಾದರು. ಜೇಮ್ಸ್ ಪ್ಯಾಟಿನ್ಸನ್ 3.2 ಓವರ್ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದರು. ಉಳಿದ ಬೌಲರ್ಗಳು ಸಾಮ್ಸನ್-ಸ್ಟೋಕ್ಸ್ ಜೋಡಿಯ ಆರ್ಭಟಕ್ಕೆ ಸಿಲುಕಿ ದುಬಾರಿಯಾದರು. ಬುಮ್ರಾ 4 ಓವರ್ಗಳಲ್ಲಿ 38, ಬೌಲ್ಟ್ 40 ರನ್ ಬಿಟ್ಟುಕೊಟ್ಟರು.
ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ 8 ಸ್ಥಾನದಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಇತ್ತ ಮುಂಬೈ ಇಂಡಿಯನ್ಸ್ ತಂಡದ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.