ETV Bharat / sports

ಕಡಿಮೆ ಹಣಕ್ಕೆ ಸೇಲ್​.. ಐಪಿಎಲ್​ನಿಂದ ಹೊರಬರಲಿದ್ದಾರಾ ಸ್ಮಿತ್​..! - ಸ್ಮೀತ್ ಐಪಿಎಲ್ ಸೇಲ್​

ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಸ್ವೀವ್ ಸ್ಮಿತ್ ಪ್ರಸಕ್ತ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 2.2 ಕೋಟಿ ರೂಗೆ ಡೆಲ್ಲಿ ತಂಡದ ಪಾಲಾಗಿದ್ದಾರೆ.

Steve Smith
Steve Smith
author img

By

Published : Feb 20, 2021, 4:42 PM IST

ಸಿಡ್ನಿ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ಗೋಸ್ಕರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸಮನ್ ಸ್ವೀವ್ ಸ್ಮಿತ್​ ಕಡಿಮೆ ಹಣಕ್ಕೆ ಹರಾಜುಗೊಂಡಿದ್ದು, ಇದೇ ಕಾರಣಕ್ಕಾಗಿ ಅವರು ಟೂರ್ನಿಯಿಂದ ಹೊರಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಮೈಕಲ್​ ಕ್ಲಾರ್ಕ್​ ಇದೇ ವಿಷಯವಾಗಿ ಮಾತನಾಡಿದ್ದು, ಖಂಡಿತವಾಗಿ ಕಳೆದ ವರ್ಷ ಸ್ಮಿತ್​ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ ಇಷ್ಟೊಂದು ಕಡಿಮೆ ಹಣಕ್ಕೆ ಅವರು ಸೇಲ್​ ಆಗಿರುವುದು ನನಗೆ ಆಶ್ಚರ್ಯ ಮೂಡಿಸಿದೆ ಎಂದಿದ್ದಾರೆ. ಕಡಿಮೆ ಹಣಕ್ಕೆ ಸೇಲ್​ ಆಗಿರುವ ಕಾರಣ ಸ್ಮಿತ್​ ಟೂರ್ನಿಯಿಂದ ಹೊರಬರುವ ಸಾಧ್ಯತೆ ಇದೆ ಎಂದು ಕ್ಲಾರ್ಕ್​ ಹೇಳಿದ್ದು, ಇದೀಗ ಆಸ್ಟ್ರೇಲಿಯಾ ಆಟಗಾರರ ನಡೆ ಬಗ್ಗೆ ಇನ್ನಿಲ್ಲದ ಚರ್ಚೆ ಶುರುವಾಗಿದೆ.

ಓದಿ: 'ವಾತಿ ಕಮ್ಮಿಂಗ್' ಹಾಡಿಗೆ ಭರ್ಜರಿ ಸ್ಟೇಪ್ ಹಾಕಿದ ಅಶ್ವಿನ್​, ಹಾರ್ದಿಕ್​, ಕುಲ್ದೀಪ್​!

2018ರಲ್ಲಿ ಬರೋಬ್ಬರಿ 12.5 ಕೋಟಿ ರೂ.ಗೆ ರಾಜಸ್ಥಾನ ತಂಡಕ್ಕೆ ಸೇಲ್​ ಆಗಿದ್ದ ಸ್ಮಿತ್, 2020ರಲ್ಲಿ ತಂಡದ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದರು. ಆದರೆ ತಂಡ ಪಾಯಿಂಟ್​ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿತ್ತು. ಹೀಗಾಗಿ ತಂಡ ಅವರನ್ನ ಕೈಬಿಟ್ಟಿತ್ತು. ಕಳೆದ ಐಪಿಎಲ್​​ ಆವೃತ್ತಿಯಲ್ಲಿ 14 ಪಂದ್ಯಗಳಿಂದ 311ರನ್​ಗಳಿಕೆ ಮಾಡಿದ್ದ ಸ್ಮಿತ್​ ಮೂರು ಅರ್ಧಶತಕ ಸಿಡಿಸಿದ್ದರು. ಈ ಸಲ ಡೆಲ್ಲಿ ಕ್ಯಾಪಿಟಲ್​ 2.2 ಕೋಟಿ ರೂ. ನೀಡಿ ಅವರನ್ನ ಖರೀದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.