ಮ್ಯಾಂಚೆಸ್ಟರ್ : ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಂದರ್ಭದಲ್ಲಿ ಕುತ್ತಿಗೆ ನೋವಿಗೆ ಒಳಗಾಗಿದ್ದ ಸ್ಮಿತ್, ಎರಡು ಕನ್ಕ್ಯೂಷನ್ ಟೆಸ್ಟ್ನಲ್ಲಿ ಉತ್ತೀರ್ಣರಾಗಿದ್ದು ಎರಡನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದ ಪರಿಣಾಮ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರೂ ಎಂದು ಫಿಂಚ್ ಶುಕ್ರವಾರ ಪಂದ್ಯಕ್ಕೂ ಮೊದಲು ತಿಳಿಸಿದ್ದರು. ಅವರ ಜಾಗದಲ್ಲಿ ಮಾರ್ಕಸ್ ಸ್ಟೋಯ್ನಿಸ್ 3ನೇ ಕ್ರಮಾಂದಲ್ಲಿ ಆಡಿ 43 ರನ್ ಗಳಿಸಿದ್ದರು. ಇದೀಗ ಶನಿವಾರ ಅವರು ಎರಡು ಕನ್ಕ್ಯೂಷನ್ ಟೆಸ್ಟ್ನಲ್ಲಿ ಪಾಸ್ ಆಗಿದ್ದು ಮೂರನೇ ಪಂದ್ಯದಲ್ಲಿ ಆಸೀಸ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ 294 ರನ್ ಗಳಿಸಿತ್ತು. 295 ರನ್ ಟಾರ್ಗೇಟ್ ಬೆನ್ನತ್ತಿದ ಇಂಗ್ಲೆಂಡ್ ಜಾನಿ ಬ್ಯಾರ್ಸ್ಟೋವ್(84) ಅರ್ಧಶತಕ ಹಾಗೂ ಸ್ಯಾಮ್ ಬಿಲ್ಲಿಂಗ್ಸ್(118) ಅವರ ಶತಕದ ಹೊರತಾಗಿಯೂ 19 ರನ್ಗಳಿಂದ ಸೋಲು ಕಂಡಿತ್ತು.
ಎರಡನೇ ಪಂದ್ಯ ಸೆಪ್ಟೆಂಬರ್ 13ರಂದು ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ. ಸ್ಮಿತ್ ಆಗಮನದಿಂದ ಬಲಿಷ್ಠವಾಗಿರುವ ಆಸ್ಟ್ರೇಲಿಯಾ ತಂಡ 2ನೇ ಪಂದ್ಯವನ್ನು ಗೆದ್ದು ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆಯಾ ಎಂದು ಕಾದು ನೋಡಬೇಕಿದೆ.