ಕೊಲಂಬೊ: ಶ್ರೀಲಂಕಾದ ಯಾರ್ಕರ್ ಸ್ಪೆಷಲಿಸ್ಟ್ ಮಾಲಿಂಗ ತಮ್ಮ 15 ವರ್ಷದ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಶುಕ್ರವಾರ ನಡೆದ ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ತಮ್ಮ15 ವರ್ಷಗಳ ಏಕದಿನ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದರು.
ಬಾಂಗ್ಲಾದೇಶದ ವಿರುದ್ಧ ಪಂದ್ಯ ಗೆದ್ದ ನಂತರ ನಿವೃತ್ತಿ ಘೋಷಿಸಿ ಮಾತನಾಡಿದ ಮಾಲಿಂಗ" ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಇದು ಸುಸಮಯ. ನನ್ನ ಸಮಯ ಮುಗಿದಿದೆ. ನಾನು 15 ವರ್ಷದಿಂದ ಏಕದಿನ ಕ್ರಿಕೆಟ್ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದು, ಇಲ್ಲಿಂದ ಹೊರಹೋಗಲು ಇದು ಸರಿಯಾದ ಸಮಯ. ಕೊನೆಯ ಪಂದ್ಯದಲ್ಲಿ ಗೆಲುವು ನನಗೆ ಬಹಳ ಮಹತ್ವದ್ದಾಗಿತ್ತು. ನನ್ನ ವೃತ್ತಿ ಜೀವನದುದ್ದಕ್ಕೂ ತಂಡಕ್ಕೆ ಉತ್ತಮ ಸೇವೆ ನೀಡಲು ಪ್ರಯತ್ನಿಸಿದ್ದೇನೆ. ನಮ್ಮ ತಂಡದಲ್ಲಿ ಯುವ ಬೌಲರ್ಗಳಿಂದ ಕೂಡಿದ್ದು, ಎಲ್ಲರೂ ಪಂದ್ಯವನ್ನು ಗೆದ್ದುಕೊಡುವ ಪ್ರದರ್ಶನ ನೀಡಲಿ ಎಂದು ನಾನು ಕೋರುತ್ತೇನೆ" ಎಂದರು.
-
225 ODIs
— ICC (@ICC) July 27, 2019 " class="align-text-top noRightClick twitterSection" data="
335 wickets
8 five-fors
1 incredible bowling action
What an ODI career 👏 pic.twitter.com/Akr2gJrPqh
">225 ODIs
— ICC (@ICC) July 27, 2019
335 wickets
8 five-fors
1 incredible bowling action
What an ODI career 👏 pic.twitter.com/Akr2gJrPqh225 ODIs
— ICC (@ICC) July 27, 2019
335 wickets
8 five-fors
1 incredible bowling action
What an ODI career 👏 pic.twitter.com/Akr2gJrPqh
ಲಸಿತ್ ಮಾಲಿಂಗ ಜುಲೈ 17 2004 ರಲ್ಲಿ ಯುಎಇ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 15 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಯಾರ್ಕರ್ ಕಿಂಗ್ 226 ಪಂದ್ಯಗಳನ್ನಾಡಿದ್ದು, 338 ವಿಕೆಟ್ ಪಡೆದಿದ್ದಾರೆ. 38ಕ್ಕೆ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಮಾಲಿಂಗ ತಮ್ಮ ವೃತ್ತಿ ಜೀವನದಲ್ಲಿ 8 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 30 ಟೆಸ್ಟ್ ಪಂದ್ಯಗಳಲ್ಲಿ 101 ವಿಕೆಟ್, 73 ಟಿ20 ಪಂದ್ಯಗಳಲ್ಲಿ 97 ವಿಕೆಟ್ ಪಡೆದಿದ್ದಾರೆ.
38 ವರ್ಷದ ಮಾಲಿಂಗ 2016ರಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆ.