ಲಂಡನ್: ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಸ್ಟಿವ್ ಸ್ಮಿತ್ ಪ್ರಸ್ತುತ ಸರಣಿಯಲ್ಲಿ 774 ರನ್ ಗಳಿಸುವ ಮೂಲಕ ಸರಣಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿ ಭಾರತದ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಪ್ರಸ್ತುತ ಸರಣಿಯಲ್ಲಿ 7 ಇನ್ನಿಂಗ್ಸ್ ಮಾತ್ರ ಆಡಿರುವ ಸ್ಟಿವ್ ಸ್ಮಿತ್ ಬರೋಬ್ಬರಿ 774 ರನ್ ಬಾರಿಸಿದ್ದಾರೆ. ಇದರಲ್ಲಿ 3 ಅರ್ಧಶತಕ, 2 ಶತಕ ಹಾಗೂ ಒಂದು ದ್ವಿಶತಕ ಸೇರಿದೆ. ಭಾರತದ ಸುನಿಲ್ ಗವಾಸ್ಕರ್ 1970/71 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 4 ಪಂದ್ಯಗಳಲ್ಲಿ 774 ರನ್ ಗಳಿಸಿದ್ದರು. ಇದೀಗ ಸ್ಮಿತ್ 4 ಪಂದ್ಯಗಳಲ್ಲಿ 7 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿ ಅಷ್ಟೇ ರನ್ ಗಳಿಸಿ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಸ್ಟಿವ್ ಸ್ಮಿತ್ ಪ್ರಸ್ತುತ ಸರಣಿಯಲ್ಲಿ 7 ಇನ್ನಿಂಗ್ಸ್ಗಳಲ್ಲಿ 144, 142, 92, 211, 82, 80 ಹಾಗೂ 23 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಮಾತ್ರ ಕನಿಷ್ಠ ಅರ್ಧಶತಕ ಬಾರಿಸುವಲ್ಲಿ ಸ್ಮಿತ್ ವಿಫಲರಾಗಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ 80+ ರನ್ ಬಾರಿಸಿ ದಾಖಲೆ ಬರೆದಿದ್ದರು.
-
GOT HIM!!!!
— England Cricket (@englandcricket) September 15, 2019 " class="align-text-top noRightClick twitterSection" data="
Scorecard/Videos: https://t.co/L5LXhA6aUm#Ashes pic.twitter.com/MxnyGXJKJG
">GOT HIM!!!!
— England Cricket (@englandcricket) September 15, 2019
Scorecard/Videos: https://t.co/L5LXhA6aUm#Ashes pic.twitter.com/MxnyGXJKJGGOT HIM!!!!
— England Cricket (@englandcricket) September 15, 2019
Scorecard/Videos: https://t.co/L5LXhA6aUm#Ashes pic.twitter.com/MxnyGXJKJG
89 ವರ್ಷಗಳ ದಾಖಲೆ ಮಿಸ್ ಮಾಡಿಕೊಂಡ ಸ್ಟಿವ್ ಸ್ಮಿತ್:
ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ಸ್ಮಿತ್ ಕುತ್ತಿಗೆಗೆ ಬಡಿದು ಗಂಭೀರ ಗಾಯಗೊಂಡಿದ್ದರಿಂದ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ಹಾಗೂ ಮೂರನೇ ಪಂದ್ಯದಿಂದ ಹೊರಬಿದ್ದಿದ್ದರು. ಒಂದು ವೇಳೆ ಆ ಮೂರು ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿ 200 ರನ್ ಬಾರಿಸಿದ್ದರೆ ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸ್ಮಿತ್ ಪಾಲಾಗುತ್ತಿತ್ತು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. 1930ರಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 7 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿ 974 ರನ್ ಗಳಿಸಿರುವುದು ಇಲ್ಲಿಯವರೆಗಿನ ವಿಶ್ವದಾಖಲೆಯಾಗಿದೆ.