ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಮೂರು ಮಾದರಿಯ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಡಕ್ ಔಟ್ ಆಗಿದ್ದಾರೆ.
ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಸ್ಟಿವ್ ಸ್ಮಿತ್ ಆರ್ ಅಶ್ವಿನ್ ಬೌಲಿಂಗ್ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಭಾರತ ತಂಡದ ಅದ್ಭುತ ದಾಖಲೆಯೊಂದಿರುವ ಸ್ಮಿತ್ ಮೂರು ಮಾದರಿಯ ಕ್ರಿಕೆಟ್ನಿಂದ 46 ಇನ್ನಿಂಗ್ಸ್ನಲ್ಲಿ 2,660 ರನ್ಗಳಿಸಿದ್ದರು. ಇದೀಗ 47ನೇ ಇನ್ನಿಂಗ್ಸ್ನಲ್ಲಿ ಮೊದಲ ಬಾರಿಗೆ ಡಕ್ ಔಟ್ ಆಗಿದ್ದಾರೆ.
ಇದನ್ನು ಓದಿ: ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಶುಬ್ಮನ್ ಗಿಲ್, ಸಿರಾಜ್
ಸ್ಟಿವ್ ಸ್ಮಿತ್ ಭಾರತ ತಂಡದ ವಿರುದ್ಧ 12 ಶತಕ ಹಾಗೂ 6 ಅರ್ಧಶತಕ ಸಿಡಿಸಿದ್ದರು. ಅಷ್ಟೇ ಅಲ್ಲದೆ ಅವರು ಎಂಸಿಜಿಯಲ್ಲಿ 113.5 ಸರಾಸರಿಯಲ್ಲಿ ರನ್ಗಳಿಸಿದ್ದರು. ಈ ಕ್ರೀಡಾಂಗಣದಲ್ಲಿ ಅವರು 4 ಶತಕ ಕೂಡ ಸಿಡಿಸಿದ್ದರು. 4 ವರ್ಷಗಳ ಬಳಿಕ ಹಾಗೂ 52 ಟೆಸ್ಟ್ಗಳ ನಂತರ ಸ್ಟಿವ್ ಸ್ಮಿತ್ ಮೊದಲ ಬಾರಿಗೆ ಶೂನ್ಯಕ್ಕೆ ವಿಕೆಟ್ ಕಲ್ಪಿಸಿದ್ದಾರೆ.
ಈ ಸರಣಿಯಲ್ಲಿ ಸ್ಟಿವ್ ಸ್ಮಿತ್ ಮೊದಲ ಟೆಸ್ಟ್ನಲ್ಲೂ ಅಶ್ವಿನ್ ಬೌಲಿಂಗ್ನಲ್ಲಿ 1ರನ್ಗಳಿಸಿ ಔಟಾಗಿದ್ದರು.