ಮುಂಬೈ: ಕೋವಿಡ್ 19 ರೋಗದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಭಾರತದ ವಿಶೇಷಚೇತನ ಕ್ರಿಕೆಟಿಗರಿಗೆ ನೆರವಾಗಲು ಆಸ್ಟ್ರೇಲಿಯಾದ ಮಾಜಿ ನಾಯುಕ ಸ್ಟೀವ್ ವಾ ಅವರ ಮ್ಯಾನೇಜರ್ ಹಾರ್ಲೆ ಮೆಡ್ಕಾಳ್ಟ್ ₹1.5 ಲಕ್ಷ ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ.
ಕೋವಿಡ್-19 ಕಠಿಣ ಸಂದರ್ಭದಲ್ಲಿ ಭಾರತದ ವಿಶೇಷ ಚೇತನ ಕ್ರಿಕೆಟಿಗರಿಗೆ ಸಹಾಯ ಮಾಡಲು ಆಸೀಸ್ ವಿಶ್ವಚಾಂಪಿಯನ್ ಮಾಜಿ ನಾಯಕ ಸ್ಟಿವ್ ವಾ ಮ್ಯಾನೇಜರ್ ಮುಂದೆ ಬಂದಿದ್ದಾರೆ ಎಂದು ಫಿಸಿಕಲ್ ಚಾಲೆಂಜ್ಡ್ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ರವಿ ಚೌಹಾಣ್ ಬುಧವಾರ ತಿಳಿಸಿದ್ದಾರೆ. ಸುಮಾರು 30 ಅಂಗವಿಕಲ ಕ್ರಿಕೆಟ್ ಆಟಗಾರರಿಗೆ ತಲಾ ₹5000 ನೇರವಾಗಿ ಈ ನಿರ್ಗತಿಕ ಕ್ರಿಕೆಟಿಗರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ರವಿ ಹೇಳಿದ್ದಾರೆ.
ಪಿಸಿಸಿಎಐ ಆಶ್ರಯದಲ್ಲಿ ಅಂಗವಿಕಲರಿಗೆ ಮೆಡಾಲ್ಫ್ ಸಹಾಯ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ವೇಳೆ ಪಿಸಿಸಿಎಐ ಹಾಗೂ ವಾ ವ್ಯವಸ್ಥಾಪಕರ ನಡುವೆ ಸಂಬಂಧ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಅವರು ಪಿಸಿಸಿಎಐನ ಅಂಗವಿಕಲ ಕ್ರಿಕೆಟ್ ಆಟಗಾರರೊಂದಿಗೆ 3-4 ಗಂಟೆಗಳ ಕಾಲ ಕಳೆದಿದ್ದರು. ಅವರ ಕ್ರಿಕೆಟ್ ಆಡಲು ಅಭಿವೃದ್ಧಿಪಡಿಸಿದ್ದ ಸೆಟ್ ಅಪ್ ನೋಡಿ ಪ್ರಭಾವಿತರಾಗಿದ್ದರು ಎಂದು ತಿಳಿದು ಬಂದಿದೆ.
ಈ ಸಂಕ್ಷಿಪ್ತ ಸಭೆಯ ನಂತರವೂ ಪಿಸಿಸಿಎಐ ಕಾರ್ಯದರ್ಶಿ ರವಿ ಚೌಹಾಣ್ ಮತ್ತು ಹಾರ್ಲೆ ಮೆಡ್‌ಕಾಲ್ಫ್ ಪರಸ್ಪರ ಸಂಪರ್ಕದಲ್ಲಿದ್ದರು. ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಆಟಗಾರರ ಮೆಡ್‌ಕಾಲ್ಫ್ ಹಣ ಸಂಗ್ರಹಿಸಲು ನಿರ್ಧರಿಸಿದ್ದರು ಎಂದು ಚೌಹಾಣ್ ತಿಳಿಸಿದ್ದಾರೆ.