ಹೈದರಾಬಾದ್: ಕಳೆದ ಸುಮಾರು ಒಂದು ವರ್ಷದಿಂದ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ.
![Steve Smith](https://etvbharatimages.akamaized.net/etvbharat/prod-images/4325363_t.jpg)
ಆ್ಯಶಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಬ್ಲೂ ಬಾಯ್ಸ್ ಕಪ್ತಾನನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ವಿಂಡೀಸ್ ವಿರುದ್ಧದ ಅಂತಿಮ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಶೂನ್ಯ ಸುತ್ತಿದ ಪರಿಣಾಮ ಒಂದು ಅಂಕದ ಲೆಕ್ಕಾಚಾರದಲ್ಲಿ ಸ್ಮಿತ್ ಅಗ್ರಸ್ಥಾನ ಲಗ್ಗೆ ಇಟ್ಟಿದ್ದಾರೆ.
-
Steve Smith has climbed to No.1 in the @MRFWorldwide ICC Test batting rankings, just one point ahead of Virat Kohli! 🔥
— ICC (@ICC) September 3, 2019 " class="align-text-top noRightClick twitterSection" data="
Details 👇 https://t.co/d4po5ePxwf
">Steve Smith has climbed to No.1 in the @MRFWorldwide ICC Test batting rankings, just one point ahead of Virat Kohli! 🔥
— ICC (@ICC) September 3, 2019
Details 👇 https://t.co/d4po5ePxwfSteve Smith has climbed to No.1 in the @MRFWorldwide ICC Test batting rankings, just one point ahead of Virat Kohli! 🔥
— ICC (@ICC) September 3, 2019
Details 👇 https://t.co/d4po5ePxwf
ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಲು ಕೊಹ್ಲಿ ಅಕ್ಟೋಬರ್ ತನಕ ಕಾಯಲೇಬೇಕು. ಮುಂದಿನ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಕೊಹ್ಲಿ ಅಗ್ರಸ್ಥಾನಕ್ಕೇರಲು ಅವಕಾಶ ಹೊಂದಿದ್ದಾರೆ.
-
Jasprit Bumrah has jumped 4️⃣ places to claim the No.3 spot in the @MRFWorldwide ICC Test bowling rankings 👏 pic.twitter.com/69fnrj4qu3
— ICC (@ICC) September 3, 2019 " class="align-text-top noRightClick twitterSection" data="
">Jasprit Bumrah has jumped 4️⃣ places to claim the No.3 spot in the @MRFWorldwide ICC Test bowling rankings 👏 pic.twitter.com/69fnrj4qu3
— ICC (@ICC) September 3, 2019Jasprit Bumrah has jumped 4️⃣ places to claim the No.3 spot in the @MRFWorldwide ICC Test bowling rankings 👏 pic.twitter.com/69fnrj4qu3
— ICC (@ICC) September 3, 2019
ಇನ್ನುಳಿದಂತೆ ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಅಗ್ರ ಹತ್ತರೊಳಗೆ ಕಾಣಿಸಿಕೊಂಡಿದ್ದಾರೆ. ಆರು ಟೆಸ್ಟ್ ಪಂದ್ಯವನ್ನಾಡಿರುವ ಶತಕವೀರ ಹನುಮ ವಿಹಾರಿ ಮೂವತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ.
![Bumrah](https://etvbharatimages.akamaized.net/etvbharat/prod-images/4325363_b.jpg)
ಕೆರಬಿಯನ್ನರ ನಾಡಿನಲ್ಲಿ ಹ್ಯಾಟ್ರಿಕ್ ಸೇರಿದಂತೆ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ ನಾಲ್ಕು ಸ್ಥಾನಗಳ ಏರಿಕೆ ಕಂಡು ಮೂರನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಭಾರಿ ಅಂತರದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.