ETV Bharat / sports

ಒಂದೇ ತಂಡದ ವಿರುದ್ಧ ಸತತ 10 ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ಸ್ಮಿತ್​! - ಆ್ಯಶಸ್​ ಟೆಸ್ಟ್ ಸರಣಿ

ಸ್ಟೀವ್‌ ಸ್ಮಿತ್‌ ಕಳೆದ 10 ಆ್ಯಶಸ್​ ಇನ್ನಿಂಗ್ಸ್​ನಲ್ಲಿ 239, 76, 102*, 83, 144, 142, 92, 211, 82, 80 ರನ್​ ಗಳಿಸಿದ್ದಾರೆ. ​ಮೊದಲ 4 ಅರ್ಧಶತಕಗಳು ಅವರು ನಿಷೇಧಕ್ಕೊಳಗಾಗುವ ಮುನ್ನ ನಡೆದಿದ್ದ ಆ್ಯಶಸ್​ ಸರಣಿಯಲ್ಲಿ ದಾಖಲಾಗಿದ್ದವು.

Steve Smith
author img

By

Published : Sep 14, 2019, 8:44 PM IST

ಲಂಡನ್​: ಆ್ಯಶಸ್​ ಟೆಸ್ಟ್​ ಸರಣಿಯ 5ನೇ ಪಂದ್ಯದಲ್ಲಿ 80 ರನ್ ​ಗಳಿಸಿದ ಸ್ಟೀವ್​ ಸ್ಮಿತ್​ ಇಂಗ್ಲೆಂಡ್ ವಿರುದ್ಧ ಸತತ 10 ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.

ಸ್ಮಿತ್‌ ಪ್ರಸ್ತುತ ಆ್ಯಶಸ್​ನ 6 ಇನ್ನಿಂಗ್ಸ್​​ ಸೇರಿದಂತೆ ಕಳೆದ 10 ಇನ್ನಿಂಗ್ಸ್​ನಲ್ಲಿ ಅರ್ಧಶತಕ ಅಥವಾ ಅರ್ಧಶತಕಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ 10 ಆ್ಯಶಸ್​ ಇನ್ನಿಂಗ್ಸ್​ನಲ್ಲಿ 239, 76, 102*, 83, 144, 142, 92, 211, 82, 80 ರನ್​ಗಳಿಸಿದ್ದಾರೆ. ಮೊದಲ 4 ಅರ್ಧಶತಕಗಳು ಇವರು ನಿಷೇಧಕ್ಕೊಳಗಾಗುವ ಮುನ್ನ ನಡೆದಿದ್ದ ಆ್ಯಶಸ್​ ಸರಣಿಯಲ್ಲಿ ಬಂದಿದ್ದವು.

ಸ್ಮಿತ್​ ಸತತ 10 ಅರ್ಧಶತಕ ದಾಖಲಿಸುವ ಮೂಲಕ ಪಾಕಿಸ್ತಾನದ ಇಂಜಮಾಮ್​ ಉಲ್​ ಹಕ್​ ದಾಖಲೆ ಅಳಿಸಿ ಹಾಕಿದ್ದಾರೆ. ಇಂಜಮಾಮ್​ ಕೂಡ ಇಂಗ್ಲೆಂಡ್​ ವಿರುದ್ಧವೇ ಸತತ 9 ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಾಧನೆ ಮಾಡಿದ್ದರು.

ಬಾಲ್​ ಟ್ಯಾಂಪರಿಂಗ್​ ಪ್ರಕರಣದ ನಂತರ ಇದೇ ಮೊದಲ ಟೆಸ್ಟ್​ ಸರಣಿ ಆಡುತ್ತಿದ್ದು, ಆಕರ್ಷಕ ಪ್ರದರ್ಶನ ತೋರುತ್ತಿದ್ದಾರೆ. ಪ್ರಸ್ತುತ ಸರಣಿಯಲ್ಲಿ 4 ಪಂದ್ಯಗಳಲ್ಲಿ 6 ಇನ್ನಿಂಗ್ಸ್​ ಮೂಲಕ 751 ರನ್​ ಗಳಿಸಿದ್ದಾರೆ. ಇದರಲ್ಲಿ 3 ಶತಕ 3 ಅರ್ಧಶತಕ ಸೇರಿದೆ. ಇದರಲ್ಲಿ ಇವರ ಗರಿಷ್ಠ ಸ್ಕೋರ್​ 211 ಆಗಿದೆ.
ಸತತ 6 ಪಂದ್ಯಗಳಲ್ಲಿ 80ಕ್ಕೂ ಹೆಚ್ಚು ರನ್​ಗಳಿಸುವ ಮೂಲಕ 76 ವರ್ಷಗಳ ದಾಖಲೆಯನ್ನು ಸರಿದೂಗಿಸಿದ್ದಾರೆ. ವೆಸ್ಟ್​ ಇಂಡೀಸ್​ನ ಎವರ್ಟ್​​ ವೀಕ್ಸ್​ ಕೂಡ ಸತತ 680+ ಸ್ಕೋರ್​ ದಾಖಲಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.