ಸಿಡ್ನಿ: ಟೀಂ ಇಂಡಿಯಾದ ಯುವ ಆಟಗಾರ ಕೆ.ಎಲ್.ರಾಹುಲ್ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟರ್ ಸ್ಟೀವ್ ಸ್ಮಿತ್ ಮೆಚ್ಚುಗೆ ವ್ಯಕ್ತಪಿಡಿಸಿದ್ದು, ಅವರು ತಮ್ಮ ಬ್ಯಾಟಿಂಗ್ನಿಂದ ನನ್ನನ್ನು ಇಂಪ್ರೆಸ್ ಮಾಡಿದ್ದಾರೆ ಎಂದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಕೆ.ಎಲ್.ರಾಹುಲ್ ಓರ್ವ ಅದ್ಭುತ ಆಟಗಾರನಾಗಿದ್ದು, ಅವರ ಬ್ಯಾಟಿಂಗ್ ಶೈಲಿಯಿಂದ ನನ್ನನ್ನು ಇಂಪ್ರೆಸ್ ಮಾಡಿದ್ದಾರೆ ಎಂದು ಉತ್ತರಿಸಿದ್ದಾರೆ.
ಡಿಸೆಂಬರ್ 3ರಿಂದ ಉಭಯ ದೇಶಗಳ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಕೂಡ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕಾತುರರಾಗಿದ್ದೇವೆ ಎಂದಿದ್ದಾರೆ. ಇದೇ ವೇಳೇ ರವೀಂದ್ರ ಜಡೇಜಾ ಬಗ್ಗೆ ಕೂಡಾ ಮೆಚ್ಚುಗೆಯ ಮಾತಗಳನ್ನಾಡಿರುವ ಸ್ಮಿತ್, ಅವರೊಬ್ಬ ಅದ್ಭುತ ಕ್ಷೇತ್ರ ರಕ್ಷಕ. ಎಂ.ಎಸ್.ಧೋನಿ ಲೆಜೆಂಡ್ ಎಂದಿದ್ದಾರೆ.
2015ರಲ್ಲಿ ವಿಶ್ವಕಪ್ ಗೆದ್ದಿರುವುದು ನನ್ನ ಉತ್ತಮ ಕ್ಷಣಗಳಲ್ಲಿ ಒಂದು ಎಂದಿದ್ದು, ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಆಸೀಸ್ ಟೆಸ್ಟ್ ಸರಣಿಯಲ್ಲಿ 144 ರನ್ ಗಳಿಸಿದ್ದು ಟೆಸ್ಟ್ ಟೂರ್ನಿಯ ಅದ್ಭುತ ಬ್ಯಾಟಿಂಗ್ ಕ್ಷಣಗಳಲ್ಲಿ ಒಂದು ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ತಮ್ಮ ಬೆಸ್ಟ್ ಟೂರ್ನಮೆಂಟ್ಗಳಲ್ಲಿ ಒಂದು. ಇದರಲ್ಲಿ ವಿಶ್ವದ ಉತ್ತಮ ಆಟಗಾರರೊಂದಿಗೆ ಆಡಲು ಅವಕಾಶ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ರಾಹುಲ್ ದ್ರಾವಿಡ್ ಓರ್ವ ಜಂಟಲ್ಮ್ಯಾನ್ ಹಾಗೂ ಉತ್ತಮ ಆಟಗಾರ ಎಂದಿದ್ದಾರೆ.